ಸೂರತ್: ಇಲ್ಲಿನ ಸ್ಥಳೀಯ ರಿಯಲ್ ಎಸ್ಟೇಟ್ ಕಂಪನಿಯಾದ ಪಿ ಪಿ ಸವನಿ ಗ್ರೂಪ್ ಸೋಮವಾರ ಸಾಮೂಹಿಕ ವಿವಾಹ ಆಯೋಜಿಸಿ, ಅಪ್ಪನಿಲ್ಲದ 236 ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ನೀಡಿದ್ದಾರೆ.

236 ವಧುಗಳಲ್ಲಿ ಐವರು ಮುಸ್ಲಿಂ ಮತ್ತು ಒಬ್ಬ ಕ್ರಿಶ್ಚಿಯನ್ ವಧು ಇದ್ದಾಳೆ, ಸಾಮೂಹಿಕ ವಿವಾಹದಲ್ಲಿ ಸವನಿ ಗ್ರೂಪ್ನ ಕುಟುಂಬದ ಇಬ್ಬರು ಯುವಕರು ಕೂಡಾ ಮದುವೆಯಾಗಿದ್ದಾರೆ.

ಹೀಗೊಂದು ಸಾಮೂಹಿಕ ವಿವಾಹ ಆಯೋಜನೆ ಮಾಡಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ನನ್ನ ಮಗ ಮಿಥುಲ್ ಮತ್ತು ನನ್ನ ಮಾವನ ಮಗ ಜಯ್ ಕೂಡಾ ಇದೇ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎಂದು ಸವನಿ ಗ್ರೂಪ್ ಮಾಲೀಕ ಮಹೇಶ್ ಸವನಿ ಹೇಳಿದ್ದಾರೆ.

ಇಲ್ಲಿ ವಿವಾಹವಾದ ಹೆಣ್ಣು ಮಕ್ಕಳಲ್ಲಿ 5 ಮಂದಿ ಮಹಾರಾಷ್ಟ್ರ, 3 ಮಂದಿ ರಾಜಸ್ತಾನ, ಬಿಹಾರದಿಂದ ಒಬ್ಬರು, ಇನ್ನುಳಿದವರೆಲ್ಲರೂ ಗುಜರಾತ್ನವರೇ ಆಗಿದ್ದಾರೆ.

ಕನ್ಯಾದಾನದ ವೇಳೆ ನಾವು ಅವರಿಗೆ ಬಟ್ಟೆ, ಆಭರಣ, ಪಾತ್ರೆ ಮತ್ತು 5 ಗೃಹೋಪಕರಣಗಳನ್ನು ನೀಡಿದ್ದೇವೆ ಎಂದು ಮಹೇಶ್ ಹೇಳಿದ್ದಾರೆ.

ಸವನಿ ಕುಟುಂಬವು ಕಳೆದ 5 ವರ್ಷಗಳಿಂದ ಈ ರೀತಿ ಸಾಮೂಹಿಕ ವಿವಾಹ ಆಯೋಜಿಸಿಕೊಂಡು ಬಂದಿದೆ.

ಇಲ್ಲಿಯವರೆಗೆ ಅಪ್ಪನಿಲ್ಲದ 708 ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಟ್ಟಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆಯಿದೆ ಅಂತಾರೆ ಮಹೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.