ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದ್ ತಂಡಗಳಿಂದ ಸಾಂಸ್ಕೃತಿಕ ಪೈಪೋಟಿ

ಮೂರನೇ ವರ್ಷದ ಕೊಡವ ಮಂದ್ ನಮ್ಮೆ- 2017 ಕಾರ್ಯಕ್ರಮ; ಅದ್ಧೂರಿ ಮೆರವಣಿಗೆ
Last Updated 2 ಜನವರಿ 2017, 11:15 IST
ಅಕ್ಷರ ಗಾತ್ರ

ನಾಪೋಕ್ಲು: ಯುನೈಟೆಡ್ ಕೊಡವ ಆರ್ಗನೈಜೇಶನ್‌ನ ವತಿಯಿಂದ ಮೂರ್ನಾಡು ಪಾಂಡಾಣೆ ನಾಡ್ ಮಂದ್‌ನಲ್ಲಿ ಮೂರನೇ ವರ್ಷದ ಕೊಡವ ಮಂದ್ ನಮ್ಮೆ- 2017 ಕಾರ್ಯ ಕ್ರಮದಲ್ಲಿ ವಿವಿಧ ಗ್ರಾಮದ ಮಂದ್ ತಂಡಗಳ ನಡುವೆ ಸಾಂಸ್ಕೃತಿಕ ಪೈಪೋಟಿ ವಿಜೃಂಭಣೆಯಿಂದ ಜರುಗಿತು.

ಮೂರ್ನಾಡು ವಿದ್ಯಾಸಂಸ್ಥೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಕೊಡವ ಮಂದ್ ನಮ್ಮೆಯಲ್ಲಿ ಕೊಡವ ಜಾನಪದ ನೃತ್ಯಗಳ ಪೈಪೋಟಿ ಗಮನ ಸೆಳೆಯಿತು. ಕೋಲಾಟ, ಪರೆಯಕಳಿ, ಬಾಳೋ ಪಾಟ್, ವಾಲಗತಾಟ್, ಉಮ್ಮತಾಟ್, ಬೊಳಕಾಟ್, ಚೌರಿಯಾಟ್ ಪೈಪೋಟಿ ಗಳು ನಡೆದವು.

ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮ ವನ್ನು ಪಾಂಡಾಣೆ ತಕ್ಕರಾದ ಪಳಂಗಂಡ ಗಪ್ಪು ಗಣಪತಿ ಉದ್ಘಾಟಿಸಿ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಉಷಾದೇವಮ್ಮ ಉಮ್ಮತಾಟ್ ಆಡಿ ಉಮ್ಮತಾಟ್ ಪೈಪೋಟಿಗೆ ಚಾಲನೆ ನೀಡಿದರು. ಬೊಳಕಾಟ್ ಪೈಪೋಟಿಗೆ ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟೀರ ಜಿ. ಮಾದಪ್ಪ ಚಾಲನೆ ನೀಡಿದರು.

ಸಾಂಸ್ಕೃತಿಯ ಪೈಪೋಟಿಯಲ್ಲಿ 45ನಾಡ್ ಮಂದ್ ತಂಡಗಳು ಆಗಮಿಸಿ ವಿವಿಧ ಜಾನಪದ ಕಲೆಗಳ ಪ್ರದರ್ಶನ ನೀಡಿ ಪೈಪೋಟಿ ನಡೆಸಿದರು. ಸುಮಾರು 8ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕೊಡವ ಮಂದ್ ನಮ್ಮೆಗೆ ಸಾಕ್ಷಿಯಾದರು.

ಕ್ರೀಡಾಪಟು ತೀತಿಮಾಡ ಅರ್ಜುನ್ ದೇವಯ್ಯ ಮಾತನಾಡಿ, ಮಂದ್ ನಮ್ಮೆ ಗಳು ಆಚರಣೆ ಕ್ರಮೇಣ ಆಚರಣೆ ನಿಂತು ಹೋಗುವ ಪರಿಸ್ಥಿತಿಗೆ ತಲುಪಿತ್ತು. ಆದರೆ, ಈಗ ಯುಕೊ ಸಂಘಟನೆ ಮಂದ್‌ಗಳನ್ನು ಪುನಶ್ಚೇತನ ನೀಡುತ್ತಿದೆ. ಪ್ರತಿ ಗ್ರಾಮ ದಲ್ಲೂ ಕ್ಲಬ್‌ಗಳಲ್ಲಿ ಸೇರುವಂತೆ ನಾಡ್ ಮಂದ್‌ನಲ್ಲಿ ಸೇರುವಂತಾಗಬೇಕು ಆಗ ಸಕರಾತ್ಮಕ ಭಾವನೆಗಳು ಬೆಳೆಯುತ್ತದೆ ಭಕ್ತಿ ಇದ್ದಲ್ಲಿ ಶಕ್ತಿ ತಾನಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತಿ ಆಚಾರ ವಿಚಾರಗಳನ್ನು ಬೆಳೆಸುವ ಸಂಘಟನೆಗಳಿಗೆ ಇಂದು ಪ್ರತಿ ಯೊಬ್ಬರೂ ಪ್ರೋತ್ಸಾಹ ನೀಡ ಬೇಕಾಗಿದೆ. ಕೊಡವರು ಎಲ್ಲೇ ಇದ್ದರೂ ಕೊಡವರಾಗಿದ್ದುಕೊಂಡು ಕೊಡವ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಪ್ರಯತ್ನ ಪಡಬೇಕು ಎಂದು ಹೇಳಿದರು.

ಪಾಂಡಾಣೆ ನಾಡ್ ಮಂದ್ ತಕ್ಕ ರಾದ ಪಳಂಗಂಡ ಗಪ್ಪು ಗಣಪತಿ ಸಾಂಸ್ಕೃತಿಕ ಪೈಪೋಟಿಗಳಿಗೆ ಗುಂಡು ಹೊಡೆಯುವುದರ ಮುಖಾಂತರ ಚಾಲನೆ ನೀಡಿದರು. ಯುಕೊ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಡಾ. ಕಾಳಿಮಾಡ ಶಿವಪ್ಪ, ಮಡೆ ಯಂಡ ಪೊನ್ನಪ್ಪ, ಪಳಂಗಂಡ ಗಣೇಶ್, ಬಾಚೆಟ್ಟೀರ ಮಾದಪ್ಪ ಇತರರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಪಾಂಡಾಣೆ ನಾಡ್ ಮಂದ್‌ಗೆ ಸಂಬಂಧಿಸಿದ ನಾಡ ತಕ್ಕ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಮಕ್ಕಳು, ಮಹಿಳೆಯರು, ಪುರುಷರು ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆಗೆ ಮೆರುಗು ನೀಡಿದರು. ಚೇರಳಿನಾಡ್ ಕಡಚಿಬಾಣೆ, ಪುತ್ತರಿ ಕೋಲ್ ಮಂದ್, ಅರಗುಂದ ಕೇರಿ ಮಂದ್ ಕಿಗ್ಗಾಲು, ಪರೋಡಿ ಊರುಮಂದ್, ಮೂರ್ನಾಡು ಬಾಡಗ, ಇಗ್ಗುತ್ತಪ್ಪ ಕೊಡವಕೂಟ, ಆದಿ ಶ್ರೀ ಕಾವೇರಿ ಕೊಡವ ಸಂಘ, ಕಾಂತೂರು, ಐಕೊಳ ನಾಡ್‌ಮಂದ್, ತೂಚಮಕೇರಿ ಊರ್‌ಮಂದ್, ಕೊಡವ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ದುಡಿ ಕೊಟ್ಟ್ ಹಾಡು, ಕಪಾಳ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT