ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಕಟ್ಟಡಗಳ ಪರವಾನಗಿ ಅಮಾನತು

ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದ ಆರೋಪ
Last Updated 5 ಜನವರಿ 2017, 6:48 IST
ಅಕ್ಷರ ಗಾತ್ರ

ಮಂಗಳೂರು: ಶುಚಿತ್ವ ಕಾಪಾಡದಿರು ವುದು ಹಾಗೂ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾದ ಆರೋಪದ ಮೇಲೆ ಸ್ಟೇಟ್‌ ಬ್ಯಾಂಕ್‌ ಬಳಿಯ ಖಾಸಗಿ ವಾಣಿಜ್ಯ ಸಂಕೀರ್ಣ ಹಾಗೂ ದೇರೆಬೈ ಲ್‌ನ ಬಹುಮಡಿ ಅಪಾರ್ಟ್‌ಮೆಂಟ್‌ ಒಂದರ ಪರವಾನಗಿಯನ್ನು ಅಮಾನ ತುಪಡಿಸಿ ಮಹಾನಗರ ಪಾಲಿಕೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಬುಧವಾರ ಆದೇಶ ಹೊರಡಿಸಿದೆ. ಜೊತೆಗೆ ಕಟ್ಟಡಗಳ ಮಾಲೀಕರಿಗೆ ತಲಾ ₹ 15 ಸಾವಿರ ದಂಡ ವಿಧಿಸಲಾಗಿದೆ.

ಪಾಲಿಕೆಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ನೇತೃತ್ವದ ತಂಡ ಬುಧವಾರ ಎರಡೂ ಕಟ್ಟಡಗಳಿಗೆ ಭೇಟಿನೀಡಿ ತಪಾಸಣೆ ನಡೆಸಿತು.ನೆಲ್ಲಿಕಾಯಿ ರಸ್ತೆಯಲ್ಲಿರುವ ನಾಲ್ಕು ಮಹಡಿಗಳ ಖಾಸಗಿ ವಾಣಿಜ್ಯ ಸಂಕೀ ರ್ಣದ ನೆಲ ಅಂತಸ್ತಿನಲ್ಲಿ ಕೊಚ್ಚೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿರು ವುದು ಕಂಡುಬಂತು. ಕಟ್ಟಡದ ಎಲ್ಲಾ ಮಹಡಿಗಳಲ್ಲೂ ಸೊಳ್ಳೆಗಳು ಗುಂಪು ಗುಂಪಾಗಿ ಹಾರಾಡುತ್ತಿರುವುದು ತಂಡದ ಗಮನಕ್ಕೆ ಬಂತು.

ನಂತರ ದೇರೆಬೈಲ್‌ನ ಅಪಾರ್ಟ್‌ ಮೆಂಟ್‌ಗೆ ಈ ತಂಡ ಭೇಟಿ ನೀಡಿತು. ಕಟ್ಟಡದ ಮೊದಲ ಅಂತಸ್ತಿನಲ್ಲಿ ನೀರು ನಿಂತಿದ್ದು, ಅಲ್ಲಿಯೂ ಸೊಳ್ಳೆಗಳ ಉತ್ಪತ್ತಿ ಆಗುತ್ತಿರುವುದು ಖಚಿತವಾಯಿತು. ಸ್ವಚ್ಛತೆ ಕಾಪಾಡುವಂತ ಹಾಗೂ ಸೊಳ್ಳೆ ಗಳ ಉತ್ಪತ್ತಿ ತಡೆಯುವಂತೆ ಕಟ್ಟಡದ ಮಾಲೀಕರಿಗೆ ಐದು ಬಾರಿ ಪಾಲಿಕೆ ಯಿಂದ ನೋಟಿಸ್‌ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಎರಡೂ ಕಟ್ಟಡಗಳ ಪರವಾನಗಿ ಅಮಾ ನತಿಗೆ ಸಹಾಯಕ ನಗರ ಯೋಜನಾಧಿ ಕಾರಿ ಮಂಜುನಾಥ ಸ್ವಾಮಿ ಅವರಿಗೆ ಆದೇಶಿಸಿದ ಕವಿತಾ ಸನಿಲ್, ದಂಡ ವಿಧಿಸುವಂತೆಯೂ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT