ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ವಿನ್ಯಾಸದ ವಿಮಾನ ನಿಲ್ದಾಣ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಹಕ್ಕಿಯಂತೆ ಹಾರಬೇಕು ಎನ್ನುವ ಮಾನವನ ಆಸೆಯನ್ನು ನನಸು ಮಾಡಿದ್ದು ವಿಮಾನ. ಬಾನಂಗಳದಲ್ಲಿ ಹಾರುತ್ತಾ, ಮೋಡಗಳ ಲೋಕದಲ್ಲಿ ತೇಲುತ್ತಾ ಸಾಗುವ ವಿಮಾನಗಳ ಆಕಾರವನ್ನು ಹೋಲುವ ಮೇಲ್ಚಾವಣಿ ಹೊಂದಿದ ವಿಮಾನ ನಿಲ್ದಾಣವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಎರಡೂ ರೆಕ್ಕೆಗಳನ್ನು ಚಾಚಿ ಆಗಸದಲ್ಲಿ ಹಾರುತ್ತಿರುವಂತೆ ಇದು ಕಾಣುತ್ತದೆ.

ಸುಮಾರು ₹200 ಕೋಟಿ ವೆಚ್ಚದ ವಿಮಾನ ನಿಲ್ದಾಣ ಇರುವುದು ಆಶಗ್‌ಬಾತ್‌ನಲ್ಲಿ. ತುರ್ಕಮೆನಿಸ್ತಾನ್‌ ನಲ್ಲಿರುವ ಅಶಗ್‌ಬಾತ್‌ನಲ್ಲಿ ಇತ್ತೀಚೆಗಷ್ಟೇ ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೇವೆಗೆ ಮುಕ್ತಗೊಳಿಸಲಾಗಿದೆ. ಹಾರುವ ಹಕ್ಕಿಯ ಆಕಾರದಲ್ಲಿರುವ ಮೇಲ್ಚಾವಣಿ ಇಲ್ಲಿಯ ವಿಶೇಷ. ಇದು ರಾಷ್ಟ್ರದ ಪ್ರಗತಿಯ ಸಂಕೇತವೂ ಹೌದು ಎನ್ನುವುದು ಅವರ ನಂಬಿಕೆ.

ತುರ್ಕಮೆನಿಸ್ತಾನ್‌ನ ರಾಜಧಾನಿಯೂ ಆಗಿರುವ ಅಶಗ್‌ಬಾತ್‌ನಲ್ಲಿ ಈ ವಿಮಾನನಿಲ್ದಾಣವಿದ್ದು, ಗಂಟೆಗೆ 1600 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 2015ರಲ್ಲಿ ಇಲ್ಲಿಗೆ ಒಂದು ಲಕ್ಷದ ಐದು ಸಾವಿರ ಪ್ರಯಾಣಿಕರು ಭೇಟಿ ನೀಡಿದ್ದಾರಾದರೂ ಇಲ್ಲಿಗೆ ಬರಲು ವೀಸಾ ಸಿಗುವುದು ತೀರಾ ಕಷ್ಟವಂತೆ.

ಅಶಗ್‌ಬಾತ್‌ನಲ್ಲಿರುವ ಈ ಅಂತರರಾಷ್ಟ್ರೀಯ ವಿಮಾನನಿಲ್ದಾಣ ತುರ್ಕಮೆನಿಸ್ತಾನ್‌ನಲ್ಲಿರುವ ಮೂರು ವಿಮಾನ ನಿಲ್ದಾಣಗಳಲ್ಲಿ ಒಂದು. ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ಈ ನಿಲ್ದಾಣದ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಿ ಹೊಸ ವಿನ್ಯಾಸ ಮಾಡಲಾಗಿದೆ. 

ವಿನೂತನ ಶೈಲಿಯ ಕಟ್ಟಡಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಅಶಗ್‌ಬಾತ್‌ನಲ್ಲಿ ಪ್ರಕಾಶನ ಸಂಸ್ಥೆಯೊಂದು ಪುಸ್ತಕದ ಪುಟ ತೆರೆದ ವಿನ್ಯಾಸದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT