ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 9–1–1967

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು ವಾರ್ಸಿಟಿ ದಕ್ಷಿಣದ ಕೇಂದ್ರ ಸಂಸ್ಥೆ ಆಗಲೆಂದು ಶ್ರೀ ಗೋಕಾಕ್‌
ಬೆಂಗಳೂರು, ಜ. 8–
ಭಾರತದಲ್ಲಿ ಫೆಡರಲ್‌ ಮಾದರಿಯಲ್ಲಿರುವ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾದ ಬೆಂಗಳೂರು ವಿಶ್ವವಿದ್ಯಾನಿಲಯ ದಕ್ಷಿಣದಲ್ಲಿ ಕೇಂದ್ರದಿಂದ ನಡೆಸುವ ಪ್ರಥಮ ವಿಶ್ವವಿದ್ಯಾನಿಲಯವಾಗುವ ದಿನ ಬೇಗನೆ ಬರಲೆಂದು ಉಪಕುಲಪತಿ ಪ್ರೊ. ವಿ.ಕೆ. ಗೋಕಾಕ್‌ ಅವರು ಇಂದು ಹಾರೈಸಿದರು.

ಘಟಿಕೋತ್ಸವ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, ದೆಹಲಿ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳು ಮಾತ್ರ ಫೆಡರಲ್‌ ಮಾದರಿಯಲ್ಲಿರುವುದನ್ನು ಪ್ರಸ್ತಾಪಿಸಿದರು.

ಸುಮಾರು 19 ಸಾವಿರ ವಿದ್ಯಾರ್ಥಿಗಳು ಮತ್ತು ಒಂದು ಸಾವಿರ ಅಧ್ಯಾಪಕ ವರ್ಗದವರಿಂದ ತನ್ನ ಯಾತ್ರೆಯನ್ನು ಎರಡು ವರ್ಷಗಳ ಹಿಂದೆ ಪ್ರಾರಂಭಿಸಿದ ಬೆಂಗಳೂರು ವಿಶ್ವವಿದ್ಯಾನಿಲಯ ತನ್ನ ನಾಯಕ ಡಾ. ಬಿ.ಡಿ. ಲ್ಯರೋಯ ಅವರನ್ನು ಕಳೆದುಕೊಂಡ ಪ್ರಸಂಗವನ್ನು ಅವರು ಸ್ಮರಿಸಿದರು.

ಜನವರಿ 14 ರಿಂದ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸ್ವೀಕಾರ
ನವದೆಹಲಿ, ಜ. 8–
ಪಾರ್ಲಿಮೆಂಟರಿ ಕ್ಷೇತ್ರಗಳಿಗೆ 1967ರ ಏಪ್ರಿಲ್‌ 1ನೆ ತಾರೀಖಿನ ಹೊತ್ತಿಗೆ ಚುನಾವಣೆಗಳನ್ನು ಮುಗಿಸುವಂತೆ ಕರೆ ನೀಡಿ ಜನವರಿ 13 ರಂದು ಪ್ರಕಟಣೆ ಹೊರಡಿಸುವಂತೆ ರಾಷ್ಟ್ರಪತಿಗೆ ಚುನಾವಣಾ ಮಂಡಳಿಯು ಶಿಫಾರಸು ಮಾಡಿದೆಯೆಂದು ತಿಳಿದು ಬಂದಿದೆ. ಜನವರಿ 14ರಿಂದ ಅಭ್ಯರ್ಥಿಗಳ ನಾಮಪತ್ರಗಳ ಸ್ವೀಕಾರ ಆರಂಭ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT