ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಕುಬಿಟ್ಟ ಜಿಲ್ಲಾ ಗ್ರಂಥಾಲಯದ ಗೋಡೆಗಳು!

Last Updated 9 ಜನವರಿ 2017, 6:30 IST
ಅಕ್ಷರ ಗಾತ್ರ

ಯಾದಗಿರಿ: ಮೊಬೈಲ್ ಕ್ರಾಂತಿಯಾದ ಮೇಲೆ ಪುಸ್ತಕ ಹಿಡಿಯುವ ಕೈಗಳು ತೀರಾ ವಿರಳವಾಗಿವೆ. ಜ್ಞಾನಾರ್ಜನೆಗೆ ಈಗ ಅತ್ಯಾಧುನಿಕ ಉಪಕರಣಗಳ ಲಭ್ಯತೆ ಇದೆ. ಇಮೇಲ್‌, ಟ್ವಿಟರ್‌, ಮೆಸೇಜ್‌ ನಂತಹ ಸಂಸ್ಕೃತಿ ಬಂದ ಮೇಲೆ ಪುಸ್ತಕ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಸಂಪೂರ್ಣ ಕಾಗದ ಬಳಕೆ ನಾಗರಿಕತೆಯೂ ಇಲ್ಲವಾಗುತ್ತಿರುವ ಈ ಹೊತ್ತಿನಲ್ಲಿ ನಗರದ ಕನಕಚೌಕ್‌ ಬಳಿಯ ಗ್ರಂಥಾಲಯದಲ್ಲಿ 2,796 ಮಂದಿ ಓದುಗರು ಹೆಸರು ನೋಂದಾಯಿಸಿದ್ದಾರೆ.

ನಿತ್ಯ ಈ ಓದುಗ ವಲಯ ಆ ಗ್ರಂಥಾಲಯವನ್ನೇ ಆಶ್ರಯಿಸಿದೆ. ಇಂಥ ಗ್ರಂಥಾಲಯ ಕಟ್ಟಡ ಈಗ ಶಿಥಿಲಾವಸ್ಥೆ ತಲುಪಿದೆ. ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಕಟ್ಟಡ ಕುಸಿಯುವ ಭೀತಿ ನಿತ್ಯ ಓದುಗರನ್ನು ಕಾಡುತ್ತಿದೆ.

ಸರ್ಕಾರಿ ಜ್ಯೂನಿಯರ್‌ ಕಾಲೇಜು ಸೇರಿದಂತೆ ನಗರದ ಬಹುತೇಕ ಶಾಲಾ –ಕಾಲೇಜು ಈ ಗ್ರಂಥಾಲಯದ ಹತ್ತಿರದಲ್ಲೇ ಇರುವುದರಿಂದ ಕಾಲೇಜು ವಿದ್ಯಾರ್ಥಿಗಳು ನಿಯತಕಾಲಿಕ ಓದಲು ಗ್ರಂಥಾಲಯಕ್ಕೆ ಬರುತ್ತಾರೆ. ಅಲ್ಲದೇ ಪದವಿ ವಿದ್ಯಾರ್ಥಿಗಳಿಗಾಗಿಯೇ ಈ ಗ್ರಂಥಾಲಯದಲ್ಲಿ ಪಠ್ಯಪುಸ್ತಕ ಕೂಡ ಸಿಗುತವಂತಹ ವ್ಯವಸ್ಥೆ ಮಾಡಲಾಗಿದೆ. ಬಿಬಿಎ, ಬಿಸಿಎ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿಗಳು ಈ ಗ್ರಂಥಾಲವನ್ನೇ ನೆಚ್ಚಿಕೊಂಡಿದ್ದಾರೆ.

ಡಾ.ಶಿವರಾಮ ಕಾರಂತ, ದ.ರಾ.ಬೇಂದ್ರೆ, ಪು.ತಿ.ನ, ಕುವೆಂಪು, ತರಾಸು, ಗೋಪಾ ಲಕೃಷ್ಣ ಅಡಿಗ, ಎಸ್‌.ಎಲ್.ಭೈರಪ್ಪ, ಯು.ಆರ್. ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯ ಸಂಪುಟಗಳು ಲಭ್ಯ ಇರುವುದರಿಂದ ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಚ್ಚಿನ ಓದಿಗಾಗಿ ಗ್ರಂಥಾಲಯಕ್ಕೆ ಬರುತ್ತಾರೆ.

ಮಕ್ಕಳ, ಜಾನ    ಪದೀಯ, ಸಂಶೋಧನಾ ಗ್ರಂಥಗಳು, ಇಂಗ್ಲಿಷ್‌ ಸಾಹಿತ್ಯ ಕೃತಿಗಳು ಸಹ ಇಲ್ಲಿನ ಗ್ರಂಥ ಭಂಡಾರ ಒಳಗೊಂಡಿದೆ. ಈಚೆಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಮಾಸಿಕ, ತ್ರೈಮಾಸಿಕಗಳು ಇಲ್ಲಿ ಲಭ್ಯವಾಗುವುದರಿಂದ ಸದಾ ಓದುಗರ ದಂಡು ಇಲ್ಲಿರುತ್ತದೆ. ಆದರೆ, ಎಲ್ಲರ ಭಯಭೀತಿ ಒಂದೇ –ಕಟ್ಟಡ ಚಾವಣಿ ಕುಸಿದೀತೆಂಬುದು!

ನಿರ್ಮಾಣಗೊಂಡು 25 ಸಂವತ್ಸರ ಕಳೆದಿರುವ ಗ್ರಂಥಾಲಯ ಕಟ್ಟಡದ ಚಾವಣಿಗೆ ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ಪುಸ್ತಕಗಳನ್ನು ತಾಡಪಾಲ್‌ ಮುಚ್ಚಿ ಕಾಪಾಡಾಡುವಂತಹ ಸ್ಥಿತಿ ಇಲ್ಲಿದೆ. ರಜೆ ಇದ್ದರೂ ಮಳೆ ಗಾಲದಲ್ಲಿ ಪುಸ್ತಕಗಳನ್ನು ತಾಡಪಾಲು ಹೊದಿಸಿ ರಕ್ಷಿ ಸಲಿಕ್ದಾದರೂ ಕಚೇರಿ ಬರಬೇಕಾಗುತ್ತದೆ’ ಎಂದು ಇಲ್ಲಿನ ಗ್ರಂಥಾ ಲಯ ಸಹಾಯಕಿ ನಿಂಗಮ್ಮ ಸಜ್ಜನ್ ಅಲ ವತ್ತುಕೊಳ್ಳುತ್ತಾರೆ.

ಗ್ರಂಥಾಲಯದ ಕಾಂಪೌಂಡಿಗೆ ಸೂಕ್ತ ಗೇಟಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಗ್ರಂಥಾಲಯ ಆಂಗಳದಲ್ಲೇ ಕೆಲವರು ರಾತ್ರಿ ಸಂದರ್ಭದಲ್ಲಿ ಶೌಚ ಮಾಡಿ ಗ್ರಂಥಾಲಯ ವಾತಾವರಣವನ್ನು ಅಸ ಹನೀಯವಾಗಿಸುತ್ತಿದ್ದಾರೆ ಎಂದು ಅವರು ದೂರುತ್ತಾರೆ.

ಹೊಸಕಟ್ಟಡ ನಿರ್ಮಿಸಬೇಕು
ಯಾದಗಿರಿ: ‘ಗ್ರಂಥಾಲಯ ಕಟ್ಟಡ ದುರಸ್ತಿಗೆ ಇಲಾಖೆ ₹ 2 ಲಕ್ಷ ಅನುದಾನ ನೀಡಿದೆ. ಆದರೆ, ದುರಸ್ತಿ ಮಾಡಿಸಲಿಕ್ಕೆ ಆಗದಷ್ಟು ಕಟ್ಟಡ ಶಿಥಿಲಗೊಂಡಿದೆ. ಹಾಗಾಗಿ, ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯ ನಗರದ ಡಿಸಿ ಕಚೇರಿ ಎದುರು ನೂ ತನ ಗ್ರಂಥಾಲಯ ಆರಂಭಿ ಸಲಾಗಿದೆ’ ಎಂದು ಪ್ರಭಾರ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಎಸ್. ರೆಬೆನಾಳ್ ಹೇಳುತ್ತಾರೆ.


‘ಪುಸ್ತಕ ಸಂಸ್ಕೃತಿ ಉಳಿವಿಗೆ ಗ್ರಂಥಾಲಯಗಳೇ ಪ್ರಮು ಖ ಕಾರಣ. ಹಾಗಾಗಿ, ಸರ್ಕಾರ ಗ್ರಂಥಾಲಯಗಳಿಗೆ ಹೆಚ್ಚು ಅದ್ಯತೆ ನೀಡಬೇಕು. ಹೆಚ್ಚೆಚ್ಚು ಸಿಬ್ಬಂದಿ ನೇಮಿ ಸಬೇಕು’ ಎಂದು ಸಾಹಿತಿ ಕುಪೇಂದ್ರ ವಠಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT