ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಜಾತ್ರೆಗೆ ಸಿದ್ಧಗೊಂಡ ‘ಪಾರ್ಕ್‌’

ವಿಜಯಪುರ ನಗರದ ಆರಾಧ್ಯ ದೈವ ಸಿದ್ಧೇಶ್ವರರ ಜಾತ್ರೆಗೆ ಮುನ್ನುಡಿ
Last Updated 9 ಜನವರಿ 2017, 9:22 IST
ಅಕ್ಷರ ಗಾತ್ರ
ವಿಜಯಪುರ: ಸಂಕ್ರಾಂತಿ ಸಂಭ್ರಮಕ್ಕೆ ಇನ್ನೂ ಐದು ದಿನ ಬಾಕಿಯಿದೆ. ಹಬ್ಬದ ಆಸುಪಾಸು ನಗರದ ಆರಾಧ್ಯದೈವ ಸಿದ್ಧೇಶ್ವರನ ಜಾತ್ರೆ ಅದ್ಧೂರಿಯಿಂದ ನಡೆಯಲಿದೆ.
 
ಉತ್ತರ ಕರ್ನಾಟಕದಲ್ಲಿ ಅಂದ–ಚೆಂದದ ಜಾತ್ರೆ ಎಂದೇ ಮನೆ ಮಾತಾಗಿ ರುವ ಸಿದ್ಧೇಶ್ವರನ ಜಾತ್ರೆಗೆ ಐತಿಹಾಸಿಕ ಸ್ಮಾರಕ ನಗರಿ, ಗುಮ್ಮಟ ನಗರಿ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಈಗಾಗಲೇ ಗುಡಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.
 
ಗಾಂಧಿಚೌಕ್‌ನಿಂದ ದೇಗುಲದವರೆಗೂ ಸಿದ್ಧೇಶ್ವರ ರಸ್ತೆ ಅಭಿವೃದ್ಧಿ ಪಡಿಸಿ, ಡಾಂಬರು ಹಾಕಲಾಗಿದೆ. ರಾಜ್ಯ ಸರ್ಕಾರ ಈ ಬಾರಿ ₹ 25 ಲಕ್ಷ ಬಿಡುಗಡೆ ಗೊಳಿಸುವ ಭರವಸೆ ನೀಡಿರುವುದು ಜಾತ್ರಾ ಸಮಿತಿ ಪದಾಧಿಕಾರಿಗಳ ಉತ್ಸಾಹ ಇಮ್ಮಡಿಗೊಳಿಸಿದೆ.
 
ಜಾತ್ರೆಗೆ ಇನ್ನೂ ಸಮಯವಿದೆ. ಆದರೆ ದೇಗುಲದ ಸುತ್ತಮುತ್ತ ಈಗಾ ಗಲೇ ಎತ್ತ ನೋಡಿದರೂ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಹಿರಿಯರಲ್ಲಿ ಶ್ರದ್ಧಾ–ಭಕ್ತಿ ನೆಲೆಸಿದ್ದರೆ, ಮಕ್ಕಳ ಮನ ದಲ್ಲಿ ಜಾತ್ರೆ ಆರಂಭಕ್ಕೂ ಮುನ್ನವೇ ಸಂತಸದ ಹೊನಲು ತುಂಬಿದೆ.
 
ವಾರದ ಹಿಂದೆಯೇ ನಗರಕ್ಕೆ ಬಂದು ಬೀಡು ಬಿಟ್ಟಿರುವ ಹೊರ ರಾಜ್ಯದವರು ಗುಡಿಯಿಂದ ಅನತಿ ದೂರದಲ್ಲಿರುವ ಪಾಟೀಲ ಹೋಂಡಾ ಶೋ ರೂಂ ಹಿಂಬದಿ, ಆಸುಪಾಸಿನ ಖಾಲಿ ಸ್ಥಳದಲ್ಲಿ ಮಕ್ಕಳ ಮನರಂಜನಾ ಪಾರ್ಕ್ ನಿರ್ಮಾಣದಲ್ಲಿ ತಲ್ಲೀನ ರಾಗಿದ್ದಾರೆ. ಇದು ಮಕ್ಕಳ ಸಂತಸವನ್ನು ನೂರ್ಮಡಿಗೊಳಿಸಿದೆ.
 
ಜಾಯಿಂಟ್‌ ವ್ಹೀಲ್‌ ಹೆಸರಿನ ಬೃಹತ್ ಎಲೆಕ್ಟ್ರಾನಿಕ್‌ ರಾಟೆ ಈಗಾಗಲೇ ಮಕ್ಕಳನ್ನು ಕೂರಿಸಿಕೊಂಡು ತಿರುಗಲು ಸಜ್ಜುಗೊಂಡಿದೆ. ಪ್ರಾಯೋಗಿಕ ತಿರುಗಿಸುವಿಕೆ ಚಾಲನೆ ಪಡೆದಿದೆ. ಟೋರಾ ಟೋರಾ, ಬ್ರೇಕ್ ಡ್ಯಾನ್ಸ್ ಹೆಸರಿನ ನೆಲ ಮಟ್ಟದ ತಿರುಗಿಸುವಿಕೆಯ ಬೃಹತ್ ಯಂತ್ರಗಳನ್ನು ಅಳವಡಿಸಲಾಗಿದೆ. 
 
‘ಇದರ ಸಮೀಪದಲ್ಲೇ ಜಾದು ಪ್ರದರ್ಶನಕ್ಕೆ ವೇದಿಕೆಯೂ ಸಿದ್ಧವಾಗಿದೆ. ಕುತೂಹಲಭರಿತ ಮಕ್ಕಳು ಸ್ಥಳಕ್ಕೆ ಭೇಟಿ ನೀಡಿ ಎಂದಿನಿಂದ ಆಟಗಳು ಆರಂಭ ಗೊಳ್ಳುತ್ತವೆ ಎಂಬುದನ್ನು ಕೇಳುತ್ತಿ ದ್ದಾರೆ’ ಎಂದು ಗುಜರಾತ್‌ನ ಅಹಮದಾಬಾದ್‌ನಿಂದ ಇಲ್ಲಿಗೆ ಬಂದು ವಿಭಿನ್ನ ಆಟೋಟಗಳ ಯಂತ್ರೋಪಕರಣ ಅಳವಡಿಸಿರುವ ಬಬಲು ‘ಪ್ರಜಾವಾಣಿ’ಗೆ ತಿಳಿಸಿದರು.
 
ಇದೇ ಮೊದಲ ಬಾರಿಗೆ ಜಾತ್ರೆಗೆ ಬಂದಿರುವೆ. ಲಾಭದಾಯಕವಾದರೆ ಪ್ರತಿ ವರ್ಷವೂ ತಪ್ಪದೇ ಬರುವೆ ಎಂದೂ ಹೇಳಿದರು. 
 
ಮುಂಬಯಿ ಯಿಂದ ಬಂದಿರುವ ರಹೀಂ ಅಹಮದ್‌ ಅವರದ್ದು ಇದೇ ಅಭಿಮತ. 
 
‘ಪ್ರತಿ ವರ್ಷ ಸಿದ್ಧೇಶ್ವರ ಜಾತ್ರೆ ಸಂಕ್ರಮಣದ ಸಮಯ ನಡೆಯುತ್ತದೆ. ಸಂಕ್ರಾಂತಿಗೂ 10 ದಿನ ಮುಂಚಿತವಾಗಿಯೇ ನಗರಕ್ಕೆ ಬಂದು ನಿಗದಿತ ಜಾಗದಲ್ಲೇ ಮಕ್ಕಳ ಮನರಂಜನೆಯ ಆಟೋಟಗಳ ಯಂತ್ರ ಅಳವಡಿಸುತ್ತೇವೆ.
 
‘ಬಾಡಿಗೆ ಆಧಾರದಲ್ಲಿ ಜಾಗ ಪಡೆಯುತ್ತೇವೆ. ಬಂದ ಲಾಭದಲ್ಲಿ ನಮಗರ್ಧ. ಜಾಗ ನೀಡಿದವರಿಗೆ ಅರ್ಧ. 4–5 ನಿಮಿಷ ಸುತ್ತಿಸುವಿಕೆಗೆ ಒಬ್ಬರಿಗೆ ₹ 10–20 ಪಡೆಯಲಿದ್ದು, ನಿತ್ಯ ಕನಿಷ್ಠ 1 ಸಾವಿರ ಗ್ರಾಹಕರು ಆಟೋಟಗಳಲ್ಲಿ ಭಾಗಿಯಾಗುತ್ತಾರೆ. ಇವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು.
 
ಆಟೋಟ ಯಂತ್ರಗಳ ಅಳವಡಿಕೆ ಸೇರಿದಂತೆ, ನಿರ್ವಹಣೆಯ ಮೇಲ್ವಿ ಚಾರಣೆ ನೋಡಿಕೊಳ್ಳಲೇ 30ಕ್ಕೂ ಅಧಿಕ ಮಂದಿಯಿದ್ದಾರೆ. ಜಾತ್ರೆ ಮುಗಿದ 15 ದಿನವೂ ಮುಂದುವರೆಸುತ್ತೇವೆ. ಭೇಟಿ ನೀಡುವವರ ಸಂಖ್ಯೆ ತಗ್ಗಿದ ಬಳಿಕ ಬೇರೆಡೆ ತೆರಳುತ್ತೇವೆ’ ಎಂದು ಬಿಹಾರ ಮೂಲದ ಕಪಿಲ್ ತಿಳಿಸಿದರು.
 
**
ಇದೇ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇವೆ. ಚಲೋ ನಡೆದು, ಲಾಭದಾಯಕ ಎನಿಸಿದರೆ ಮುಂದಿನ ವರ್ಷವೂ ಬರುವ ಯೋಜನೆ ರೂಪಿಸುತ್ತೇವೆ
-ಬಬಲು
ಚಕ್ರಗಾಣದ ಮಾಲೀಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT