ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 10–1–1967

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

ಐದನೇ ಉಕ್ಕಿನ ಕಾರ್ಖಾನೆ ಸ್ಥಾಪನೆ ಕುರಿತು ಸ್ಪಷ್ಟ ಉತ್ತರವಿಲ್ಲ
ಹೊಸಪೇಟೆ, ಜ. 9–
  ಪ್ರಧಾನ ಮಂತ್ರಿಯವರು ಹೊಸಪೇಟೆ ಮತ್ತು ಬಳ್ಳಾರಿಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಉಕ್ಕಿನ ಕಾರ್‍ಖಾನೆಯನ್ನು ಸ್ಥಾಪಿಸಬೇಕೆನ್ನುವ ಬೇಡಿಕೆ ಕೇಳಿ ಬಂದಿತು. ಹೊಸಪೇಟೆಯಲ್ಲಿ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದ ಜನ ಉಕ್ಕಿನ ಕಾರ್ಖಾನೆ ಬೇಕು ಎನ್ನುವ ಘೋಷಣೆಗಳನ್ನು ಮಾಡಿದರು. ಐದನೆ ಉಕ್ಕಿನ ಕಾರ್ಖಾನೆ ವಿಷಯದಲ್ಲಿ ರಾಜಕೀಯ ಬೇಡ ಎನ್ನುವ ಭಿತ್ತಿಪತ್ರಗಳನ್ನು ಎಲ್ಲ ಕಡೆ ತೂಗು ಹಾಕಲಾಗಿತ್ತು.

ಅಲ್ಲಿಯ ಬೆಟ್ಟದ ಕಡೆ ಬೆರಳು ಮಾಡಿ ತೋರಿಸಿದ ರಾಜ್ಯದ ಮಾಜಿ ಸಚಿವ ಶ್ರೀ ಆರ್‌. ನಾಗನಗೌಡರು ಅಲ್ಲಿರುವ ಕಬ್ಬಿಣದ ಅದುರನ್ನು ಉಕ್ಕನ್ನಾಗಿ ಪರಿವರ್ತಿಸಬಹುದು ಎಂದರು.

ರಕ್ಷಣೆಗೆ ಹೆಚ್ಚು ವೆಚ್ಚವಾಗುತ್ತಿರುವುದರಿಂದ ಐದನೆಯ ಉಕ್ಕಿನ ಕಾರ್ಖಾನೆಗೆ ಸಾಕಷ್ಟು ಹಣವಿಲ್ಲ ಎಂದು ಅವರಿಗೆ ಪ್ರಧಾನ ಮಂತ್ರಿಯವರು ತಿಳಿಸಿದರು.

ತುಂಗಭದ್ರ ಮೇಲ್ಮಟ್ಟದ ನಾಲೆ ಉದ್ಘಾಟನೆ
ಹೊಸಪೇಟೆ, ಜ. 9–
ಮೈಸೂರು–ಆಂಧ್ರ ರಾಜ್ಯಗಳ ಹಲವು ಕ್ಷಾಮಪೀಡಿತ ಜಿಲ್ಲೆಗಳಿಗೆ ತುಂಗಭದ್ರಾ ಜಲಾಶಯ ಇನ್ನು ಮುಂದೆ ಆನಂದದ ಸುಗ್ಗಿ–ಸಂಕ್ರಾಂತಿಗಳನ್ನು ತರಲಿದೆಯೆಂದು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಇಂದು ತುಂಗಭದ್ರಾ ಜಲಾಶಯದ ಮೇಲ್ದಂಡೆ ನಾಲೆಯ ಪ್ರಥಮ ಘಟ್ಟದ ಕಾಲುವೆಗಳಿಗೆ ನೀರು ಬಿಡುವ ಕಾರ್ಯ ಉದ್ಘಾಟಿಸುತ್ತಾ ತಿಳಿಸಿದರು.


ತಾಂತ್ರಿಕ ಶಿಕ್ಷಣ ಅಭಿವೃದ್ಧಿಗೆ ಭಾರತಕ್ಕೆ ಅಮೆರಿಕದಿಂದ 120 ಲಕ್ಷ ಡಾಲರ್‌ ಸಾಲ
ನವದೆಹಲಿ, ಜ. 9–
ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣದ ಅಭಿವೃದ್ಧಿಗಾಗಿ ಅಮೆರಿಕ, ಭಾರತಕ್ಕೆ 120 ಲಕ್ಷ ಡಾಲರ್‌ (ಒಂಬತ್ತು ಕೋಟಿ ರೂ.) ಸಾಲವನ್ನು ನೀಡಿದೆ. ಈ ಕಾರ್ಯಕ್ರಮಕ್ಕಾಗಿ ಅಮೆರಿಕ ಸಾಲ ನೀಡಿರುವುದು ಇದೇ ಪ್ರಥಮ. ಅಮೆರಿಕದ ರಾಯಭಾರಿ ಚೆಸ್ಟರ್‌ ಬೌಲ್ಸ್‌ ಇಂದು ಕೇಂದ್ರ ಶಿಕ್ಷಣ ಸಚಿವ ಫಕ್ರುದಿನ್‌ ಅಹ್ಮದ್‌ರವರನ್ನು ಭೇಟಿ ಮಾಡಿ ಈ ವಿಚಾರವನ್ನು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT