ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ವಕೀಲರ ಧರಣಿ 3ನೇ ದಿನಕ್ಕೆ

Last Updated 12 ಜನವರಿ 2017, 10:57 IST
ಅಕ್ಷರ ಗಾತ್ರ

ಯಾದಗಿರಿ-:  ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ವಕೀಲರು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್‌ರ್‍್ಯಾಲಿ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ವಕೀಲರು ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರ ಭೇಟಿ ಬೆಂಬಲ:
ಧರಣಿ ನಿರತ ವಕೀಲರ ಸ್ಥಳಕ್ಕೆ ಗುರುವಾರ ಬಿಜೆಪಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಶ್ರೀರಾಮಸೇನೆ ಅಧ್ಯಕ್ಷ ವಿಜಯ, ಹಿಂದೂ ಜಾಗೃತ ವೇದಿಕೆ ಅಧ್ಯಕ್ಷ, ಜಮಾತಿ ಇಸ್ಲಾಂ ಅಧ್ಯಕ್ಷ ಗುಲಾಮಿ ಹಿಂದ್ ಭೇಟಿ ನೀಡಿ ಧರಣಿಗೆ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ಬಿಜೆಪಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ‘ಸಾರ್ವಜನಿಕರಿಗೆ ನ್ಯಾಯ ಕೊಡಿಸುವ ವಕೀಲರೆ ಧರಣಿ ಮಾಡು ತ್ತಿರುವುದಕ್ಕೆ ನೇರವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಜನಪ್ರತಿನಿಧಿಗಳೇ ಹೊಣೆಯಾಗಿದ್ದಾರೆ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದರಲ್ಲಿ ವಕೀಲರ ಪಾತ್ರ ಮಹತ್ತರವಾದುದು. ಅವರ ಸಮಯವನ್ನು ಧರಣಿ ಮಾಡಿ ಸುವ ಮೂಲಕ ವ್ಯರ್ಥ ಮಾಡಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನಿಂಗಣ್ಣ ಬಂದಳ್ಳಿ, , ಜಿ.ಭೀಮರಾವ್, ಉಪಾಧ್ಯಕ್ಷ ಎಂ. ಕೃಷ್ಣಾ ಗುರುಮಿಠಕಲ್, ಪದಾಧಿಕಾರಿಗಳಾದ ರಾಜು ದೊಡ್ಡಮನಿ, ಅಮೀನ್‌ರೆಡ್ಡಿ ಪಾಟೀಲ್, ಪ್ರಸನ್ನ ದೇಶಮುಖ್, ಎಸ್.ಪಿ.ನಾಡೇಕರ್, ಸುಷ್ಮಾ ಜಾಧವ್, ಸಾವಿತ್ರಿ ಪಾಟೀಲ್, ನಿರ್ಮಲಾ ಹೂಗಾರ, ಪುಷ್ಪಲತಾ ಪಾಟೀಲ, ಎಂ.ವಿಜಯಕುಮಾರ , ಸತೀಶ, ಮಾರುತಿ ಕಾಳೇನೋರ್,  ಶಿವರಾಜ್ ಕಟ್ಟಿಮನಿ, ಮಹ್ಮದ್ ಅಕ್ಬರ್, ಎಂ.ಎಂ.ಕಾಂತಿಮನಿ, ಮಾರುತಿ ಈಟೆ, ನಿರಂಜನ್, ಗೋವಿಂದ್ ಜಾಧವ್, ಅಶ್ವಿನಿ ಆವಂತಿ, ದೇವೀಂದ್ರ ದೊಡ್ಮನಿ ಭಾಗವಹಿಸಿದ್ದರು.

ಧರಣಿ ಸ್ಥಳಕ್ಕೆ ಜಿಲ್ಲಾ ನ್ಯಾಯಾಧೀಶರ ಭೇಟಿ: ಜಿಲ್ಲಾ ಪ್ರಧಾನ ಮತ್ತು ಸೆಷಸ್ಸ್ ನ್ಯಾಯಾಧೀಶ ಎಸ್.ಎನ್.ನಾಯಕ ಹಾಗೂ ನಿವಿಲ್ ನ್ಯಾಯಲಯದ (ಕಿರಿಯ ಶ್ರೇಣಿ )ನ್ಯಾಯಾಧೀಶ ಪ್ರಭು ಎನ್.ಬಡಿಗೇರ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೈಕೋರ್ಟ್ ನಿರ್ದೇಶನ ದಂತೆ ತಕ್ಷಣವೇ ಧರಣಿ ನಿಲ್ಲಿಸುವಂತೆ ಸಲಹೆ ನೀಡಿದರು. ಆದರೆ, ವಕೀಲರು ಧರಣಿ ಹಿಂಪಡೆಯಬೇಕಾದರೆ ಬೇಡಿಕೆ ಈಡೇರಬೇಕು. ಅಲ್ಲಿಯವರೆಗೆ ತಾವುಗಳು ಸಹಕರಿಸಬೇಕು ಎಂಬು ದಾಗಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT