ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹೋದರತ್ವ ಸಂದೇಶ ಸಾರಿದ ಮಹಾಪುರುಷ’

ಜಿಲ್ಲೆಯ ವಿವಿಧೆಡೆ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ: ಮೆರವಣಿಗೆ, ಭಾವಚಿತ್ರಕ್ಕೆ ಪುಷ್ಪನಮನ
Last Updated 13 ಜನವರಿ 2017, 6:25 IST
ಅಕ್ಷರ ಗಾತ್ರ
ಕಾರವಾರ: ಸ್ವಾಮಿ ವಿವೇಕಾನಂದ ಅವರು ಭಾರತೀಯರ ಬಗ್ಗೆ ವಿದೇಶಿಗ ರಲ್ಲಿದ್ದ ಕೀಳರಿಮೆಯನ್ನು ಹೋಗ ಲಾಡಿಸಿ, ವಿಶ್ವಕ್ಕೆ ಸಹೋದರತೆಯ ಸಂದೇಶವನ್ನು ಸಾರಿದ ಮಹಾಪುರುಷ ರಾಗಿದ್ದಾರೆ ಎಂದು ಶಾಸಕ ಸತೀಶ ಸೈಲ್ ಹೇಳಿದರು. 
 
ವಿವೇಕಾನಂದ ಜನ್ಮ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಗುರು ವಾರ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
 
ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನ ದಲ್ಲಿ ವಿವೇಕಾನಂದ ಅವರು ಮಾಡಿದ ಭಾಷಣ ಐತಿಹಾಸಿಕವಾಗಿದೆ. ಭಾರತ ವನ್ನು ಪ್ರತಿನಿಧಿಸಿದ್ದ ಅವರು ತಮ್ಮ ಉದಾತ್ತ ಮಾತುಗಳಿಂದಲೇ ದೇಶದ ಘನತೆ ಎತ್ತಿ ಹಿಡಿದವರು. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜೀವನ ಯುವಜನತೆಗೆ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.
 
ಪ್ರಾಧ್ಯಾಪಕ ಡಾ.ವೆಂಕಟೇಶ ಗಿರಿ ಅವರು ಉಪನ್ಯಾಸ ನೀಡಿದರು.
 
ಅಂತರ್ಗತವಾಗಿರುವ ಶಕ್ತಿ ಮೇಲೆ ನಂಬಿಕೆ ಇಡಬೇಕು, ಮತ್ಸರ ಹಾಗೂ ದ್ವೇಷದಿಂದ ದೂರು ಉಳಿಯಬೇಕು ಹಾಗೂ ಸಮಾಜದಲ್ಲಿನ ಜನರ ಬಗ್ಗೆ ಅಪನಂಬಿಕೆ ಇರಬಾರದು. ವಿವೇಕಾನಂದರ ಈ ಮೂರು ವಿಚಾರಗಳನ್ನು ಯಾರೂ ಪಾಲಿಸುತ್ತಾರೋ ಅವರು ಬಲಿಷ್ಠರಾಗುತ್ತಾರೆ. ಜತೆಗೆ ಭವ್ಯ ಭಾರತ ನಿರ್ಮಾಣ ಆಗುವುದರಲ್ಲಿ ಸಂದೇಹವಿಲ್ಲ ಎಂದರು. 
 
ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು. 
 
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ ನಾಯಕ ಮಾತನಾಡಿ, ವಿವೇಕಾನಂದರು ಕೇವಲ ನಮ್ಮ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಮಾದರಿ ವ್ಯಕ್ತಿತ್ವದವರು. ಅವರು ಆಧ್ಯಾತ್ಮಿಕ ಜೊತೆಗೆ ಯುವ ಜನತೆಗೆ ಮಾದರಿಯಾದವರು ಎಂದರು.
 
ರಾಮಕೃಷ್ಣ ಆಶ್ರಮದ ಭಾವೇಶಾನಂದ ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಕೃಷ್ಣ ನಾಯಕ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಸ್ವಾಗತಿಸಿದರು. ಪ್ರಕಾಶ ರೇವಣಕರ ವಂದಿಸಿದರು. 
 
ಜಾಥಾ ಕಲಾತಂಡಗಳ ಮೆರುಗು: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಜನವರಿ 19 ರವರೆಗೆ ನಡೆಯುವ ಜಿಲ್ಲಾ ಮಟ್ಟದ ಯುವ ಸಪ್ತಾಹದ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. 
 
‘ಜಗತ್ತಿನ ದೃಷ್ಟಿ ಭಾರತದತ್ತ: ವಿವೇಕಾನಂದರ ಸಾಧನೆ ’
ಸಿದ್ದಾಪುರ ‘ಸ್ವಾಮೀಜಿ ವಿವೇಕಾನಂದರು ತಮ್ಮ ಸಾಧನೆಯ ಮೂಲಕವೇ ಜಗತ್ತು ಭಾರತವನ್ನು ನೋಡುವಂತೆ ಮಾಡಿದರು’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
 
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಸ್ಥಳೀಯ ಅರ್ಬನ್  ಬ್ಯಾಂಕ್ ಸಭಾಂಗಣದಲ್ಲಿ  ಗುರುವಾರ ನಡೆದ ಸ್ವಾಮೀಝಿ ವಿವೇಕಾನಂದರ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 
ವಿವೇಕಾನಂದರು ತಾವು ನಂಬಿ ದ್ದನ್ನು ಅನುಷ್ಠಾನಕ್ಕೆ ತರಲು ಕಠಿಣ ಪರಿಶ್ರಮಕ್ಕೆ ತಮ್ಮನ್ನೇ ಒಡ್ಡಿಕೊಂಡರು. ಈ ಮೂಲಕ ಯುವ ಸಮುದಾಯಕ್ಕೆ ಪ್ರೇರಣೆ ನೀಡಿದರು.ಬಾಲಕ ನರೇಂದ್ರ ರಲ್ಲಿ ಸತ್ಯವನ್ನು ಅಥವಾ ಪ್ರಕೃತಿಯನ್ನು ಅರಿಯುವ ಪ್ರಖರತೆ ಇದ್ದುದರಿಂದಲೇ ಅದು ಅವರ ಸಾಧನೆಗೆ ದಾರಿಯಾಯಿತು ಎಂದರು.
 
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಮರಾಠೆ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸುಭಾಷ್ ಮತ್ತು ಅರ್ಚನಾ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಅಶೋಕ ರೇವಣಕರ ಅಧ್ಯಕ್ಷತೆ ವಹಿಸಿದ್ದರು.
 
ಪ್ರಾಧ್ಯಾಪಕ ಯೋಗೀಶ್ ವೈ. ಸ್ವಾಗತಿಸಿದರು. ಶಿವರಾಮ ಭಟ್ಟ ನಿರೂಪಿಸಿದರು. 
 
ಕಾಲೇಜು ಸಂಚರಿಸಿದ ವಿವೇಕಾನಂದರ ರಥಯಾತ್ರೆ 
ಶಿರಸಿ: ರಾಷ್ಟ್ರೀಯ ಯುವ ದಿನದ ಅಂಗವಾಗಿ ಬಿಜೆಪಿ ಗ್ರಾಮೀಣ ಯುವಮೋರ್ಚಾ ವಿವೇಕ ಬ್ಯಾಂಡ್ ಧರಿಸುವ ಹಾಗೂ ನಗದುರಹಿತ ವ್ಯವಹಾರದ ಕುರಿತು ಮಾಹಿತಿ ಕಾರ್ಯಾಗಾರವನ್ನು ಗುರುವಾರ ಆಯೋಜಿಸಿತ್ತು. 
 
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಕರೆಯಲಾಗುತ್ತಿದೆ. ಇಂದಿನ ಯುವಕರಲ್ಲಿ ಅನೇಕರು ದುಶ್ಚಟ, ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ವಿದೇಶಿ ಕೈವಾಡವೂ ಇದೆ ಎಂಬ ಅರಿವು ಇರಬೇಕು. ಇಂತಹ ಕಾರ್ಯಕ್ಕೆ ತಡೆಹಾಕುವ ಕೆಲಸ ಯುವಕರಿಂದಲೇ ಆಗಬೇಕು ಎಂದರು. 
 
ಜಿಲ್ಲಾ ಯುವಮೋರ್ಚಾ ಘಟಕದ ಅಧ್ಯಕ್ಷ ಮಂಜುನಾಥ ಜನ್ನು ವಿವೇಕ ಬ್ಯಾಂಡ್ ಧರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ. ಹೆಗಡೆ ಚಿಪಗಿ, ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ,ಆರ್.ಡಿ. ಹೆಗಡೆ ಜಾನ್ಮನೆ, ಚಂದ್ರು ಎಸಳೆ, ವಿಶಾಲ್ ಮರಾಠೆ, ಉಷಾ ಹೆಗಡೆ, ಪ್ರಭಾವತಿ ಗೌಡ, ಮೋಹನದಾಸ ನಾಯಕ ಉಪಸ್ಥಿತರಿದ್ದರು.
 
ಕಾಲೇಜು ಸಂಚರಿಸಿದ ರಥಯಾತ್ರೆ: ಎಬಿವಿಪಿ ಹಮ್ಮಿಕೊಂಡಿದ್ದ ವಿವೇಕಾನಂದರ ರಥಯಾತ್ರೆ ಮಾರಿಗುಡಿ ಪಿ.ಯು ಕಾಲೇಜಿನಿಂದ ಆರಂಭವಾಗಿ ನಿಲೇಕಣಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಇಎಸ್ ವಾಣಿಜ್ಯ ಕಾಲೇಜು, ಚೈತನ್ಯ ಕಾಲೇಜು, ಎಂಇಎಸ್ ಪಿಯು ಕಾಲೇಜುಗಳಿಗೆ ಭೇಟಿ ನೀಡಿತು. 
ಸಂಘಟನೆಯ ಬಿ.ಎಂ. ಪ್ರಸನ್ನ,ಮ ಡಿ.ಎಸ್. ನಿತೀಶ, ಗಣಪತಿ ತೇತಿ, ರಾಮದಾಸ ಗಾಂವಕರ, ಶಶಾಂಕ ಹೆಗಡೆ, ಕೃಷ್ಣಮೂರ್ತಿ ಭಟ್ಟ, ಧನಂಜಯ, ವಿನಾಯಕ ಇದ್ದರು. 
 
ದುಶ್ಚಟಕ್ಕೆ ಯುವಜನರು ಬಲಿ: ವಿಷಾದ 
ಶಿರಸಿ: ಆದರ್ಶ ಪ್ರಜೆಯಾಗುವ ದಿಶೆಯಲ್ಲಿ ಯುವ ಜನರು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸಿ.ಎನ್. ಸುಣಗಾರ ಹೇಳಿದರು. 
 
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಗುರುವಾರ ಇಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಆದರ್ಶವನ್ನು ಯುವಕರು ಪಾಲಿಸಬೇಕು. ಸ್ವಾಮಿ ವಿವೇಕಾನಂದರ ಆದರ್ಶ ಇಂದಿನ ಯುವಕರಿಗೆ ಪ್ರೇರಣೆಯಾಗಿದೆ, ಅಂತರ್ಜಾಲ ಅಪರಾಧ ಮತ್ತು ಡ್ರಗ್ಸ್‌ ಮಾಫಿಯಾ ವಿರುದ್ಧ ಜಾಗೃತರಾಗಬೇಕು. ಇಂದಿನ ದಿನಗಳಲ್ಲಿ ಡ್ರಗ್ಸ್‌ಗೆ ಯುವ ಜನರು ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ ಹೇಳಿದರು.
 
ಗಣೇಶ ನಗರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಧೀಶ ಶಮೀರ ನಂದ್ಯಾಳ, ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಕಾರ್ಯದರ್ಶಿ ಆರ್.ಆರ್. ಹೆಗಡೆ ಇದ್ದರು. 
 
ಅಂತರ್ಜಾಲ ಅಪರಾಧಗಳು ಮತ್ತು ಡ್ರಗ್ಸ್‌ ನಿಷೇಧ ಕುರಿತು ವಕೀಲ ಶಿವರಾಯ ದೇಸಾಯಿ ಉಪನ್ಯಾಸ ನೀಡಿದರು. ಶಿಕ್ಷಕ ಎಮ್.ಕೆ. ನಾಯ್ಕ ಸ್ವಾಗತಿಸಿದರು. ಶಿಕ್ಷಕ ರಾಮಕೃಷ್ಣ ಪಟಗಾರ ನಿರೂಪಿಸಿದರು.
 
‘ಆದರ್ಶಪ್ರಾಯ’
ಯಲ್ಲಾಪುರ: ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರುವ ಮೂಲಕ  ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೇ ಮಾಡಿದ ಸ್ವಾಮಿ ವಿವೇಕಾನಂದರ ಬೋಧನೆ ಮತ್ತು ಸಾಧನೆ ನಮಗೆಲ್ಲಾ ಆದರ್ಶಪ್ರಾಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಪಾದ್ ಎನ್. ಹೇಳಿದರು. 
 
ಪಟ್ಟಣದ ಎಪಿಎಂಸಿ ಆರಣದಲ್ಲಿ  ಅಡಿಕೆ ಭವನದಲ್ಲಿ ಗುರುವಾರ  ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 
ವಿವೇಕಾನಂದರು ಧೀಮಂತ ವ್ಯಕ್ತಿತ್ವದಿಂದ  ನುಡಿದಂತೆ ನಡೆದು ಬದುಕಿನಲ್ಲಿ  ಅಜರಾಮರರಾಗಿದ್ದಾರೆ. ಅವರ ನಡೆ, ನುಡಿಯನ್ನು ಅನುಸರಿಸಿ ಇಂದಿನ ಯುವಜನತೆ ಉನ್ನತ ಸಾಧನೆ ಮಾಡಬೇಕು. ಯುವ ಜನರು ದುಡುಕುವ ಸ್ವಭಾವಕ್ಕೆ ಮತ್ತು ಚಂಚಲ ಮನಸ್ಥಿತಿಗೆ  ಕಡಿವಾಣ ಹಾಕಬೇಕು. ಸ್ವಾಭಿಮಾನ ಯುಕ್ತ ಬದುಕು ನಡೆಸಿ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮ ಕೊಡುಗೆಯನ್ನು  ನೀಡಬೇಕು ಎಂದರು.
 
ಹಿರಿಯ ವಕೀಲ ಎನ್.ಟಿ.ಗಾಂವ್ಕಾರ್ ವಿವೇಕಾನಂದರ ಜೀವನ, ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.  ವಕೀಲರ ಸಂಘದ ಅಧ್ಯಕ್ಷ ಎನ್.ಕೆ. ಭಾಗ್ವತ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಅಭಿಯೋಜಕ ಆನಂದ ಕೊಣ್ಣೂರು,   ಹಿರಿಯ ವಕೀಲರಾದ ವಿ.ಪಿ.ಭಟ್ಟ ಕಣ್ಣಿ, ಎನ್.ಆರ್.ಭಟ್ಟ ಕೊಡ್ಲಗದ್ದೆ, ಜಿ.ಎಸ್.ಭಟ್ಟ ಹಳವಳ್ಳಿ, ಮಹೇಶ ನಾಯ್ಕ್, ಧನಂಜಯ ಭಟ್ಟ, ವಿ.ಟಿ. ಭಟ್ಟ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಮ್.ಆರ್.ಹೆಗಡೆ ಕುಂಬ್ರಿಗುಡ್ಡೆ, ಉಪಸ್ಥಿತರಿದ್ದರು. ಅರೆನ್ಯಾಯಿಕ ಸ್ವಯಂಸೇವಕರಾದ ಸುಧಾಕರ ನಾಯಕ, ಸಂಜೀವ ಕುಮಾರ್ ಹೊಸ್ಕೇರಿ ನಿರೂಪಿಸಿದರು. 
 
**
ಸ್ವಾಮಿ ವಿವೇಕಾನಂದರ ಆದರ್ಶವನ್ನು ಇಂದಿನ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
-ಸತೀಶ್‌ ಸೈಲ್‌,
ಶಾಸಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT