ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸಂದರ್ಶನ: ಮಾತೃಭಾಷೆಯಲ್ಲೇ ನಡೆಯಲಿ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ಪ್ರಮೋದ್ ಚಾಲನೆ
Last Updated 14 ಜನವರಿ 2017, 6:04 IST
ಅಕ್ಷರ ಗಾತ್ರ
ಪುಂಡಲೀಕ ಹಾಲಂಬಿ ವೇದಿಕೆ (ಬ್ರಹ್ಮಾವರ): ಆಂಗ್ಲ ಭಾಷಾ ಶಿಕ್ಷಕರನ್ನು ಹೊರತುಪಡಿಸಿ ಇನ್ನಾವುದೇ ಉದ್ಯೋ ಗಕ್ಕಾಗಿ ನಡೆಯುವ ಸಂದರ್ಶನಗಳು ಆಯಾಯ ರಾಜ್ಯಗಳ ಮಾತೃಭಾಷೆಯ ಲ್ಲಿಯೇ ನಡೆದಲ್ಲಿ ಮಾತ್ರ ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳು ಉಳಿ ಯುತ್ತವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
 
ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಂದಾಡಿ ಸುಬ್ಬಣ್ಣ ಭಟ್ ಸಭಾಂಗಣದ ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಮೂರು ದಿನಗಳ ಕಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬ್ರಹ್ಮಾವರ ಅಜಪುರ ಕರ್ನಾಟಕ ಸಂಘ ಮತ್ತು ಕೋಟ ಮಣೂರು ಸುಜ್ಞಾನದ ಸಹಯೋಗದಲ್ಲಿ ನಡೆಯಲಿರುವ 11ನೇ  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ನುಡಿ ಹಬ್ಬ 2017’ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
 
ದೇಶದ ಶಿಕ್ಷಣ ನೀತಿ, ವ್ಯವಸ್ಥೆಯ ಕಾರಣದಿಂದಾಗಿ ಉಭಯ ಜಿಲ್ಲೆಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿರುವುದು ವಿರಳವಾಗಿದೆ. ಕನ್ನಡ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳು ಶೇ 90 ಅಂಕ ಪಡೆದರೂ ಅವರಿಗೆ ಉದ್ಯೋಗ ದೊರಕುತ್ತಿಲ್ಲ. ಸ್ಥಳೀಯ ಭಾಷೆಗೆ ಮಹತ್ವ ಕೊಟ್ಟಲ್ಲಿ ಮಾತ್ರ ಭಾಷೆಯ ಉಳಿವು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
 
ಸಾಹಿತಿ ಹಾಗೂ ಸಂಘಟಕ ಕಾರ್ಕ ಳದ ಪ್ರೊ.ಎಂ.ರಾಮಚಂದ್ರ ಸಮ್ಮೇಳ ನದ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪುಸ್ತಕ ಪ್ರದರ್ಶನ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವಸ್ತು ಪ್ರದರ್ಶನ ಮತ್ತು ಜಿಲ್ಲಾ ವೈದ್ಯಾಧಿಕಾರಿ ಡಾ.ರೋಹಿಣಿ ಬೃಹತ್ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು.
 
ಪುಸ್ತಕ ಬಿಡುಗಡೆ: ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರೊ. ಎಂ.ರಾಮಚಂದ್ರ ಅವರ ‘ಹತ್ತು ಹಲವು’, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳು, ಲೇಖಕ ಮಣಿಪಾಲದ ಡಾ.ನಾಗೇಶ್ ಕುಮಾರ್ ಜಿ. ರಾವ್ ಅವರ ಹೊಸ ಕವನ ಸಂಕಲನ ಮತ್ತು ಬ್ರಹ್ಮಾವರದ ಲೇಖಕ ಆಲ್ಫೋ ನ್ಸಸ್ ಡಿಸೋಜ ಅವರ ಕವನ ಸಂಕಲ ನದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. 
 
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರವಿ ಕೊಟಾರಗಸ್ತಿ, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಚಾಂತಾರಿನ ಸರಸ್ವತಿ, ಹಂದಾಡಿಯ ಪ್ರತಿಮಾ ಶೆಟ್ಟಿ, ಹಾರಾಡಿಯ ಜಯಲಕ್ಷ್ಮೀ ಶೆಟ್ಟಿ, ಬ್ರಹ್ಮಾ ವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ  ಪ್ರದೀಪ್ ಕುಮಾರ್ ಕಲ್ಕೂರ, ಕಾಸರ ಗೋಡು ಜಿಲ್ಲಾ ಘಟಕದ ಅಧ್ಯಕ್ಷ  ಸುಬ್ರ ಹ್ಮಣ್ಯ ಭಟ್, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ರವೀಂದ್ರ ಉಪಾಧ್ಯಾಯ, ಮೋಹನ್ ಉಡುಪ ಹಂದಾಡಿ, ಇರ್ಮಾಡಿ ಟಿ. ಹೆಗ್ಡೆ, ಅಜಪುರ ಸಂಘದ ಅಶೋಕ್ ಭಟ್, ಎಸ್.ನಾರಾಯಣ, ಪ್ರತಾಪ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ ಕಾರ್ಕಳ ತಾಲ್ಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕುಂದಾಪುರದ ಡಾ.ಸುಬ್ರಹ್ಮಣ್ಯ ಭಟ್, ಉಡುಪಿಯ ವಸಂತಿ ಶೆಟ್ಟಿ ಬ್ರಹ್ಮಾ ವರ ಮತ್ತಿತರರು ಉಪಸ್ಥಿತರಿದ್ದರು.
 
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೂರು ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ಸೂರಾಲು ನಾರಾ ಯಣ ಮಡಿ ವಂದಿಸಿದರು. ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯ ಕ್ರಮ ನಿರೂಪಿಸಿದರು. 
 
**
ಜಿಲ್ಲಾ ಸಮ್ಮೇಳನದಲ್ಲಿ ಇಂದು 
ಬ್ರಹ್ಮಾವರ: ಶನಿವಾರ ಬೆಳಿಗ್ಗೆ 9ಕ್ಕೆ ಶಿವಪುರದ ಭಾರತಿ ಸೇರಿಗಾರ್ ಮತ್ತು ತಂಡದವರಿಂದ ಉದಯ ರಾಗ ಸ್ಯಾಕ್ಸೋಫೋನ್, 9.30ಕ್ಕೆ ಮಾಧ್ಯಮ ಗೋಷ್ಠಿ ನಡೆಯಲಿದೆ. ಹಿರಿಯ ಪತ್ರಕರ್ತ ಎ.ಈಶ್ವರಯ್ಯ ಉಪನ್ಯಾಸ ನೀಡುವರು. ಕುಂದಪ್ರಭ ಪತ್ರಿಕೆಯ ಸಂಪಾದಕ ಯು. ಎಸ್. ಶೆಣೈ ಪ್ರತಿಕ್ರಿಯೆ ನೀಡುವರು. 
 
10.30ಕ್ಕೆ ಕಾರ್ಕಳದ ಕೆ.ಯೋವರಿಂದ ಗೀತ ಗಾಯನ, 10.45ಕ್ಕೆ ಮಹಿಳೆಯರ ಸಮಕಾ ಲೀನ ಸಮಸ್ಯೆಗಳು ವಿಷ ಯದ ಬಗ್ಗೆ ಗೋಷ್ಠಿ ನಡೆಯಲಿದೆ. ಹಿರಿಯ ಸಾಹಿತಿ ವೈದೇಹಿ ಆಶಯ ಭಾಷಣ ಮಾಡುವರು. 11.45ಕ್ಕೆ ಬ್ರಹ್ಮಾವರ ನಿರ್ಮಲಾ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗ ಳಿಂದ ಕಾರ್ಯಕ್ರಮ ವೈವಿಧ್ಯ, 12ಕ್ಕೆ ಯುವ ಕವಿ ಗೋಷ್ಠಿ ನಡೆಯಲಿದೆ. ಖ್ಯಾತ ಸಾಹಿತಿ  ಬೆಳಗೋಡು ರಮೇಶ್ ಭಟ್ ಆಶಯ ಭಾಷಣ ಮಾಡುವರು. 1.05ಕ್ಕೆ ರಾಗ ತಾಳ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಾವ ಗೀತ ಕಾರ್ಯಕ್ರಮ, 2ಕ್ಕೆ ನಡೆಯುವ ಹಾಸ್ಯ ಗೋಷ್ಠಿಯಲ್ಲಿ ಡಾ.ರಂಜಿತ್ ಕುಮಾರ್ ಶೆಟ್ಟಿ ವೈದ್ಯ ಕೀಯದಲ್ಲಿ ಹಾಸ್ಯ, ರಂಗಕರ್ಮಿ ರಘು ಪಾಂಡೇಶ್ವರ ಅವರಿಂದ ರಂಗ ಭೂಮಿಯಲ್ಲಿ ಹಾಸ್ಯ ಮತ್ತು ಶಿಕ್ಷಕ ಮನು ಹಂದಾಡಿ ಅವರಿಂದ ಗ್ರಾಮೀಣ ಬದುಕಿನಲ್ಲಿ ಹಾಸ್ಯ ಕುರಿತು ಮಾತನಾಡುವರು. 3ಕ್ಕೆ ಗಿನ್ನೆಸ್ ದಾಖಲೆ ಮಾಡಿದ ಕನ್ನಾರಿನ ಪೃಥ್ವೀಶ್ ಅವರಿಂದ ಕ್ಯುಬಿಕ್‌ನಲ್ಲಿ ದ್ವಿಮುಖ ಚಿತ್ರ ಪ್ರದರ್ಶನ, 3.15ಕ್ಕೆ ನಡೆಯುವ ಯಕ್ಷಗಾನ ಸಾಹಿತ್ಯ ಗೋಷ್ಠಿಯಲ್ಲಿ ಯಕ್ಷಗಾನ ಗುರು ಗುಂಡ್ಮಿ ಸದಾನಂದ ಐತಾಳರಿಂದ ಉಪನ್ಯಾಸ, 4.15ಕ್ಕೆ ಸಿದ್ದಾರ್ಥ ಅಡಿಗ ಅವರಿಂದ ಕಾರ್ಯಕ್ರಮ ವೈವಿಧ್ಯ, 4.30ಕ್ಕೆ ಮಟಪಾಡಿ ರಾಜ ಗೋಪಾಲ ಆಚಾರ್ಯ ಸಂಸ್ಮರಣೆ, ಸಂಜೆ 5ಕ್ಕೆ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಹಾಗೂ ಸಭಾ ಕಾರ್ಯಕ್ರಮ,6.30ಕ್ಕೆ ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗಳಿಂದ ಯಕ್ಷಗಾನ ನಡೆಯಲಿದೆ.
 
**
ದಿಬ್ಬಣಕ್ಕೆ ಬಿರ್ತಿ ಚಾಲನೆ
ಬೆಳಿಗ್ಗೆ ಬ್ರಹ್ಮಾವರ ಮಹತೋ ಭಾರ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಕನ್ನಡ ಭುವನೇಶ್ವರಿ ದಿಬ್ಬಣಕ್ಕೆ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ರಾಷ್ಟ್ರಧ್ವಜಾರೋಹಣ, ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪರಿಷತ್ ಧ್ವಜಾರೋಹಣ ಮಾಡಿದರು. ಬ್ರಹ್ಮಾವರದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ, ವಿದ್ಯಾರ್ಥಿನಿಯರ ರೈತ ಗೀತೆಯಿಂದ ಆರಂಭವಾದ ಸಮ್ಮೇಳನವನ್ನು ಉದ್ಘಾಟಿಸಿದ ಸಚಿವ ಪ್ರಮೋದ್ ಮಧ್ವರಾಜ್ ಸಮ್ಮೇಳನಾಧ್ಯಕ್ಷರ ನುಡಿಯನ್ನು ಆಲಿಸಿ 
ತೆರಳಿದರು.
 
**
ಇತರೆ ಜಿಲ್ಲೆಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ಅಭಿಮಾನಿಗಳು ತಂಡೋಪತಂಡವಾಗಿ ಹೋಗುತ್ತಾರೆ. ಉಭಯ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಜನರು ಬರುವುದು ತುಂಬ ವಿರಳ. 
-ಪ್ರಮೋದ್ ಮಧ್ವರಾಜ್
ಸಚಿವ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT