ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಯುಸಿಐ ಪ್ರತಿಭಟನಾ ಮೆರವಣಿಗೆ

ಪಡಿತರಕ್ಕೆ ಕೂಪನ್‌ ವಿತರಣೆ ಪದ್ಧತಿ, ನಗದು ವರ್ಗಾವಣೆಗೆ ವಿರೋಧ
Last Updated 18 ಜನವರಿ 2017, 5:28 IST
ಅಕ್ಷರ ಗಾತ್ರ

ರಾಯಚೂರು: ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಧಾನ್ಯಗಳನ್ನು ನೀಡುವ ಬದಲಿಗೆ ನಗದು ವರ್ಗಾಯಿಸುವ ಯೋಜನೆ ಮತ್ತು ಕೂಪನ್ ಪದ್ಧತಿ ಕೈಬಿಡಬೇಕು ಎಂದು ಸೂಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) (ಎಸ್‌ಯುಸಿಐ–ಸಿ) ಪಕ್ಷದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಭಗತ್‌ ಸಿಂಗ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಿಪಿಎಲ್ ಕಾರ್ಡು ಇಲ್ಲದ ಬಡವರಿಗೆ ಪಡಿತರ ಚೀಟಿ ನೀಡಲು ತಕ್ಷಣವೇ ಕ್ರಮಕೈಗೊಳ್ಳಬೇಕು. ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆಯನ್ನು ಯಾವುದೇ ತೊಂದರೆಯಾಗದಂತೆ ವಿತರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎನ್.ಎಸ್. ವೀರೇಶ್, ಕೆಲವು ತಿಂಗಳಿಂದ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗಿದೆ. ಅಡುಗೆ ಅನಿಲವೂ ಇಲ್ಲ. ಸೀಮೆಎಣ್ಣೆಯೂ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಪಡಿತರ ಚೀಟಿದಾರರು ಪ್ರತಿ ತಿಂಗಳು ಕೂಪನ್ ಪಡೆಯಬೇಕೆಂಬ ನಿಯಮ ವಿಧಿಸಿರುವ ಕಾರಣ ಬಡ ರೈತರು, ಕಾರ್ಮಿಕರು ಕೆಲಸ ಬಿಟ್ಟು ಕೂಪನ್‌ ಪಡೆಯಲು ಮತ್ತು ಪಡಿತರಕ್ಕಾಗಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಜನವರಿಯಿಂದ ಪಡಿತರ ಧಾನ್ಯ ವಿತರಣೆ ಬದಲು ನಗದು ವರ್ಗಾವಣೆ ಮಾಡುವ ಹೊಸ ಯೋಜನೆಯನ್ನು ಆರಭಿಸಲಾಗಿದೆ. ಐದು ಜನರ ಕುಟಂಬಕ್ಕೆ ತಿಂಗಳಿಗೆ ₹ 800 ಅನ್ನು ಮನೆಯ ಯಜಮಾನನ ಖಾತೆಗೆ ನೀಡಲಾಗುವುದಂತೆ. ಇದೇ ಯೋಜನೆಯನ್ನು ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ಅನ್ವಯಿಸಿದರೆ ಸರ್ಕಾರಕ್ಕೆ ದವಸ-ಧಾನ್ಯಗಳನ್ನು ಕೊಳ್ಳುವ, ನ್ಯಾಯಬೆಲೆ ಅಂಗಡಿಗಳನ್ನು ನೋಡಿಕೊಳ್ಳುವ ಯಾವ ಜವಾಬ್ದಾರಿಯೂ ಇರುವುದಿಲ್ಲ. ಆದರೆ ಈ ಹಣದಲ್ಲಿ ಅವಶ್ಯಕ ವಸ್ತುಗಳನ್ನು ಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರಸಲ್ಲಿ ಸಲ್ಲಿಸಲಾಯಿತು. ಈ ಪತ್ರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುನೀತಕುಮಾರ್‌, ಮಹೇಶ್, ಚನ್ನಬಸವ ಜಾನೇಕಲ್, ರಾಮಣ್ಣ, ಚಂದ್ರಗಿರೀಶ್, ಚೇತನಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT