ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

102 ತಾಂಡಾ ಕಂದಾಯ ಗ್ರಾಮಕ್ಕೆ ಪ್ರಸ್ತಾವ

Last Updated 18 ಜನವರಿ 2017, 5:37 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ಒಟ್ಟು 180 ಲಂಬಾಣಿ ತಾಂಡಾಗಳಿದ್ದು, ಅವುಗಳಲ್ಲಿ 102 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರು ತಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿ ಕಾರಿ ಡಾ.ಬಿ.ಸಿ.ಸತೀಶ್ ತಿಳಿಸಿದರು.

ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು,‘ 1993–96ನೇ ತಿದ್ದುಪಡಿ ಪ್ರಕಾರ ಲಂಬಾಣಿ ತಾಂಡಾ ಗಳನ್ನು ಕಂದಾಯ ಗ್ರಾಮ ಗಳನ್ನಾಗಿ ಪರಿವರ್ತಿಸುವಂತೆ ಸರ್ಕಾರದ ಆದೇಶ ಇದೆ. ಅದರಂತೆ ಜಿಲ್ಲಾಡಳಿತ ತಾಂಡಾಗಳ ಸರ್ವೆಕಾರ್ಯ ನಡೆಸಿದೆ. ಸರ್ವೆ ನಡೆಸುವ ಸಂದರ್ಭದಲ್ಲಿ ತಾಂಡಾ ಗಳು ಸರ್ಕಾರಿ ಭೂಮಿಯಲ್ಲಿ ಕೆಲವರು ಮನೆಗಳನ್ನು ಕಟ್ಟಿಕೊಂಡು ನೆಲೆಸಿದ್ದರೆ, ಕೆಲವೊಂದು ತಾಂಡಾಗಳಲ್ಲಿ ಖಾಸಗಿ ಭೂಮಿಯಲ್ಲಿ ನೆಲೆಸಿದ್ದಾರೆ.

ವಿಶೇಷ ಪ್ರಕರಣಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಭೂಮಿ ಜಂಟಿ ನೆಲೆಯಲ್ಲಿಯೂ ತಾಂಡಾಗಳ ಅಸ್ತಿತ್ವ ಪಡೆದು ಕೊಂಡಿ ರುವುದು ಕಂಡು ಬಂದಿದೆ. ಹಾಗಾಗಿ, ಸದ್ಯ ಸರ್ಕಾರಿ ಭೂಮಿ ಯಲ್ಲಿರುವ ಮತ್ತು ಸರ್ಕಾರದ ನಿಯಮಾನುಸಾರ ಇರುವ ತಾಂಡಾಗಳ ಪಟ್ಟಿ ತಯಾರಿಸಿ ಕಂದಾಯ ಗ್ರಾಮ ಪರಿವರ್ತನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದರು.

ಬಹಳಷ್ಟು ತಾಂಡಾ ಗಳು, ಹಾಡಿಗಳು, ಕುಗ್ರಾ ಮಗಳು ನೆಲೆ ನಿಂತಿರುವ ಸರ್ವೆ ನಂಬ ರ್‌ಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹಲವು ತಾಂಡಾ ಗಳು ಅರಣ್ಯ ಭೂಮಿ ಯಲ್ಲಿ ಬರುತ್ತವೆ. ಅಂತಹುಗಳನ್ನು ಎರಡನೇ ಹಂತದ ಸರ್ವೇ ಸಮಯದಲ್ಲಿ ಪರಿ ಗಣಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಪಟ್ಟಿಯಲ್ಲಿರುವ ಕೆಲವೊಂದು ತಾಂಡಾ ಗಳಲ್ಲಿ ಎರಡು ಮೂರು ಬಡಾವಣೆಗಳೂ ಬರುತ್ತವೆ. ಅಂತಹ ಸಂದ ರ್ಭದಲ್ಲಿ ಸರ್ವೆ ನಂಬರ್‌ ಒಡೆ ಯುವ ಕಾರ್ಯ ಕೂಡ ಕೈಗೊ ಳ್ಳಬೇಕಾಗುತ್ತದೆ. ಅಂದರೆ ಮೂಲ ತಾಂಡಾಕ್ಕೆ ಮೂಲ ಸರ್ವೆ ನಂಬರ್‌ ಕೊಟ್ಟು ಉಳಿದ ಪ್ರದೇಶಕ್ಕೆ ಹೊಸ ಸರ್ವೆ ನಂಬ ರ್ ನೀಡಬೇಕಾಗುತ್ತದೆ.

ನಂತರ ಜನರು ನೆಲೆ ನಿಂತಿರುವ ಕಂದಾಯ ಭೂಮಿ ಯನ್ನು ಎಷ್ಟು ಎಕರೆಯಲ್ಲಿ ವಿಸ್ತಾರ ಗೊಂಡಿದೆ ಎಂಬುದನ್ನು ಲೆಕ್ಕಾಚಾರ ಹಾಕಿ ಅದಕ್ಕೆ ಒಂದು ನಿರ್ದಿಷ್ಟ ಹೆಸರಿನಿಂದ ಗುರುತಿಸಿ ಗ್ರಾಮ ಠಾಣವನ್ನಾಗಿ ಪರಿವರ್ತಿಸಲಾಗುತ್ತದೆ. ಜಿಲ್ಲಾಡಳಿತ ಪರ್ವತನೆಯ ಹಂತ ದವರೆಗೂ ನಿರಂತರ ಕಾರ್ಯ ನಡೆಸಿದ್ದು, ಸದ್ಯ ಗ್ರಾಮಠಾಣವ್ನನಾಗಿ ಘೋಷಿಸಿ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಗಳನ್ನಾಗಿ ಪರಿವರ್ತಿಸಲು ಸರ್ಕಾ ರಕ್ಕೆ ಪ್ರಸ್ತಾವ ಕಳುಹಿಸಿದೆ’ ಎಂದು ಅವ ರು ವಿವರಿಸಿದರು.

‘ತಾಂಡಾ ಗಳು ಕಂದಾಯ ಗ್ರಾಮ ಗಳಾದ ಮೇಲೆ ಸನಿಹದ  ಗ್ರಾಮ ಪಂಚಾ ಯಿತಿ ವ್ಯಾಪ್ತಿಗೆ ಒಳಪಡುತ್ತವೆ. ಜನರು ಗ್ರಾ.ಪಂಗಳಿಂದ ಸೌಲಭ್ಯಗಳನ್ನು ಪಡೆ ಯುವ ಹಕ್ಕು ಪಡೆಯಲಿದ್ದಾರೆ’ ಎಂ ದರು. ‘ತಾಂಡಾಗಳಿಗಿಲ್ಲ ಕಂದಾಯ ಗ್ರಾಮಭಾಗ್ಯ’ ಶೀರ್ಷಿಕೆಯಡಿ ‘ಪ್ರಜಾ ವಾಣಿ’ಯಲ್ಲಿ ಡಿಸೆಂಬರ್ 30ರಂದು ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT