ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಕಾಮಗಾರಿಗೆ ₹ 55 ಲಕ್ಷ ಅನುದಾನ

ಮೂಡಿಗೆರೆ: ತಾಲ್ಲೂಕು ಪಂಚಾಯಿತಿ ಸರ್ವ ಸದಸ್ಯರ ಸಭೆ
Last Updated 18 ಜನವರಿ 2017, 5:47 IST
ಅಕ್ಷರ ಗಾತ್ರ

ಮೂಡಿಗೆರೆ: ಬರಗಾಲದ ತುರ್ತುಸ್ಥಿತಿ ಯನ್ನು ನಿರ್ವಹಿಸುವ ಸಲುವಾಗಿ ತಾಲ್ಲೂಕಿಗೆ ₹ 55 ಲಕ್ಷ ಅನುದಾನ ಬಂದಿದ್ದು, ಕುಡಿಯುವ ನೀರಿನ ಯೋಜನೆಗಳ ತುರ್ತು ಕಾರ್ಯಕ್ಕೆ ಬಳಸಿ ಕೊಳ್ಳಬೇಕು ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.

ತಾಲ್ಲೂಕು ಪಂಚಾಯಿತಿಯ ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರಿನ ತುರ್ತು ಕಾರ್ಯಗಳಿಗಾಗಿ ₹ 55 ಲಕ್ಷ ಮಂಜೂರಾಗಿದ್ದು, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕುಡಿಯುವ ನೀರಿನ ತುರ್ತು ಕಾರ್ಯಗಳ ಪಟ್ಟಿ ತಯಾರಿಸಬೇಕು ಎಂದರು.

ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆಯಲ್ಲಿ ಕೈಗೊಂಡ ಕಾಮ ಗಾರಿಗಳು ನಿಗದಿತ ಸಮಯಕ್ಕೆ ಮುಕ್ತಾಯವಾಗಿಲ್ಲ. ಅಲ್ಲದೇ ಹಲವು ಕಾಮಗಾರಿಗಳು ಕಳಪೆಯಾಗಿರುವುದರ ಕುರಿತು ಸ್ಥಳೀಯ ಗ್ರಾಮಸ್ಥರು ದೂರು ತ್ತಿದ್ದು, ಜನರಿಗೆ ಉತ್ತರ ನೀಡದ ಸ್ಥಿತಿ ಉಂಟಾಗಿದೆ.

ಕುಡಿಯುವ ನೀರಿನ ಯೋಜನೆಗಳು ಇಂತಹ ಪರಿಸ್ಥಿತಿಯನ್ನೇ ಸೃಷ್ಟಿಸಿದರೆ ಮುಲಾಜಿಲ್ಲದೇ ಸಂಬಂ ಧಿಸಿದ ಅಧಿಕಾರಿಯನ್ನೇ ಹೊಣೆಗಾರ ರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಅನವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ಬಹಳಷ್ಟು ದೂರುಗಳು ಬರುತ್ತಿದ್ದು, ಇಲಾಖೆಯ ಹಣ ಖರ್ಚು ಮಾಡುವ ಸಲುವಾಗಿ ಗ್ರಾಮಗಳ ಗೋಮಾಳ ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ. ಅರಣ್ಯ ಬೆಳೆಸಲು ನಮ್ಮೆಲ್ಲರ ಸಹಕಾರವಿದೆ. ಆದರೆ ಸಾರ್ವಜನಿಕರಿಗೆ ಕಿರುಕುಳ ನೀಡಿ ದೌರ್ಜನ್ಯವೆಸಗುವುದು ಸರಿಯಲ್ಲ.

ಅರಣ್ಯ ಇಲಾಖೆಯು ಜನಪ್ರತಿನಿಧಿಗಳು, ಸಾರ್ವವಜನಿಕರೊಂದಿಗೆ ಚರ್ಚಿಸದೇ ಏಕಪಕ್ಷೀಯವಾಗಿ ನಿರ್ಧಾರ ತೆಗದುಕೊ ಳ್ಳುತ್ತಿದ್ದು, ಅಧಿಕಾರಿಗಳ ನಡೆಯೇ ಅನುಮಾನ ಮೂಡಿಸುತ್ತಿದೆ, ತಾಲ್ಲೂಕಿನ ಲ್ಲಾಗಿರುವ ಅರಣ್ಯ ಇಲಾಖೆಯ ಅಭಿ ವೃದ್ಧಿ ಕಾರ್ಯಗಳನ್ನು ತನಿಖೆ ನಡೆಸ ಬೇಕು ಎಂದು ನಿರ್ಣಯ ಕೈಗೊಳ್ಳ ಲಾಯಿತು.

ಸುಸ್ಥಿತಿಯತ್ತ ಸಾಗುತ್ತಿದ್ದ ಮಹಾತ್ಮ ಗಾಂಧಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಹಳಿ ತಪ್ಪುತ್ತಿದ್ದು, ಆಸ್ಪತ್ರೆಯು ಅವ್ಯವ ಸ್ಥೆಯ ತಾಣವಾಗುತ್ತಿದೆ. ಆಡಳಿತಾಧಿ ಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ ಸಾರ್ವಜನಿಕರಿಗೆ ಸೂಕ್ತವಾಗಿ ಸೇವೆ ಒದಗಿಸಲಾಗದು. ಇದರಿಂದ ಜನಪ್ರತಿನಿಧಿಗಳು ಜನರಿಗೆ ಮುಖ ತೋರಿಸದಂತಾಗುತ್ತದೆ. ಕೂಡಲೇ ಆಸ್ಪತ್ರೆಯ 108 ತುರ್ತುಚಿಕಿತ್ಸಾ ವಾಹನ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು, ಎಕ್ಸರೇ ಸೇರಿದಂತೆ ವಿವಿಧ ವಿಭಾಗಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದರು.

ಪಟ್ಟಣದ ಅನುದಾನಿತ ಶಾಲೆಯೊಂ ದರಲ್ಲಿ ಶಿಕ್ಷಕರೊಬ್ಬರು ಶಾಲೆಯಿಂದ ಮೂಟೆಯೊಂದನ್ನು ದ್ವಿಚಕ್ರವಾಹನದಲ್ಲಿ ಮನೆಗೆ ಸಾಗಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾ ಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಗೆ ಸೂಚಿಸಲಾಯಿತು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್‌, ಉಪಾಧ್ಯಕ್ಷೆ ಸವಿತಾರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಮ್ಮ, ಕಾರ್ಯ ನಿರ್ವಹ ಣಾಧಿಕಾರಿ ಗುರುದತ್‌, ತಾಲ್ಲೂಕು ಪಂಚಾಯಿತಿ ಸರ್ವ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

*
‘ಶಿಕ್ಷಣ ಇಲಾಖೆ ಸಮಾಜ ನಿರ್ಮಾಣದ ಬುನಾದಿಯಾಗಿದ್ದು, ಶಿಕ್ಷಕರು ಹಳಿತಪ್ಪಿದರೆ ಸಮಾಜವೇ ಅಧಃಪತನವಾಗುತ್ತದೆ’.
-ಕೆ.ಸಿ. ರತನ್‌,
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT