ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ–ಕಾಲೇಜುಗಳು ಕೀಳಲ್ಲ

ಕಾಲೇಜು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪದಲ್ಲಿ ಶಾಸಕ
Last Updated 19 ಜನವರಿ 2017, 5:18 IST
ಅಕ್ಷರ ಗಾತ್ರ

ಬೀರೂರು: ಕುಂದು– ಕೊರತೆಗಳ ನಡು ವೆಯೂ ಸರ್ಕಾರಿ ಶಾಲೆ ಮತ್ತು ಕಾಲೇಜು ಗಳು ಉತ್ತಮ ಫಲಿತಾಂಶ ನೀಡುತ್ತಿದ್ದು, ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗೆಗಿನ ಕೀಳರಿಮೆ ತೊಲಗಬೇಕು ಎಂದು ಶಾಸಕ ವೈ.ಎಸ್‌.ವಿ.ದತ್ತ ಸಲಹೆ ನೀಡಿದರು.

ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪದಲ್ಲಿ ಬುಧವಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಡೂರು ತಾಲ್ಲೂಕಿನಲ್ಲಿ ನಡೆಯುತ್ತಿ ರುವ ಸರ್ಕಾರಿ ಶಾಲೆ–ಕಾಲೇಜುಗಳು ವಿದ್ಯಾರ್ಥಿ ಹಾಗೂ ಗುಣಮಟ್ಟದ ವಿಷ ಯದಲ್ಲಿ ರಾಜ್ಯದ ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲ. ಉತ್ತಮ ಬೋಧಕವರ್ಗ ಮತ್ತು ತಂಡಸ್ಫೂರ್ತಿ ಅತ್ಯುತ್ತಮ ಫಲಿತಾಂಶ ತರಲು ಇಲ್ಲಿ ಶ್ರಮಿಸುತ್ತಿವೆ.

ಈ ಕಾಲೇಜುಗಳಲ್ಲಿ ಅತ್ಯುತ್ತಮ ಸೌಕರ್ಯ ಕಲ್ಪಿಸಬೇಕೆಂಬ ಬಯಕೆ ತಮಗೂ ಇದ್ದು, ಅದರ ಅಂಗವಾಗಿ ಕಡೂರು ಮತ್ತು ಬೀರೂರು ಪದವಿಪೂರ್ವ ಕಾಲೇಜುಗಳಲ್ಲಿ ತಲಾ ಎರಡು ಸ್ಮಾರ್ಟ್‌ರೂಮ್‌ ಸ್ಥಾಪಿಸಿ, ತಾಂತ್ರಿಕತೆಯ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ತೀರ್ಮಾ ನಿಸಿದ್ದು  ಮಾರ್ಚ್‌ ಒಳಗೆ ಈ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ಪ್ರಾಚಾರ್ಯರಾದ ಜಿ.ಎಚ್‌. ಯಶೋದಾ ಪ್ರಾಸ್ತಾವಿಕವಾಗಿ ಮಾತ ನಾಡಿ, ಕಾಲೇಜಿನಲ್ಲಿ ವರ್ಷ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಕೊಠಡಿ, ಶೌಚಾಲಯ, ಕಾಂಪೌಂಡ್‌ ಅಗತ್ಯವಿದ್ದು, ಬೋಧಕರ ಕೊರತೆಯನ್ನು ನೀಗಿಸಲು ಶಾಸಕರ ಸಹಕಾರದ ಅಗತ್ಯ ವಿದೆ. ನಮ್ಮಲ್ಲಿ ಮೂಲಸೌಕರ್ಯ ಅಭಿ ವೃದ್ಧಿ ಪಡಿಸಿದರೆ ಉತ್ತಮ ಫಲಿತಾಂಶ ಕೊಡಲು ಇನ್ನೂ ಹೆಚ್ಚಿನ ಶ್ರಮ ವಹಿಸುವುದಾಗಿ ತಿಳಿಸಿದರು.

ಪ್ರತಿಕ್ರಿಯಿಸಿದ ಶಾಸಕ ದತ್ತ, ಬೋಧಕರ ಕೊರತೆ ನೀಗಿಸುವ, ಶೌಚಾ ಲಯ ಮತ್ತು ಕಾಂಪೌಂಡ್‌ ನಿರ್ಮಿಸಲು ಶೀಘ್ರ ಕ್ರಮ ವಹಿಸುವ ಭರವಸೆ ನೀಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಕಾರವಾ ಗುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಉಚಿತ ಸಿಇಟಿ ತರಬೇತಿ ಆರಂಭಿಸಲೂ ಸಹಕರಿಸುವುದಾಗಿ ತಿಳಿಸಿ, ಉತ್ತಮ ಫಲಿತಾಂಶ ಪಡೆಯುವ ವಿದ್ಯಾರ್ಥಿಗಳಿಗೆ ವಾರ್ಷಿಕ ₹10ಸಾವಿರ ಪ್ರೋತ್ಸಾಹಧನ ವಿತರಿಸುವುದಾಗಿ ವಾಗ್ದಾನ ಮಾಡಿದರು.

ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್‌, ವಿದ್ಯಾರ್ಥಿ ಜೀವನದ ಮುಖ್ಯ ತಿರುವು ಈ ವ್ಯಾಸಂಗ ಸಮಯವಾಗಿದ್ದು ಸಮ ಯದ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳುವಂತೆ ಕರೆ ನೀಡಿದರು.

2015–16ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗ ಡೆಯಾದ ವಿದ್ಯಾರ್ಥಿಗಳನ್ನು ಶಾಸಕರು ಮತ್ತು ಕಾಲೇಜು ಪರವಾಗಿ ಗೌರವಿಸ ಲಾಯಿತು. ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಅತಿಥಿಗಳಾಗಿ ರಂಗಕರ್ಮಿ ಅಪರಂಜಿ ಶಿವರಾಜ್‌, ದಾನಿ ಕೆ.ಕೆ.ಲಿಂಗರಾಜ್‌, ಕಾಲೇಜು ಅಭಿ ವೃದ್ಧಿ ಸಮಿತಿಯ ತಿಮ್ಮೇಗೌಡ, ಬಿ.ಪಿ. ನಾಗರಾಜ್‌, ಪುರಸಭೆ ಸದಸ್ಯರಾದ ಎಸ್‌.ಎಸ್‌.ದೇವರಾಜ್‌, ವಸಂತಾ ರಾಮು, ಜೆಡಿಎಸ್‌ ಮುಖಂಡ ಕೋಡಿ ಹಳ್ಳಿ ಮಹೇಶ್‌, ಉಪನ್ಯಾಸಕರಾದ ಭಾಗ್ಯಮ್ಮ, ಡಾ.ತವರಾಜ್‌, ಡಾ. ರವೀಂದ್ರನಾಥ್‌, ಬಿ.ವಿ.ಪ್ರದೀಪ್‌, ಸದಾಶಿವಯ್ಯ, ಕೃಷ್ಣಸ್ವಾಮಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT