ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 2.59 ಲಕ್ಷ ಎಚ್‌ಐವಿ ರೋಗಿಗಳು!

Last Updated 19 ಜನವರಿ 2017, 5:23 IST
ಅಕ್ಷರ ಗಾತ್ರ

ಯಾದಗಿರಿ: ‘ಎಚ್‌ಐವಿ ರಕ್ತ ತಪಾ ಸಣೆಯಿಂದ ಮಾತ್ರ ಗುರು ತಿಸಬಹುದು’ಎಂದು ಆರೋಗ್ಯ ಇಲಾಖೆಯ ಶೀತಲಾ ಚೌವ್ಹಾಣ ತಿಳಿಸಿದರು.

ಸಮೀಪದ ಸೈದಾಪುರದಲ್ಲಿನ ಮಲ್ಹಾರ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ  ಬುಧವಾರ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಏಡ್ಸ್ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಕೆಟ್ಟ ಹವ್ಯಾಸಗಳಿಂದ ದೂರ ಇದ್ದಾಗ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ’ಎಂದು ಅವರು ಕಿವಿಮಾತು ಹೇಳಿದರು.

ಎಚ್‌ಐವಿ ತರಬೇತಿ ಸಹವರ್ತಿ ಶಿಕ್ಷಕ ಶ್ರೀಧರ ಮಾತನಾಡಿ,‘15 ರಿಂದ 29ರ ವಯಸ್ಕರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಚ್‌ಐವಿ ಪಾಸಿಟಿವ್ ಕಂಡು ಬರುತ್ತಿದೆ. ದೀರ್ಘ ಕಾಲದ ಜ್ವರ, ಬೇಧಿ, ಅತಿಯಾದ ಕೆಮ್ಮು ರೋಗದ ಲಕ್ಷಣಗಳಾಗಿವೆ. ಬಹು ಲೈಂಗಿಕ ಸಂಪರ್ಕ  ಹಾಗೂ ಚರ್ಮಕ್ಕೆ ಗಾಯ ಮಾಡುವ ಉಪಕರಣಗಳಿಂದ ದೂರವಿರಬೇಕು ಎಂದು ಹೇಳಿದರು.

ಸಹವರ್ತಿ ದೇವರಾಜ ಮಾತನಾಡಿ, ‘ಅಪರಿತ ವ್ಯಕ್ತಿಗಳೊಂದಿಗೆ ಹಾಗೂ ಮದುವೆಗಿಂತ ಮುಂಚೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಎಚ್‌ಐವಿ ಹರಡಲು ಕಾರಣವಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ 2.59 ಲಕ್ಷ ಎಚ್‌ಐವಿ ರೋಗಿಗಳಿದ್ದಾರೆ. ಇದು 1981 ರಲ್ಲಿ ಅಮೆರಿಕದಲ್ಲಿ ಮೊದಲು ಕಂಡು ಬಂದಿತು.1986ರಲ್ಲಿ ದೇಶದಲ್ಲಿ ಹಾಗೂ 1988ರಲ್ಲಿ  ರಾಜ್ಯದಲ್ಲಿ ಈ ರೋಗ ಪತ್ತೆಯಾಗಿದೆ.

ಇದು ಬರದಂತೆ ಎಚ್ಚರ ವಹಿಸಬೇಕಾಗಿದೆ. ಇದೊಂದು ಮಾರಕ ರೋಗವಾಗಿದ್ದು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬಲಿ ಯಾಗುತ್ತಿದ್ದಾರೆ ಎಂದುಕಳವಳ ವ್ಯಕ್ತಿಸಿದರು.

ವಿದ್ಯಾರ್ಥಿಗಳಾದ ವಿಯಲಕ್ಷ್ಮಿ, ಸ್ವಾತಿಕ ಅಭಿಪ್ರಾಯ ಹಂಚಿಕೊಂಡರು. ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು.

ಡಿ.ಇಡಿ ಕಾಲೇಜಿನ ಕರಬಸಯ್ಯ ದಂಡಿಗಿಮಠ, ಹಂಪಣ್ಣ ಸಜ್ಜನ ಶೆಟ್ಟಿ, ಶಿಕ್ಷಕ ರಾಚಯ್ಯ ಬಾಡಿಯಾಲ, ಉಪನ್ಯಾಸಕರಾದ ದೇವಿಂದ್ರ ಪಿರಾ, ಬಸವರಾಜ ಭರಮಶೆಟ್ಟಿ, ಎನ್. ಶಾಂತಲಾ, ಅನುರಾಧಾ ಉಪಸ್ಥಿತರಿದ್ದರು. ಭೀಮಶ್ರೀ ಪ್ರಾರ್ಥಿಸಿದರು. ಚಂದ್ರಶೇಖರ ಡೊಣ್ಣೆಗೌಡ ಸ್ವಾಗತಿಸಿದರು. ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಸಿದರು. ಶ್ರೀದೇವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT