ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರೇಜ್ ನಿರ್ಮಿಸಲು ಆದ ವೆಚ್ಚ ಎಷ್ಟು?

ಸಾರ್ವಜನಿಕ ಲೆಕ್ಕಪತ್ರ ನೀಡಲು ಶಾಸಕರಿಗೆ ಸವಾಲು
Last Updated 19 ಜನವರಿ 2017, 5:49 IST
ಅಕ್ಷರ ಗಾತ್ರ

ಸಾವಳಗಿ: ಎ.ಪಿ.ಎಂ.ಸಿ ಚುನಾವಣೆಯ ಪ್ರಚಾರದ ಸಮಯದಲ್ಲಿ ಸಾವಳಗಿ ಭಾಗದಲ್ಲಿ ಕಾಂಗ್ರೆಸ್ಸಿನಲ್ಲಿಯೇ ಕೆಲವರು ಭಯೋತ್ಪಾದಕರಿದ್ದಾರೆ ಎಂದು ಶಾಸಕ ಸಿದ್ದು ನ್ಯಾಮಗೌಡ ಹೇಳಿಕೆಯಿಂದ ಪ್ರಜ್ಙಾ ವಂತ ಜನತೆ ತಲೆತಗ್ಗಿಸುವಂತೆ ಆಗಿದೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾ ಲಕ ರಾಜು ಮೇಲಿನಕೇರಿ ಆರೋಪಿ ಸಿದ್ದಾರೆ.

ಅವರು ಈಚೆಗೆ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಶಾಸಕರು ಈ ಕ್ಷೇತ್ರದ ನಾಯಕರಾಗಿದ್ದು, ಕಾರ್ಯ ಕರ್ತರನ್ನು ಭಯೋತ್ಪಾದಕರಿಗೆ ಹೋಲಿ ಸಿರುವುದು ಸರಿಯಲ್ಲ. ಹಾಗಾದರೆ ಅವರೇ ಭಯೋತ್ಪಾದಕರ ನಾಯಕರು ಆಗುತ್ತಾರೆ ಎಂದು ಲೇವಡಿ ಮಾಡಿದರು.

ಸಿದ್ದು ನ್ಯಾಮಗೌಡರಿಗೆ ಪಕ್ಷಾತೀತ ವಾಗಿ ರೈತರು ಚಿಕ್ಕಪಡಸಲಗಿ ಬ್ಯಾರೇಜ್‌ ನಿರ್ಮಿಸುವ ವಿಷಯದಲ್ಲಿ ಲೆಕ್ಕಪತ್ರ ಬಹಿರಂಗಪಡಿಸಬೇಕು ಎಂದು ಕೇಳಿದ್ದಕ್ಕೆ ಲೆಕ್ಕಪತ್ರ ಕೊಡುವುದು ಬಿಟ್ಟು ತಮ್ಮ ಹಿಂಬಾಲಕರಿಂದ ರೈತರ ವಿರುದ್ಧ ಪತ್ರಿಕೆಯ ಮೂಲಕ ಟೀಕೆ ಮಾಡಿಸುತ್ತಿ ರುವುದು ನಾಚಿಕೆಗೇಡಿನ ಸಂಗತಿ ಎಂದರು.                                   

ರೈತರು 1990ರಲ್ಲಿ ಬ್ಯಾರೇಜ್ ನಿರ್ಮಿಸಿದ ನಂತರ ಶಾಸಕರು ₹ 33ಲಕ್ಷ  ಉಳಿದಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಆ ಹಣ ಠೇವಣಿ ಇಟ್ಟಿದ್ದರೆ ಈಗ ಅಂದಾಜಿ ₹ 6 ಕೋಟಿ ಆಗುತ್ತಿತ್ತು. ಡ್ಯಾಂ  ಒಡೆದಾಗ ಮಾಜಿಮುಖ್ಯಮಂತ್ರಿ ಜೆ.ಎಚ್. ಪಟೇಲ ಅವರು ₹ 30ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಅದರಲ್ಲಿ ಕೇವಲ ₹ 10 ಲಕ್ಷ ಖರ್ಚು ಮಾಡಿದ್ದು, ಉಳಿದ ₹ 20 ಲಕ್ಷ ಎಲ್ಲಿ ಎಂದು ಪ್ರಶ್ನೆ ಮಾಡಿದ್ದರು.

ಬ್ಯಾರೇಜ್ ಎತ್ತರ ಹಾಗೂ ಮೋಟಾರು ಅಳವಡಿಸಲು ಅಂದಾಜು ₹ 4.5 ಕೋಟಿ ಆಗುತ್ತದೆ ಎಂದು ನ್ಯಾಮಗೌಡ ಹೇಳಿ ರೈತರಿಂದ ₹ 2 ಕೋಟಿ  ವಂತಿಕೆ ಹಣ ಸಂಗ್ರಹಿಸಿ ಇನ್ನು ₹ 2.5 ಕೋಟಿ ಹಣವನ್ನು ಕೊಡಿಸಿ ಒಟ್ಟು ₹ 4.5 ಕೋಟಿ ಕೋಟಿಯಲ್ಲಿ ಬ್ಯಾರೇಜ್‌ ಎತ್ತರಿಸಿದ್ದರು. ಆದರೆ ಬ್ಯಾರೇಜಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ₹ 10 ಕೋಟಿ ಅನುದಾನ ಬಿಡುಗಡೆ  ಮಾಡಿ ದರು. ಅದರಲ್ಲಿ ₹ 4.5 ಕೋಟಿ ಹಣ ಖರ್ಚುಮಾಡಿ ಇನ್ನುಳಿದ ₹ 5.5ಕೋಟಿ ಎಲ್ಲಿದೆ ಎಂದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

1990 ರಲ್ಲಿ ₹ 33 ಲಕ್ಷ ಇಂದಿನ ಅಂದಾಜು  ₹ 6 ಕೋಟಿ, ಪಟೇಲರ ಅನುದಾನದಲ್ಲಿ ಉಳಿದ ₹ 20 ಲಕ್ಷ, ಸಿದ್ದರಾಮಯ್ಯನವರ ಅನುದಾನದಲ್ಲಿ ₹ 5.5 ಕೋಟಿ ಸೇರಿ ₹ 11.70 ಕೋಟಿ ಹಣ ಏನಾಯಿತು ಎಂದು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಜಮಖಂಡಿಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ರಾಯಲ್ ಪ್ಯಾಲೇಸ್ ಪ್ರತಿ ಯೊಂದು ವಿದ್ಯಾರ್ಥಿಯಿಂದ ₹ 5000 ರೈತ ಸಂಘದ ಹೆಸರಿನಲ್ಲಿ ರಶೀದಿ ಹರಿ ಯುತ್ತಿದ್ದು, 2006 ರಿಂದ ಇಲ್ಲಿಯವರೆಗೆ 1200 ಮಕ್ಕಳು ದಾಖಲಾಗಿದ್ದಾರೆ.

ಇದರ ಪ್ರಕಾರ ₹ 6 ಕೋಟಿ ಹಣ ಸಂಗ್ರಹ ವಾಗಿತ್ತು. ಆದರೆ ರೈತ ಸಂಘದಲ್ಲಿ ಖರ್ಚು ವೆಚ್ಚದ ದಾಖಲೆಗಳಿಲ್ಲ, ಸುಮಾರು 6 ವರ್ಷಗಳಿಂದ 25 ಗ್ರಾಮಗಳ ರೈತರ ಕುಟುಂಬಗಳಿಂದ ಕೃಷ್ಣಾ ನದಿಗೆ ಪಂಪ್‌ಸೆಟ್‌ ಕೂಡಿಸಲು ಅನುಮತಿ ಪಡೆಯಬೇಕಾದರೆ ಒಂದು ಪಂಪ್‌ಸೆಟ್‌ಗೆ ₹ 5000 ಕೃಷ್ಣಾ ತೀರ ರೈತ ಸಂಘಕ್ಕೆ ಹಣ ಪಾವತಿ  ಮಾಡಿದ್ದಾರೆ.

ಈ ಹಣದ ಲೆಕ್ಕವನ್ನು ತೋರಿಸಲಿ. 15 ದಿನದ ಒಳಗೆ ಲೆಕ್ಕಪತ್ರ ಬಹಿರಂಗಪಡಿ ಸದೇ ಇದ್ದರೆ ಅವ್ಯವಹಾರ ಆಗಿದೆ ಎಂಬುವುದು ಖಾತ್ರಿಯಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT