ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮಟ್ಟದ ರ‍್ಯಾಕಿಂಗ್‌ನಲ್ಲಿ ಬೆಂಗಳೂರಿಗೆ ನಾಲ್ಕನೇ ಸ್ಥಾನ

ಒಳ್ಳೇ ಸುದ್ದಿ
Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
ಇಂದು ರಿಯಲ್‌ ಎಸ್ಟೇಟ್‌ ಉದ್ದಿಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲೂ ಬೆಂಗಳೂರಿನ ವಿಷಯಕ್ಕೆ ಬಂದಾಗ ರಿಯಲ್ ಎಸ್ಟೇಟ್‌ ಕಳೆದ ಕೆಲ ವರ್ಷಗಳಿಂದ ಮುಂಚೂಣಿಯಲ್ಲಿದೆ.
 
ಇತ್ತೀಚೆಗೆ ಜೆಎಲ್‌್ಎಲ್‌ ನಡೆಸಿದ ಅಧ್ಯಯನದ ಪ್ರಕಾರ ಬೆಂಗಳೂರು ‘ಸಿಟಿ ಮೊಮೆಂಟೊ ಇಂಡೆಕ್ಸ್‌ ಫಾರ್ ಏಷ್ಯಾ ಫೆಸಿಫಿಕ್‌’ನಲ್ಲಿ ಬೆಂಗಳೂರು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಸಾಧಿಸಿದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸ್ಥಾನ ಪಡೆದುಕೊಂಡಿದೆ.
 
ಬೆಂಗಳೂರಿನಲ್ಲಿ ಆಗುತ್ತಿರುವ ತಂತ್ರಜ್ಞಾನ ಹಾಗೂ ಜಾಗತಿಕ ಸಂಪರ್ಕದಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರ ಹೆಚ್ಚು ಅಭಿವೃದ್ಧಿ ಹೊಂದಿದೆ ಎಂದು ಜೆಎಲ್‌ಎಲ್‌ ತನ್ನ ವರದಿಯಲ್ಲಿ ತಿಳಿಸಿದೆ.
 
‘ನಗರದಲ್ಲಿ ಇರುವ ಸಂಶೋಧನಾ ಕೇಂದ್ರಗಳು ಮತ್ತು ಇಲ್ಲಿನ ಶಿಕ್ಷಣ ಸಂಸ್ಥೆಗಳು ತಂತ್ರಜ್ಞಾನ ಕ್ಷೇತ್ರಕ್ಕೆ ಗಟ್ಟಿತನವನ್ನು ತಂದುಕೊಟ್ಟಿದೆ. ಬೆಂಗಳೂರಿಗೆ ಭಾರತದ ಸಿಲಿಕಾನ್‌ ವ್ಯಾಲಿ ಹೆಸರಿನ ಗರಿ ಮೂಡಿಸಲು ಬಹುಮುಖ್ಯ ಪಾತ್ರ ವಹಿಸಿವೆ’ ಎಂದು ಜೆಎಲ್‌ಎಲ್‌ನ ನಿರ್ದೇಶಕ ಜೆರೆಮಿ ಕೆಲ್ಲಿ  ಹೇಳಿದ್ದಾರೆ.
 
ಭಾರತದ ಶೇ 40ರಷ್ಟು ಐಟಿ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ನಗರದ ಪ್ರಮುಖ ಸ್ಥಳಗಳೂ ಸೇರಿದಂತೆ ಹೊರ ವಲಯದಲ್ಲೂ ಕೂಡ ಐಟಿ ಕಂಪೆನಿಗಳು ತಲೆ ಎತ್ತಿವೆ. ಇದರಿಂದ ರಿಯಲ್ ಎಸ್ಟೇಟ್‌ ಉದ್ದಿಮೆದಾರರಿಗೆ ಬೇಡಿಕೆ ಹೆಚ್ಚಿದೆ. ಐಟಿ ವಲಯದಲ್ಲಿ ಬೆಂಗಳೂರು ಗಣನೀಯ ಸ್ಥಾನ ಪಡೆಯಲು ಖಾಸಗಿ ಕಂಪೆನಿಗಳು ಮಹತ್ವದ ಕೊಡುಗೆ ನೀಡಿವೆ. 
 
‘ಸಿಟಿ ಮೊಮೆಂಟಂ ಇಂಡೆಕ್ಸ್ 2016: ದಿ ರೈಸ್‌ ಆಫ್ ದಿ ಇನ್ನೋವೇಶನ್‌ ಒರಿಯೆಂಟೆಡ್‌ ಸಿಟಿ’ ವರದಿಯಲ್ಲಿ ಉಲ್ಲೇಖಿಸಿರುವ ಜಗತ್ತಿನ 20 ಉದಯೋನ್ಮುಖ ಪಟ್ಟಣಗಳಲ್ಲಿ ಬೆಂಗಳೂರು ಹಾಗೂ ಹೈದರಾಬಾದ್ ಸೇರಿವೆ. ಬೆಂಗಳೂರಿಗೆ ಈ ಪಟ್ಟಯಲ್ಲಿ 4ನೇ ಸ್ಥಾನ ಸಿಕ್ಕಿದೆ. ಲಂಡನ್‌, ಸಿಲಿಕಾನ್‌ ವ್ಯಾಲಿ ಹಾಗೂ ಡಬ್ಲಿನ್‌ ಕ್ರಮವಾಗಿ ಒಂದು, ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ.
 
‘ಇತ್ತೀಚೆಗೆ ಬೆಂಗಳೂರಿನಲ್ಲಿ ನವೋದ್ಯಮ ಕಂಪೆನಿಗಳು (ಸ್ಟಾರ್ಟ್‌ ಅಪ್ಸ್‌) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಅಮೆರಿಕದ ಸಿಲಿಕಾನ್‌ ವ್ಯಾಲಿಗೆ ಸರಿಸಮವಾಗಿ ನಿಲ್ಲಲಿದೆ. ಮುಂದಿನ ಕೆಲ ವರ್ಷಗಳಲ್ಲಿ ನಗರದಲ್ಲಿ 55 ಲಕ್ಷದಷ್ಟು ಸಾಫ್ಟ್‌ವೇರ್ ಉದ್ಯೋಗಿಗಳು ಹುಟ್ಟಿಕೊಳ್ಳಲಿದ್ದಾರೆ.  ಸಾಫ್ಟ್‌ವೇರ್ ಹಾಗೂ ಐಟಿ ಕಂಪೆನಿಗಳೇ ಇಂದಿನ ರಿಯಲ್ ಎಸ್ಟೇಟ್‌ ಉದ್ದಿಮೆದಾರರ ಕೇಂದ್ರಬಿಂದುವಾಗಿವೆ. ಐಟಿ ಕಂಪೆನಿಗಳು ನಗರದ ಪ್ರಮುಖ ಜಾಗಗಳನ್ನೇ ಆರಿಸಿಕೊಳ್ಳುತ್ತಿವೆ. ಇದರಿಂದ ಭೂಬೆಲೆ ಗಗನಕ್ಕೇರುತ್ತಿದೆ’ ಎಂದು ಜೆಎಲ್‌ಎಲ್‌ ಅಧ್ಯಕ್ಷ ಅನೂಜ್‌ ಪುರಿ ತಿಳಿಸಿದ್ದಾರೆ.
 
ಜೆಎಲ್‌ಎಲ್ ಸಿಟಿ ಮೊಮೆಂಟೊ ರ‍್ಯಾಕಿಂಗ್‌ ನೀಡುವುದಕ್ಕಾಗಿ ವಿಶ್ವದ ಪ್ರಮುಖ 120 ಪಟ್ಟಣಗಳನ್ನು ಆಯ್ಕೆ ಮಾಡಿಕೊಂಡಿತ್ತು.                                  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT