ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಗೆ ಬಾರದ ಸಾರ್ವಜನಿಕ ಶೌಚಾಲಯ

ನೀರಿನ ಅಭಾವದಿಂದ ಶೌಚಾಲಯಕ್ಕೆ ಬೀಗ ಹಾಕಿರುವುದು
Last Updated 20 ಜನವರಿ 2017, 7:50 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ಶೌಚಾಲಯಗಳಲ್ಲಿ ನೀರಿನ ಅಭಾವ ಉಂಟಾಗಿದ್ದರಿಂದ ತಾಲ್ಲೂಕು  ಕಚೇರಿ ಆವರಣದಲ್ಲಿ ಪುರಸಭೆ ನಿರ್ಮಿಸಿರುವ  ಶೌಚಾಲಯಕ್ಕೆ ಬೀಗ  ಹಾಕಿರುವುದರಿಂದ ಇಲ್ಲಿಗೆ ಬರುವ ಜನರು ಕಿರಿಕಿರಿ ಅನುಭವಿಸಬೇಕಾಗಿದೆ.

ತಾಲ್ಲೂಕು ಕಚೇರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪೊಲೀಸ್ ಠಾಣೆ, ಶಿಕ್ಷಣ ಇಲಾಖೆ ಮತ್ತು ನೋಂದಣಿ ಇಲಾಖೆಯ ಕಚೇರಿಗಳಿದ್ದು, ನಿತ್ಯ ನೂರಾರು ಜನ ಕೆಲಸಕಾರ್ಯಗಳಿಗೆ ಇಲ್ಲಿಗೆ ಭೇಟಿ ಕೊಡುತ್ತಾರೆ.

ಆದರೆ, ಶೌಚಾಲಯಗಳಿಗೆ ನೀರಿಲ್ಲವೆಂದು ಗುತ್ತಿಗೆ ಪಡೆದವರು ಶೌಚಾಲಯ ನಿರ್ವಹಣೆ ಮಾಡಲಾಗದೆ ಬೀಗ ಹಾಕಿದ್ದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆಯ ಅಕ್ಕ ಪಕ್ಕದಲ್ಲಿ ಮೂತ್ರ ವಿಸರ್ಜಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಂದ  ರೈತರು ಸೇರಿದಂತೆ ಗ್ರಾಮಸ್ಥರು ಜಮೀನುಗಳ ದಾಖಲೆಗಳು ಇತರೆ ಕೆಲಸಗಳಿಗೆ ಪಟ್ಟಣಕ್ಕೆ ಬರುತ್ತಾರೆ.  ಜನರಿಗೆ ಅನುಕೂಲವಾಗಲಿ ಎಂದು ತಾಲ್ಲೂಕು ಆಡಳಿತ ಸುಲಭ ಶೌಚಾಲಯಗಳನ್ನು ನಿರ್ಮಿಸಲು ತಿರ್ಮಾನಿಸಿತು.

ಪುರಸಭೆಯಿಂದ 2008–2009 ರಲ್ಲಿ  ಪಟ್ಟಣದ ಮುಖ್ಯ  ಮೂರು ವೃತ್ತಗಳಲ್ಲಿ ತಲಾ ₹ 4 ಲಕ್ಷದಂತೆ ₹ 12 ಲಕ್ಷ  ವೆಚ್ಚದಲ್ಲಿ  ಶೌಚಾಲಯ ಗಳನ್ನು ನಿರ್ಮಿಸಿದೆ.

ಪತ್ರಿ ವರ್ಷ ಶೌಚಾಲಯವನ್ನು  ಪುರಸಭೆವತಿಯಿಂದ ಹರಾಜು ಮಾಡಲಾಗುತ್ತಿದೆ. ಆದರೆ, ಶೌಚಾಲಯಕ್ಕೆ ಅಗತ್ಯವಿರುವ ನೀರು ಮತ್ತು ವಿದ್ಯುತ್ ಸೌಕರ್ಯ ಕಲ್ಪಿಸದೆ ಇರುವುದರಿಂದ  ಬಿಡ್‌ದಾರರು ನೀರು ಖರೀದಿಸಿ ಶೌಚಾಲಯ  ನಡೆಸುವುದು ಸಾಧ್ಯವಾಗದೆ ಇರುವುದರಿಂದ ಬೀಗ ಹಾಕಿ ಕುಳಿತು ಕೊಂಡಿದ್ದಾರೆ.

ಪಟ್ಟಣದ ಗಾಂಧಿವೃತ್ತದಲ್ಲಿ ನಿರ್ಮಸಿರುವ  ಶೌಚಾಲಯವನ್ನು ಜಯದೇವ ಎಂಬುವರು ₹ 3 ಸಾವಿರಕ್ಕೆ ಬಿಡ್ ಪಡೆದಿದ್ದಾರೆ. ಆದರೆ ನೀರಿನ ಸೌಕರ್ಯ ಕಲ್ಪಿಸಿಲ್ಲ. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಶೌಚಾಲಯವನ್ನು ₹ 5 ಸಾವಿರಕ್ಕೆ ಎಸ್.ಎಂ. ಪಾಪಯ್ಯ ಹರಾಜಿನಲ್ಲಿ ಪಡೆದಿದ್ದಾರೆ. ಇಲ್ಲೂ ನೀರಿನ ಸಮಸ್ಯೆ ಎದುರಾಗಿರುವುದರಿಂದ ಶೌಚಾಲಯಗಳನ್ನು ನಡೆಸಲು  ಸಾಧ್ಯವಾಗುತ್ತಿಲ್ಲ. ಎಂದು ಪಾಪಯ್ಯ ಬೀಗ ಹಾಕಿದ್ದಾರೆ.

‘ತಾಲ್ಲೂಕು ಕಚೇರಿಗೆ  ನನ್ನ ಜಮೀನಿನ ಪಹಣಿ ಪಡೆಯಲು ಬಂದಿದ್ದೇನೆ. ಶುಗರ್ ಇರುವುದರಿಂದ ಶೌಚಾಲಯದ ಅಗತ್ಯತೆ ಹೆಚ್ಚಾಗಿದೆ. ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಅಕ್ಕ ಪಕ್ಕದ ಗೋಡೆಗಳ ಬಳಿ ಮೂತ್ರ ವಿಸರ್ಜಿಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ರೈತ ಜಗದೀಶ್ ಅಸಹಾಯಕತೆ ವ್ಯಕ್ತಪಡಿಸಿದರು.

‘ಪಟ್ಟಣದ ಜನರಿಗೆ ನೀರಿನ ಸೌಕರ್ಯ ಕಲ್ಪಿಸುವುದು ಪುರಸಭೆಯ  ಮುಖ್ಯ ಕರ್ತವ್ಯವಾಗಿದೆ. ಶೌಚಾಲಯಗಳ ಬಿಡ್‌ದಾರರನ್ನು  ಸಂಪರ್ಕಿಸಿ ಅವರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಪುರಸಭೆ ಅಧ್ಯಕ್ಷ ಎಂ.ರಾಮಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT