ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಷೇಕ್ಸ್‌ಪಿಯರನ ಬುರುಡೆ’ ನಾಟಕ ಪ್ರದರ್ಶನ ನಾಳೆ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ನಾಟಕದ ಕಥಾ ವಸ್ತು: ವಿಲಿಯಂ ಷೇಕ್ಸ್ ಪಿಯರನು ಅಸುನೀಗಿದ ಬಳಿಕ ಅವನ ನಾಟಕಗಳ ಖ್ಯಾತಿ ವಿಶ್ವದಾದ್ಯಂತ ಪಸರಿಸಿರುತ್ತದೆ. ಆತನ ನಾಟಕಗಳು, ಉಡುಗೆ ತೊಡುಗೆಗಳು, ಆತ ಬಳಸಿದ ಸಾಮಗ್ರಿಗಳು ಲಕ್ಷಾಂತರ ಪೌಂಡ್‌ಗಳಿಗೆ ಹರಾಜುಗೊಳ್ಳಲ್ಪಡುತ್ತಿರುತ್ತದೆ.
 
ಇದೇ ಸಂದರ್ಭದಲ್ಲಿ ಇಂಗ್ಲೆಂಡಿನ ಸ್ಟ್ರಾಟ್ ಫರ್ಡ್ ನ ಒಬ್ಬ ಕಳ್ಳ ಷೇಕ್ಸ್ ಪಿಯರ್‌ನ ತಲೆ ಬುರುಡೆಯನ್ನು ಕದ್ದು ಮಾರಾಟ ಮಾಡಿ ಕೋಟ್ಯಂತರ ದುಡ್ಡನ್ನು ಸಂಪಾದಿಸಬೇಕೆಂದು ಆಲೋಚಿಸುತ್ತಾನೆ.
 
ತಲೆ ಬುರುಡೆಯನ್ನು ಸಂಪಾದಿಸುವುದರಲ್ಲಿಯೂ ಯಶಸ್ವಿಯಾದ ಕಳ್ಳನು ಒಂದು ಸಮಸ್ಯೆಯಲ್ಲಿ ಬೀಳುತ್ತಾನೆ. ಅದೇನೆಂದರೆ, ಷೇಕ್ಸ್ ಪಿಯರ್‌ನ ಕೃತಿಯ ಪಾತ್ರಗಳಾಗುತ್ತಾ ಹೋಗುತ್ತಾನೆ. ಆ ಪಾತ್ರಗಳ ಅನುಭವವೇ ನಾಟಕವನ್ನು ಮುಂದುವರೆಸಿಕೊಂಡು ಹೋಗುತ್ತದೆ. 
 
**
ವಸ್ತ್ರವಿನ್ಯಾಸ ಮತ್ತು ಪ್ರಸಾಧನ : ರಾಮಕೃಷ್ಣ ಬೆಳ್ತೂರ್
ರಂಗಸಜ್ಜಿಕೆ ಮತ್ತು ಪರಿಕರ: ರಘು ಸಿರಸಿ
ಬೆಳಕು: ಎಂ.ಜಿ.ನವೀನ್ 
ಸಂಗೀತ: ಪ್ರದೀಪ್ ಮುಳ್ಳೂರು
ರಚನೆ ಮತ್ತು ನಿರ್ದೇಶನ: ಪ್ರಭಾಕರ ರಾವ್
ನಿರ್ವಹಣೆ: ನವೀನ್ ವಸಿಷ್ಠ, ಹೇಮಂತ್ ಹೊಯ್ಸಳ, ಪವನ್
ನಾಟಕ: ಷೇಕ್ಸ್‌ಪಿಯರ್‌ನ ಬುರುಡೆ
ಪ್ರದರ್ಶನದ ದಿನಾಂಕ: ಜ.22, ಭಾನುವಾರ
ಸಮಯ- ಸಂಜೆ 7.30 ರಿಂದ 8.45
ಸ್ಥಳ- ಕೆ.ಎಚ್.ಕಲಾಸೌಧ, ಹನುಮಂತನಗರ, ಬೆಂಗಳೂರು
ಟಿಕೆಟ್ ದರ- ರೂ.100

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT