ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯುತ್ತಿದ್ದಾರೆ ಆಕಾಂಕ್ಷಿಗಳು

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಬಹು ದಿನಗಳಿ೦ದ ನನೆಗುದಿಗೆ ಬಿದ್ದಿದ್ದ ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಅ೦ತಿಮ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಭಾರಿ ಸರ್ಕಸ್‌ನ ಬಳಿಕ ಪ್ರಕಟಿಸಿ ಹಲವಾರು ದಿನಗಳು ಕಳೆದಿವೆ. ಸಕಾ೯ರಿ ನೌಕರರಾಗಿ ಸೇವೆ ಸಲ್ಲಿಸಲು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಸಾವಿರಾರು ಆಕಾ೦ಕ್ಷಿಗಳಿಗೆ ಇನ್ನೂ ನೇಮಕಾತಿ ಆದೇಶ ದೊರೆತಿಲ್ಲ. ಇದಕ್ಕೆ ಕಾರಣ ಜಾತಿ ದೃಢೀಕರಣ ಮತ್ತು ಸಿ೦ಧುತ್ವ ಪ್ರಮಾಣಪತ್ರ ಸಲ್ಲಿಸಲು ಆಗುತ್ತಿರುವ ವಿಳ೦ಬ ಹಾಗೂ ತಾ೦ತ್ರಿಕ ಸಮಸ್ಯೆಗಳು.

ಸಕಾ೯ರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು, ಕಾಲಮಿತಿಯಲ್ಲಿ ಸಕಾ೯ರಿ ಸೇವೆ ಒದಗಿಸಲು ಮಾಹಿತಿ ಹಕ್ಕು, ಸಕಾಲ, ನಾಗರಿಕ ಸನ್ನದಿನ೦ತಹ ಉಪಕ್ರಮಗಳಿದ್ದರೂ ಕೆಲವು ಕಾನೂನು ಮತ್ತು ನಿಯಮಗಳೇ ಈ ಉಪಕ್ರಮಗಳ ಮೂಲ ಆಶಯಕ್ಕೆ ಕು೦ದು೦ಟು ಮಾಡಿವೆ. ಸಿ೦ಧುತ್ವ ಪ್ರಮಾಣಪತ್ರ ಪಡೆಯುವುದು ಈಗ ದೊಡ್ಡ ತಲೆನೋವಾಗಿದೆ. ತಿ೦ಗಳುಗಟ್ಟಲೆ ಅಲೆದಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಕೆಲಸವಾಗುತ್ತಿಲ್ಲ.

ವಿಪಯಾ೯ಸವೆ೦ದರೆ, ನರೇಗಾ ಯೋಜನೆಯಡಿ ಕೌಶಲರಹಿತ  ಕಾರ್ಮಿಕರಿಗೆ ಅಜಿ೯ ಸಲ್ಲಿಸಿದ ಹದಿನೈದು ದಿನಗಳೊಳಗೆ ಕೆಲಸ ಕೊಡದಿದ್ದರೆ ಆತ ನಿರುದ್ಯೋಗ ಭತ್ಯೆ ಪಡೆಯಲು ಅರ್ಹನಾಗುತ್ತಾನೆ. ಆದರೆ ಕುಶಲ, ವಿದ್ಯಾವ೦ತ, ಭಾರೀ ಹೋರಾಟ ಮಾಡಿ ವಷ೯ಗಟ್ಟಲೆ ಕಾದು ಕೆಲಸ ಗಿಟ್ಟಿಸಿಕೊಂಡವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಆಗುತ್ತಿರುವ ವಿಳ೦ಬಕ್ಕೆ ಪರಿಹಾರವೂ ಇಲ್ಲ, ಇದಕ್ಕೆ ಜವಾಬ್ದಾರರೂ ಇಲ್ಲ.
-ರತಿಕಾ೦ತ ಎ೦. ನೆಳಗೆ, ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT