ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಕ್ಯಾಲಿಕಟ್‌ ವಿ.ವಿ ತಂಡ ಚಾಂಪಿಯನ್‌

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಕಳೆದ ಬಾರಿಯ ಚಾಂಪಿ ಯನ್‌ ಚೆನ್ನೈನ ಮದ್ರಾಸ್‌ ವಿಶ್ವವಿದ್ಯಾಲ ಯವನ್ನು ಮಣಿಸಿದ ಕ್ಯಾಲಿಕಟ್‌ ವಿಶ್ವ ವಿದ್ಯಾಲಯ ತಂಡವು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಫುಟ್‌ಬಾಲ್‌ ಟೂರ್ನಿಯ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಈ ಮೂಲಕ ಕಳೆದ ವರ್ಷ ಅನುಭವಿಸಿದ್ದ ನಿರಾಸೆಗೆ ಮುಯ್ಯಿ ತೀರಿಸಿಕೊಂಡಿತ್ತು.

ಕ್ಯಾಲಿಕಟ್‌ ತಂಡದಷ್ಟೆ ಅಂಕ ಗಳಿಸಿ, ಗೋಲು ಗಳಿಕೆಯಲ್ಲಿ ಹಿಂದೆ ಬಿದ್ದ ಅಣ್ಣಾಮಲೈ ವಿಶ್ವವಿದ್ಯಾಲಯ ತಂಡವು ರನ್ನರ್‌ ಅಪ್‌ ಪಟ್ಟಕ್ಕೆ ತೃಪ್ತಿ ಪಡಬೇಕಾ ಯಿತು. ಕಳೆದ ವರ್ಷ ಈ ತಂಡ ಮೂರನೇ ಸ್ಥಾನದಲ್ಲಿತ್ತು. ಉಳಿದಂತೆ ಲೀಗ್‌ನಲ್ಲಿ ಏಕೈಕ ಗೆಲುವು, ಎರಡು ಡ್ರಾ ಸಾಧಿಸಿದ ಮದ್ರಾಸ್‌ ತಂಡವು ಮೂರನೇ ಸ್ಥಾನಕ್ಕೆ ಕುಸಿಯಿತು. ಪ್ರಥಮ ಬಾರಿಗೆ ಲೀಗ್‌ ಪ್ರವೇಶಿಸಿದ ಕಾಟಂಕಾಳತ್ತೂರಿನ ಎಸ್‌ಆರ್‌ಎಂ ವಿಶ್ವವಿದ್ಯಾಲಯ ನಾಲ್ಕನೇ ತಂಡವಾಗಿ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಫೆಬ್ರುವರಿ 13ರಿಂದ ನಡೆಯಲಿರುವ ಅಖಿಲ ಭಾರತ ಫುಟ್‌ಬಾಲ್‌ ಟೂರ್ನಿಗೆ ಪ್ರವೇಶ ಪಡೆಯಿತು. 

ಇದಕ್ಕೂ ಮುನ್ನ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕ್ಯಾಲಿಕಟ್‌ ತಂಡವು 2–0 ಗೋಲುಗಳಿಂದ ಮದ್ರಾಸ್‌ ವಿಶ್ವ ವಿದ್ಯಾಲಯ ತಂಡಕ್ಕೆ ಸೋಲುಣಿಸಿತು. ವಿಜೇತ ತಂಡದ ಪರ ಅಶಿ ಕೆ. (15 ನಿಮಿಷ) ಪ್ರಥಮಾರ್ಧದಲ್ಲಿ ಗೋಲು ಸಿಡಿಸಿದರೆ, 51ನೇ ನಿಮಿಷದಲ್ಲಿ ಮೊಹ ಮ್ಮದೆನಾಸ್‌ ರೆಹಮಾನ್‌ ಗೋಲು ಗಳಿಸಿ ಅಂತರ ಹೆಚ್ಚಿಸಿದರು. ಪ್ರಬಲ ಪೈಪೋಟಿ ಒಡ್ಡಿದ ಕ್ಯಾಲಿಕಟ್‌ ತಂಡದ ಡಿಫೆಂಡರ್‌ ಗಳು ಮದ್ರಾಸ್‌ ತಂಡದ ಆಟಗಾರರಿಗೆ ಗೋಲು ಗಳಿಸಲು ಅವಕಾಶ ಕೊಡಲಿಲ್ಲ.

ಟೂರ್ನಿಯ ಚಾಂಪಿಯನ್‌ ನಿರ್ಧರಿಸಿದ ಮತ್ತೊಂದು ಪಂದ್ಯದಲ್ಲಿ ಎಸ್‌ಆರ್‌ಎಂ ತಂಡವನ್ನು 1–2 ಗೋಲುಗಳಿಂದ ಮಣಿಸಿದ ಅಣ್ಣಾಮಲೈ ತಂಡವು ಗೆಲುವಿನ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT