ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇವೆ ಮೂಲಕ ಸಮಾಜದ ಋಣ ತೀರಿಸಿ’

Last Updated 28 ಜನವರಿ 2017, 9:55 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಸಮಾಜದಿಂದ ಸಾಕಷ್ಟು ಪ್ರಯೋಜನ ಪಡೆದ ನಾವು ಹೆಚ್ಚೆಚ್ಚು ಸಮಾಜ ಸೇವೆ ಮಾಡಬೇಕು. ಅದರಿಂದ  ಮಾತ್ರ ಸಮಾಜದ ಋಣ ತೀರಿಸಿದಂತಾಗುತ್ತದೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಹೇಳಿದರು. ಇಲ್ಲಿನ ಸ್ಟೇಷನ್‌ ರಸ್ತೆ ಕರ್ನಾಟಕ ಸಂಘದಲ್ಲಿ 68ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಅವರು ನೆರವೇರಿಸಿ ಮಾತನಾಡಿದರು.

ಸಲಹಾ ಸಮಿತಿ ಅಧ್ಯಕ್ಷ ಪ್ರೊ.ಪಿ. ಜೆ. ಕುಲಕರ್ಣಿ, ಸತ್ಯನಾರಾಯಣ ಹೊಳೆಬಾಗಿಲ, ಬದರಿನಾಥ ಪಂಪಣ್ಣನಾಯ್ಕ, ವಿನಾಯಕ ಜೋಶಿ, ಸತ್ಯನಾರಾಯಣ ವಿಶ್ವರೂಪ, ಸೀತಾರಾಮ ಕಣೇಕಲ್‌, ಮಹೇಶ ನಾಡಿಗೇರ, ಸಂಕಪ್ಪ ಮಾರ ನಾಳ, ವಿಜಯಕುಮಾರ ಜೋಶಿ ಮತ್ತಿತರರು ಇದ್ದರು.

ರಾಣೆಬೆನ್ನೂರು ನಗರ ಸಭೆ: ‘ತ್ಯಾಗ ಬಲಿದಾನದಿಂದ ದೊರೆತಿರುವ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಬಳಸದೇ ಗೌರವ ಹಾಗೂ ಪ್ರೀತಿಯಿಂದ ಕಾಣಬೇಕು’ ಎಂದು ನಗರಸಭಾ ಅಧ್ಯಕ್ಷೆ ನೀಲಮ್ಮ ಬುರಡಿಕಟ್ಟಿ ಹೇಳಿದರು. ನಗರದ ಅಶೋಕ ವೃತ್ತದ ಬಳಿ ಗುರುವಾರ ನಡೆದ 68ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ತಹಶೀಲ್ದಾರ್ ರಾಮಮೂರ್ತಿ, ಪೌರಾಯುಕ್ತ ಡಾ.ಮಹಾಂತೇಶ,ಎನ್, ಇಓ ಡಾ. ಬಸವರಾಜ ಡಿ.ಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಲಕ್ಷ್ಮಣ, ಡಿವೈಎಸ್‌ಪಿ ಅನಿಲಕುಮಾರ ಭೂಮರಡ್ಡಿ ಮತ್ತಿತರರು ಇದ್ದರು.

ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ:  ಇಲ್ಲಿನ ಮಾರುತಿನಗರದ ಸೇವಾ ಅಂಧರ ಸಂಸ್ಥೆಯ ಶಾಲೆಯಲ್ಲಿ ಆ್ಯಾಡ್‌ ಇಂಡಿಯಾ ಸಂಸ್ಥೆಯ ರಂಗನಾಥ ಧ್ವಜಾರೋಹಣ ನೇರವೆರಿಸಿದರು.

ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಲಕ್ಷ್ಮಿ ಎಸ್ ಸ್ವಾಗತಿಸಿದರು. ಭಾರತಿ ನಿರೂಪಿಸಿದರು. ದೈಹಿಕ ಶಿಕ್ಷಕಿ ರೇಣಕಾ ಪೋಲಿಸ್‌ಗೌಡ್ರ ವಂದಿಸಿದರು.

ಎಜ್ಯು ಏಷ್ಯಾ ವರ್ಡ್ ಸ್ಕೂಲ್‌: ನಗರದ ಎಜ್ಯು ಏಷ್ಯಾ ವರ್ಡ್ ಸ್ಕೂಲ್‌ನಲ್ಲಿ 68ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ  ವಾಸಣ್ಣ ಕುಸಗೂರ ನೆರವೇರಿಸಿ ಮಾತನಾಡಿದರು.

ಸ್ಥಳೀಯ ಸಮಿತಿ ಅಧ್ಯಕ್ಷ ದತ್ತಾತ್ರೇಯ ಕುಲಕರ್ಣಿ, ಉಪಾಧ್ಯಕ್ಷ ರಾಜೇಶ ಪಾಸ್ತೆ, ಕಾರ್ಯದರ್ಶಿ ಶ್ರೀನಿವಾಸ ಏಕಬೋಟೆ, ರಾಜಕುಮಾರ ಕುಸಗೂರ, ಖಜಾಂಚಿ ವೀರೇಶ ಹಿರೇಮಠ, ಮುಖ್ಯಶಿಕ್ಷಕಿ ಉಮಾ ಬಣಕಾರ ಕೆ. ಎನ್. ಷಣ್ಮುಖ ಮತ್ತಿತರರು ಇದ್ದರು.

ಹ್ಯಾಟ್ರಿಕ್ ಸಾಧನೆ: ರಾಣೆಬೆನ್ನೂರಿನ ವಾಗೀಶ ನಗರದ ನ್ಯಾಶನಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು  68ನೇ ಗಣರಾಜ್ಯೋತ್ಸವದ ಭವ್ಯ ಸಮಾರಂಭದ ಪಥಸಂಚಲದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಂದ ಬಹುಮಾನ ಮತ್ತು ಪ್ರಶಸ್ತಿ ಪತ್ರ ಪಡೆದರು.

ಪ್ರಾಚಾರ್ಯ ಬಸವರಾಜ ಮಾಗಡಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ನಗರಸಭೆಯ ಮೈದಾನದಲ್ಲಿ ನಡೆದ ವರ್ಣರಂಜಿತ ಗಣರಾಜ್ಯೋತ್ಸವ ಸಮಾರಂಭದಲ್ಲಿ ನಮ್ಮ  ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಇಂಡಿ ಅವರ ನೇತೃತ್ವದ ತಂಡ ಪಥ ಸಂಚಲನದಲ್ಲಿ ಅತ್ಯಂತ ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಹಾಕಿ ಮೊದಲ ಸ್ಥಾನ ಪಡೆದಿದೆ. ಪ್ರಥಮ ಸ್ಥಾನ ಪಡೆಯುತ್ತಿರುವುದು ಸತತ ಮೂರನೇ ಬಾರಿ’ ಎಂದು ತಿಳಿಸಿದರು.

ಬಿಎಜೆಎಸ್ಎಸ್: ರಾಣೆಬೆನ್ನೂರಿನ ಬಿಎ ಜೆಎಸ್ಎಸ್ ಮಹಿಳಾ ಕಾಲೇಜು ಮತ್ತು ಸಮೂಹ ಶಿಕ್ಷಣ ಸಂಸ್ಥೆಯ ಗಾಯತ್ರಿ ಕ್ಯಾಂಪಸ್‌ನಲ್ಲಿ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಬಿಎಜೆಎಸ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಆರ್‌.ಎಂ. ಕುಬೇರಪ್ಪ ನೆರವೇರಿಸಿದರು. ಪ್ರಾಚಾರ್ಯ ಎನ್.ಕೆ ರಾಮಚಂದ್ರಪ್ಪ, ಪ್ರೊ.ಕೆ.ಕೆ. ಹಾವಿನಾಳ, ಪ್ರೊ.ಎಸ್.ಎ. ತಾಂಬೆ, ಪ್ರೊ.ಜಿ.ಎಂ.ನಾಡಿಗೇರ, ಪ್ರೊ.ಜಿ.ಕೆ.ಗೌಡರ, ಪ್ರೊ.ಪಿ.ಶಿವನಗೌಡ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT