ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತ ಸೇರುವ ಮಹಾನಗರ ಪಾಲಿಕೆ ಆದೇಶ..!

ನಗರದೆಲ್ಲೆಡೆ ಫ್ಲೆಕ್ಸ್ ಹಾವಳಿ ದಾಖಲೆಗಳಿಗಷ್ಟೇ ಸೀಮಿತ; ಅನುಷ್ಠಾನ ವಿಷಯದಲ್ಲಿ ಶೂನ್ಯ ಸಾಧನೆ, ಅಸಮಾಧಾನ
Last Updated 30 ಜನವರಿ 2017, 5:33 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ ಹೊರ ಬೀಳುತ್ತಿ ರುವ ಬಹುತೇಕ ಆದೇಶ ಅನುಷ್ಠಾನ ಗೊಳ್ಳದೇ ದಾಖಲೆಗಳ ಕಡತಕ್ಕೆ ಸೇರು ವುದಕ್ಕೆ ಮಾತ್ರ ಸೀಮಿತವಾಗಿವೆ.

ಏಕಮುಖ ಸಂಚಾರ ವ್ಯವಸ್ಥೆ... ಮಾರಾಟ ನಿಷೇಧಿತ ವಲಯ, ಸಂಚಾರ ನಿಷೇಧಿತ ವಲಯ, ಮಾರಾಟ ವಲಯ, ಸಂಚಾರ ವಲಯ, ಖಾಲಿ ನಿವೇಶನ ಗಳಲ್ಲಿ ನೈರ್ಮಲ್ಯ ಕಾಪಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಜಾಹೀರಾತು ಫಲಕ ಅಳವಡಿಸದಿರುವುದು...

ಪಟ್ಟಿ ಹನುಮಂತನ ಬಾಲದಂತೆ ಬೃಹಾದಾಕಾರವಾಗಿ ಬೆಳೆಯುತ್ತದೆ. ಈ ಹಿಂದಿನ ವರ್ಷ ಸೇರಿದಂತೆ ನೂತನ ವರ್ಷದಲ್ಲಿ ಪಾಲಿಕೆ ಆಯುಕ್ತರು ಹೊರ ಡಿಸಿದ ಯಾವೊಂದು ಆದೇಶಗಳು ಜಾರಿಗೊಂಡಿಲ್ಲ ಎಂಬ ದೂರು ನಗರದ ನಾಗರಿಕರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದೀಗ ನಗರದ ಸೌಂದ ರ್ಯೀಕರಣಕ್ಕೆ ಚಾಲನೆ ದೊರೆತಿದೆ. ಪ್ರಮುಖ ವೃತ್ತಗಳು ವಿದ್ಯುತ್‌ ದೀಪಾ ಲಂಕಾರ, ನೀರಿನ ಕಾರಂಜಿಯಿಂದ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸು ತ್ತಿವೆ. ಈ ಸಮಯದಲ್ಲೇ ಪಾಲಿಕೆ ಆಯುಕ್ತರು ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಸೂಚನೆ ನೀಡಿದ್ದು, ಪರಿಣಾ ಮಕಾರಿಯಾಗಿ ಜಾರಿಗೊಂಡರೆ ನಗರದ ಅಂದ ಇನ್ನಷ್ಟು ಹೆಚ್ಚಲಿದೆ ಎಂಬ ಅಭಿಮತ ಸ್ಥಳೀಯರದ್ದು.

ವಿಜಯಪುರವೂ ಇದೀಗ ಮೆಟ್ರೊ ಸಿಟಿ. ಆದರೆ ಅದಕ್ಕೆ ಪೂರಕ ವಾತಾವ ರಣ, ಕನಿಷ್ಠ ಸೌಲಭ್ಯವೂ ಇಲ್ಲಿಲ್ಲ. ಬೃಹತ್‌ ನಗರಗಳಲ್ಲಿ ಪರವಾನಗಿ ಪಡೆದೇ ಜಾಹೀರಾತು ಫಲಕ ಅಳವಡಿಸ ಬೇಕು. ಆದರೆ ಇಲ್ಲಿ ಪರವಾನಿಗೆ ಪಡೆ ಯುವುದೇ ಅಪರೂಪ ಎಂಬಂತಹ ವಾತಾವರಣ ಇದೆ ಎಂಬ ದೂರು ರಾಜಶೇಖರ ಆಲಬಾಳ ಅವರದ್ದು.

ಮೆಟ್ರೊ ಸಿಟಿಗಳಲ್ಲಿ ಜಾಹೀರಾತು ಫಲಕ ಅಳವಡಿಸಲು ನಿಗದಿತ ದಿನ ಮಾತ್ರ ಅವಕಾಶ ನೀಡಲಾಗಿರುತ್ತದೆ. 3, 5, 7 ದಿನದ ಸಮಯ ಮುಗಿಯುತ್ತಿ ದ್ದಂತೆ ಸಂಘಟಕರು ಫ್ಲೆಕ್ಸ್‌ ತೆರವುಗೊಳಿ ಸದಿದ್ದರೆ, ಪಾಲಿಕೆ  ತೆರವು ಮಾಡುತ್ತದೆ.

ದಂಡ ವಿಧಿಸುವ ಜತೆಗೆ ತೆರವು ಗೊಳಿಸಿದ ವೆಚ್ಚವನ್ನು ಸಂಬಂಧಿಸಿದವ ರಿಂದ ವಸೂಲಿ ಮಾಡುತ್ತಿದೆ. ಜಾಹೀ ರಾತು ಫಲಕ ಅಳವಡಿಸುವಾಗಲೇ ಷರತ್ತುಗಳನ್ನು ಹಾಕಲಾಗಿರುತ್ತದೆ. ಆದರೆ ಈ ವ್ಯವಸ್ಥೆ  ಮಹಾನಗರ ಪಾಲಿಕೆ ಆಡಳಿತದಲ್ಲಿ ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣ ಎನ್ನುತ್ತಾರೆ ಆಲಬಾಳ.

ಮಾಹಿತಿಯೇ ತಿಳಿಯಲ್ಲ: ಅನಧಿಕೃತ ವಾಗಿ ಜಾಹೀರಾತು ಫಲಕ ಅಳವಡಿಸುತ್ತಿ ರುವುದರಿಂದ ಮಹಾನಗರ ಪಾಲಿಕೆ ಆಡಳಿತಕ್ಕೆ ನಿಗದಿತ ಆದಾಯ ಪಾವತಿ ಯಾಗಲ್ಲ. ಇನ್ನೂ ಕಟ್ಟಡದ ಮಾಹಿತಿಯೇ ಲಭ್ಯವಾಗದ ರೀತಿ ಜಾಹೀ ರಾತು ಫಲಕಗಳನ್ನು ಅಳವಡಿಸುವು ದರಿಂದ ಹೊರ ಊರುಗಳಿಂದ ಇಲ್ಲಿಗೆ ಬರುವ ಹೊಸಬರಿಗೆ ರಸ್ತೆ, ಬಡಾವಣೆ, ಕಟ್ಟಡದ ಮಾಹಿತಿಯೇ ಲಭ್ಯವಾಗದೆ ಪರದಾಡುವಂತಹ ವ್ಯವಸ್ಥೆ ನಗರದಲ್ಲಿ ನಿರ್ಮಾಣಗೊಂಡಿದೆ ಎಂಬ ದೂರು ರಾಜಶೇಖರ ಆಲಬಾಳ ಅವರದ್ದು.

ದೂರು ನೀಡಬೇಕು ಎಂದರೂ ಯಾರಿಗೆ ನೀಡಬೇಕು ಎಂಬುದೇ ಅರಿಯದಾಗಿದೆ. ಮಹಾ ನಗರ ಪಾಲಿಕೆ ಆಡಳಿತದಲ್ಲಿ ವಿಚಾರಣೆ ನಡೆಸಿದರೂ ನಿಗದಿತ ಶಾಖೆಯೇ ಇಲ್ಲ. ಸಮಸ್ಯೆ ಪರಿಹಾರಕ್ಕೆ ಯಾರಿಗೆ ಮೊರೆ ಹೋಗಬೇಕು ಎಂಬುದೇ ತೋಚದಾ ಗಿದೆ ಎನ್ನುತ್ತಾರೆ ಶಂಕರ ರಾಠೋಡ.

ಅನಧಿಕೃತ ಜಾಹೀರಾತು  ಫಲಕ ಪ್ರದರ್ಶನಕ್ಕೆ ನಿಷೇಧ
ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಯಾವುದೇ ಸರ್ಕಾರಿ ಕಚೇರಿಗಳ ಆವರಣ ಗೋಡೆ, ರಸ್ತೆ ವಿಭಜಕ, ಸಾರ್ವಜನಿಕ ವೀಕ್ಷಣೆಗೆ ಬರುವಂತಹ ಖಾಸಗಿ ಸ್ಥಳಗಳನ್ನೊಳಗೊಂಡ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪಾಲಿಕೆ ಅನುಮತಿ ಪಡೆಯದೆ ಅನಧಿಕೃತವಾಗಿ ಜಾಹೀರಾತು ಫಲಕ ಪ್ರದರ್ಶಿಸುವುದು, ಭಿತ್ತಿಪತ್ರ ಅಂಟಿಸುವುದು, ಗೋಡೆಬರಹಗಳನ್ನು ಪಾಲಿಕೆಯ ಪರವಾನಿಗೆ ಪಡೆಯದೆ ಪ್ರದರ್ಶಿಸುವುದನ್ನು ನಿಷೇಧಿಸಿದೆ.

ಒಂದು ವೇಳೆ ಮಹಾನಗರಪಾಲಿಕೆ ಆದೇಶವನ್ನು ಉಲ್ಲಂಘಿಸಿದಲ್ಲಿ, ಯಾರ ಹೆಸರಿನಲ್ಲಿ ಭಿತ್ತಿಪತ್ರ, ಗೋಡೆಬರಹ ಜಾಹೀರಾತು ಪ್ರದರ್ಶಿಸಲ್ಪಟ್ಟಿದೆಯೋ ಅಂತಹವರನ್ನೇ ನೇರ ಜವಾಬ್ದಾರರನ್ನಾಗಿಸಿ ಕರ್ನಾಟಕ ಮುಕ್ತ ಪ್ರದೇಶಗಳ (ವಿರೂಪಗೊಳ್ಳುವಿಕೆ ತಡೆ) ಕಾಯ್ದೆಯನ್ವಯ ₨ 1 ಸಾವಿರ ದಂಡ, ಆರು ತಿಂಗಳ ಸೆರೆವಾಸ ದಂಡನೆಗೆ ಅವಕಾಶವಿರುವಂತೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***

ನಗರದಲ್ಲಿ ಬೇಕಾಬಿಟ್ಟಿ ಫ್ಲೆಕ್ಸ್‌ ಅಳವಡಿಸಲಾಗುತ್ತಿದೆ. ಈ ಸಂಬಂಧ ಯಾರಿಂದ ಅಧಿಕೃತ ಮಾಹಿತಿ ಪಡೆಯಬೇಕು. ಯಾರಿಗೆ ದೂರು ಕೊಡಬೇಕು? ತಿಳಿಯದಾಗಿದೆ

- ರಾಜಶೇಖರ ಆಲಬಾಳ, ವಿಜಯಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT