ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಪರದಾಟ

Last Updated 30 ಜನವರಿ 2017, 7:26 IST
ಅಕ್ಷರ ಗಾತ್ರ

ತುಮಕೂರು: ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದತಿಯ  ನೇರ ಪರಿಣಾಮವನ್ನು ಕಟ್ಟಡ ಕಾರ್ಮಿಕರು ಎದುರಿಸಿದರು. ಕೇಂದ್ರ ಸರ್ಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವುದು ಇದರಿಂದ ಗೊತ್ತಾಗುತ್ತಿದೆ ಎಂದು ಸಿಐಟಿಯು ರಾಜ್ಯ  ಘಟಕದ ಕಾರ್ಯದರ್ಶಿ ಕೆ.ಮಹಂತೇಶ್  ಹೇಳಿದರು.

ನಗರದ ಮೇಳೆಕೋಟೆಯಲ್ಲಿ ಈಚೆಗೆ ನಡೆದ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ  ಕಾರ್ಮಿಕರ ಸಮ್ಮೇಳನದಲ್ಲಿ ಮಾತನಾಡಿದರು.

ಕಾರ್ಪೋರೇಟ್ ವಲಯದ ದೊಡ್ಡ ಶ್ರೀಮಂತರು ಪ್ರಧಾನಿ ಮೋದಿ ಅವರೊಂದಿಗ ಓಡಾಡಿಕೊಂಡಿದ್ದಾರೆ.  ನೋಟು ಅಮಾನ್ಯದಿಂದ ಮತಷ್ಟು ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಸಿಐಟಿಯು ನಡೆಸಿದ ಹೋರಾಟದಿಂದಾಗಿ ಕಟ್ಟಡ ಕಾರ್ಮಿಕರಿಗೆ ನ್ಯಾಯ ಸಿಕ್ಕಿದೆ. ಮತ್ತಷ್ಟು ಸವಲತ್ತು ಪಡೆಯಲು ಸಂಘಟಿತ ಹೋರಾಟ ಅಗತ್ಯವಾಗಿದೆ. ಕಾರ್ಮಿಕರು ಈ ವಿಷಯವನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

ಪಾಲಿಕೆ ಸದಸ್ಯ ಎಂ.ಎನ್. ವೆಂಕಟೇಶ್ ಮಾತನಾಡಿ, ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಸಿಗಬೇಕಾದ ಹಕ್ಕುಗಳು ಸಿಗಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT