ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧುನಿಕ ಯುಗದಲ್ಲಿ ಕಂಪ್ಯೂಟರ್‌ ಜ್ಞಾನ ಅವಶ್ಯ’

Last Updated 31 ಜನವರಿ 2017, 5:36 IST
ಅಕ್ಷರ ಗಾತ್ರ

ಲಕ್ಕುಂಡಿ (ಗದಗ ತಾ.):  ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೆ ಕಂಪ್ಯೂಟರ್‌ ಜ್ಞಾನ ಅವಶ್ಯವಾಗಿದೆ. ಹೀಗಾಗಿ   ಸರ್ಕಾರಿ ಶಾಲೆಗಳಿಗೆ ಇನ್ಫೋಸಿಸ್ ಕಂಪೆನಿಯಿಂದ ದಾನದ ರೂಪದಲ್ಲಿ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸದುಪ ಯೋಗಪಡೆದುಕೊಳ್ಳಬೇಕು ಎಂದು ಮಾಜಿ ಯೋಧ, ಇನ್ಫೋಸಿಸ್ ಕಂಪೆನಿಯ ನೌಕರ ಪ್ರಭು ಮಾಕಾಪೂರ ಹೇಳಿದರು.

ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಚೆಗೆ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಿಂದಲೇ ಮಕ್ಕಳು ಕಂಪ್ಯೂಟರ್ ಜ್ಞಾನ ಪಡೆಯಬೇಕು ಎಂದರು.

ಇನ್ಫೋಸಿಸ್ ಕಂಪೆನಿ ₹1.25 ಲಕ್ಷ ಮೌಲ್ಯದ 5 ಕಂಪ್ಯೂಟರ್‌ಗಳನ್ನು ದೇಣೆಗೆ ನೀಡಿದೆ ಎಂದು ಮುಖ್ಯಶಿಕ್ಷಕ ಸಿ.ಸಿ.ಕುರಹಟ್ಟಿ ತಿಳಿಸಿದರು. ಶಿಕ್ಷಕ ಎಸ್.ಎಚ್.ಶೆಟ್ಟಿನಾಯ್ಕರ, ಎಸ್.ಎಚ್.ಶೆಟ್ಟಿನಾಯ್ಕರ ಮಾತ ನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಮಲ್ಲಿಕಾ ರ್ಜುನ ಹಗರಿ, ಸಿಆರ್‌ಸಿ ಪತ್ತಾರ, ಶಿವನಗೌಡ ಪಾಟೀಲ, ಅಕ್ಕಮ ಹಾದೇವಿ ಹೊಸಮನಿ, ಮಮತಾಬೇಗಂ ಹುಬ್ಬಳ್ಳಿ ಇದ್ದರು. ಎಸ್.ಎ.ಬಾಣದ ಸ್ವಾಗತಿಸಿದರು, ವೈ.ವೈ.ಬೆಟಗೇರಿ ನಿರೂ ಪಿಸಿದರು, ಟಿ.ಎಂ.ಶಿರಹಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT