ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಗಾಗಿ ಟೂರಿಸಂ ಆ್ಯಪ್‌ಗಳು

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

ಈ ವಾರದ ಆ್ಯಪ್‌ ಮಾರುಕಟ್ಟೆಯಲ್ಲಿ ಗಮನ ಸೆಳೆಯಬಹುದಾದ ಕೆಲವು ಆ್ಯಪ್‌ಗಳನ್ನು ಪರಿಚಯಿಸಲಾಗಿದೆ. ಇವುಗಳಲ್ಲಿ  ರೈಲ್ವೆ ಟಿಕೆಟ್ ಬುಕ್ಕಿಂಗ್ ಆ್ಯಪ್, ಟೂರಿಸಂ ಆ್ಯಪ್, ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುವ ಆ್ಯಪ್‌ ಮುಖ್ಯವಾಗಿವೆ.

ಲೀಡ್ ಮಾರ್ಕೆಟ್ 
ಇಂಡಿಯನ್ ಮನಿ ಡಾಟ್ ಕಾಮ್ ಕಂಪೆನಿಯು ಇತ್ತೀಚೆಗೆ ಲೀಡ್ ಮಾರ್ಕೆಟ್ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಇದು ಹೂಡಿಕೆ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಹಾಗೂ ವಿಮಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವವರಿಗೆ ಹಣಕಾಸು ವಹಿವಾಟಿನ ಮಾಹಿತಿ ನೀಡಲಿದೆ. ಇದು ಕಂಪೆನಿಯ ಪ್ರಚಾರದ ಮ್ಯಾನೇಜರ್ ಟೂಲ್ ಆಗಿಯೂ ಕೆಲಸ ಮಾಡುತ್ತದೆ.

ಇದನ್ನು ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಬಳಸಬಹುದು. ಆಂಡ್ರಾಯ್ಡ್‌, ಐಒಎಸ್ ಮತ್ತು ವಿಂಡೋಸ್ ಮಾದರಿಗಳಲ್ಲೂ ಈ ಆ್ಯಪ್ ಲಭ್ಯವಿದೆ. ಹೂಡಿಕೆ, ಬ್ಯಾಂಕಿಂಗ್ , ರಿಯಲ್ ಎಸ್ಟೇಟ್, ವಿಮಾ ಕೇತ್ರಗಳಲ್ಲಿ ತೊಡಗಿಕೊಂಡವರಿಗೆ ಪ್ರಚಲಿತ ವಿದ್ಯಮಾನಗಳು, ಬಡ್ಡಿದರಗಳ ಮಾಹಿತಿ, ಬ್ಯಾಂಕ್ ನೀತಿ, ಹೂಡಿಕೆಯ ಅವಕಾಶಗಳು, ರಿಯಲ್ ಎಸ್ಟೇಟ್ ಉದ್ಯಮದ ದರಗಳ ಮಾಹಿತಿ ಸೇರಿದಂತೆ ಉದ್ಯಮ ವಲಯದಲ್ಲಿ ಬೇಡಿಕೆ ಮತ್ತು ಪೂರೈಕೆಯ ಮಾಹಿತಿಯನ್ನು   ಪಡೆಯಬಹುದು.

ಒಟ್ಟಿನಲ್ಲಿ ಔದ್ಯೋಗಿಕ ವಲಯದಲ್ಲಿ ರುವವರು  ಈ ಆ್ಯಪ್ ಬಳಸುವ ಮೂಲಕ ತಮ್ಮ ವಹಿವಾಟಿನ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಇದಕ್ಕಾಗಿ ಬೇರೆ ಮಾಧ್ಯಮಗಳನ್ನು ಅವಲಂಬಿಸಬೇಕಿಲ್ಲ.

***
ರೈಲ್ವೆ ಟಿಕೆಟ್ ಬುಕಿಂಗ್ ಆ್ಯಪ್…

ಭಾರತೀಯ ರೈಲ್ವೆ  ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ನೂತನ ಟಿಕೆಟ್ ಬುಕ್ಕಿಂಗ್ ಆ್ಯಪ್  ಬಿಡುಗಡೆ ಮಾಡಿದೆ. ಇದರ ಮೂಲಕ ಗ್ರಾಹಕರು ತ್ವರಿತವಾಗಿ ಟಿಕೆಟ್ ಬುಕ್ ಮಾಡಬಹುದು.

ಇದು ಹಳೆಯ ಟಿಕೆಟ್ ಬುಕ್ಕಿಂಗ್ ಆ್ಯಪ್‌ಗಿಂತಲೂ ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ. ಸೀಟು ಕಾಯ್ದಿರಿಸುವಿಕೆ, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಅಂಗವಿಕಲರ ಸೀಟುಗಳನ್ನು ಇದರ ಮೂಲಕ ಸುಲಭವಾಗಿ ಗುರುತಿಸಬಹುದು. ಜತೆಗೆ ತತ್ಕಾಲ್  ಮತ್ತು ಪ್ರೀಮಿಯಂ ತತ್ಕಾಲ್ ಬುಕ್ಕಿಂಗ್ ಸೌಲಭ್ಯವು ಇದೆ.

ಪ್ರಯಾಣಿಕರು ರೈಲ್ವೆ ಇಲಾಖೆಯ  ಆನ್‌ಲೈನ್‌ ಬುಕ್ಕಿಂಗ್ ವೆಬ್‌ಸೈಟ್‌ಗೆ ಹೋಗದೆ ಈ ನೂತನ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು ಗ್ರಾಹಕರು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹದು.

***
ಇನ್‌ಸ್ಟಾ ಗೈಡ್ ಆ್ಯಪ್…

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಟೂರಿಸ್ಟ್ ಗೈಡ್‌ಗಳ ಮಾಹಿತಿಗಾಗಿ ನೂತನ ಇನ್‌ಸ್ಟಾ ಗೈಡ್  ಆ್ಯಪ್  ಅಭಿವೃದ್ಧಿಪಡಿಸಿದೆ. ಪ್ರತಿ ನಿತ್ಯ ಭಾರತಕ್ಕೆ ಸಾವಿರಾರು ಜನ ವಿದೇಶಿ ಪ್ರವಾಸಿಗರು ಬರುತ್ತಾರೆ. ಅವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಆ್ಯಪ್ ವಿನ್ಯಾಸ ಮಾಡಲಾಗಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಟೂರಿಸ್ಟ್ ಗೈಡ್‌ಗಳ ಮಾಹಿತಿ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಇದರಲ್ಲಿ ನಮೂದಿಸಲಾಗಿದೆ.

ಪ್ರವಾಸಿಗರು ಈ ಆ್ಯಪ್ ಮೂಲಕ ಗೈಡ್‌ಗಳ ಸಂಪರ್ಕ ಪಡೆದು ಆರಾಮವಾಗಿ ದೇಶ ಸುತ್ತಬಹುದು. ಇದರಿಂದ ನಕಲಿ ಗೈಡ್‌ಗಳಿಂದ ಪ್ರವಾಸಿಗರು ಮೋಸ ಹೋಗುವುದು ತಪ್ಪುತ್ತದೆ ಮತ್ತು ಪ್ರವಾಸಿಗರಿಗೂ ಭದ್ರತೆ ದೊರೆಯುತ್ತದೆ.

ಈ ಆ್ಯಪ್ ಮೂಲಕ ಪ್ರವಾಸಿಗರು ಯಾವ ಭಾಷೆಯ ಗೈಡ್‌ಗಳು ಯಾವ ಸ್ಥಳದಲ್ಲಿ, ಯಾವ ಸಮಯಕ್ಕೆ ಸಿಗುತ್ತಾರೆ ಎಂಬ ಮಾಹಿತಿಯನ್ನು ಪಡೆಯಬಹುದು. ಮಾನ್ಯತೆ ಪಡೆದ ಗೈಡ್‌ಗಳ ಸಂಪೂರ್ಣ ಮಾಹಿತಿ ಈ ಆ್ಯಪ್ ನಲ್ಲಿ ಲಭ್ಯವಿರುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು ಪ್ರವಾಸಿಗರು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

***
ಪಿನಾಕಿನ್ ಟೂರಿಸ್ಟ್‌ ಆ್ಯಪ್...

ತಮಿಳುನಾಡು ಸರ್ಕಾರ  ರಾಜ್ಯದಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ನೂತನ ಪಿನಾಕಿನ್ ಆ್ಯಪ್‌  ಬಿಡುಗಡೆ ಮಾಡಿದೆ. ಈ ಆ್ಯಪ್‌ ಮೂಲಕ ಪ್ರವಾಸಿಗರು ತಮಿಳುನಾಡಿನಲ್ಲಿರುವ ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳ ಧ್ವನಿಸುರುಳಿ  ಕೇಳಬಹುದು.ಆಂಡ್ರಾಯ್ಡ್‌ ಮತ್ತು ಐಒಎಸ್‌ ಪ್ಲಾಟ್‌ಫಾರಂನಲ್ಲಿ ಈ ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದನ್ನು ತಮಿಳುನಾಡು ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಇಲಾಖೆ ವಿನ್ಯಾಸ ಮಾಡಿದೆ.

***
ರಮಣ್ ಆ್ಯಪ್‌..

ಛತ್ತೀಸ್‌ಗಢ ರಾಜ್ಯದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು  ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ಸಲುವಾಗಿ  ’ರಮಣ್’ ಆ್ಯಪ್‌ ಅನ್ನು ಬಿಡುಗಡೆ  ಮಾಡಿದ್ದಾರೆ.
ಸಾರ್ವಜನಿಕರು ಈ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ಈ ಆ್ಯಪ್‌ ಮೂಲಕ ದಾಖಲಿಸಬಹುದು. ನಂತರ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಾರೆ.   ಸರ್ಕಾರದ ಜನಪ್ರಿಯ ಯೋಜನೆಗಳ  ಮಾಹಿತಿಯನ್ನೂ  ಈ ಆ್ಯಪ್‌ ನಲ್ಲಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT