ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ ಆರಂಭ

ಬಸವೇಶ್ವರ ದೇವಸ್ಥಾನದಿಂದ ಯಾತ್ರೆಗೆ ಶಾಖಾ ಮೂರುಸಾವಿರ ಮಠದ ಸ್ವಾಮೀಜಿ ಚಾಲನೆ
Last Updated 2 ಫೆಬ್ರುವರಿ 2017, 6:01 IST
ಅಕ್ಷರ ಗಾತ್ರ

ಬೈಲಹೊಂಗಲ: ‘ವಚನ ಸಾಹಿತ್ಯಕ್ಕೆ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ಕೊಡುಗೆ ಅಪಾರವಿದೆ’ ಎಂದು ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮಿಜಿ ಹೇಳಿದರು.

ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದಿಂದ ಉಳವಿಗೆ ಹೊರಟ ಭಕ್ತರ ಪಾದಯಾತ್ರೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಬಸವಣ್ಣ, ಅಕ್ಕಮಹಾದೇವಿ, ಹರಳಯ್ಯ ಅವರಂತಹ ಮಹಾನ್‌ ಶರಣರು ಕನ್ನಡ ನಾಡಿಗೆ ವಚನಗಳನ್ನು ಕೊಡುಗೆ ನೀಡಿದ್ದಾರೆ. ಜಾತೀಯತೆ ವಾದಗಳು ಭುಗಿಲೆದ್ದಾಗ ತಂಡ ತಂಡವಾಗಿ ದೇಶ್ಯಾದಂತ್ಯ ಸಂಚರಿಸಿ ವೀರಶೈವ ಸಮುದಾಯವರನ್ನು ಒಗ್ಗೂಡಿಸಿ ಪಾದಯಾತ್ರೆ ಮೂಲಕ ವಚನಗಳನ್ನು ಪರಿಚಯಿಸುವ ಮೂಲಕ ನಾಡಿನಲ್ಲಿ ಶಾಂತಿ ನೆಲೆಯೂರುವಂತೆ ಮಾಡಿದ್ದಾರೆ’ ಎಂದರು.

‘ಉತ್ತರ ಭಾಗಕ್ಕೆ ಕೆಲವರು ಹೊರಟರೆ, ದಕ್ಷಿಣ ಭಾಗಕ್ಕೆ ಉಳವಿ ಚನ್ನಬಸವಣ್ಣ, ಹರಳಯ್ಯ ಇನ್ನೂ ಹಲವಾರು  ಶರಣರು ಈ ಭಾಗದಲ್ಲಿ ಬಂದು ನೆಲೆಸಿ ಇಲ್ಲಿನ ಜನರಲ್ಲಿ ಧರ್ಮದ ಕುರಿತು ಜಾಗೃತಿ ಮೂಡಿಸಿದ್ದಾರೆ. ಲಿಂಗೈಕ್ಯ  ಗಂಗಮ್ಮ ಅಂಗಡಿಯವರು 50 ವರ್ಷಗಳ ಹಿಂದೆ ಉಳವಿ ಚನ್ನ ಬಸವಣ್ಣನ ದರ್ಶನಕ್ಕೆ ಪಾದಯಾತ್ರೆ ಆರಂಭಿಸಿ ಇಂದು ಸುವರ್ಣ ಮಹೋ ತ್ಸವದ ಪಾದಯಾತ್ರೆಯಲ್ಲಿ ಜನರು ಭಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಚರಿತ್ರೆಯಾಗಿದೆ’ ಎಂದರು.

ಉಳವಿಯ ಶಂಕ್ರಯ್ಯ ಸ್ವಾಮೀಜಿ ಮಾತನಾಡಿ, ‘ಬರಗಾಲದ ದಿನಗಳಲ್ಲಿ ಉಳವಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚನ್ನಬಸವಣ್ಣ ದರ್ಶನಕ್ಕೆ ಬರುವ ಯಾತ್ರಾತ್ರಿಗಳು ನೀರು ಮಿತವಾಗಿ ಬಳಸಿ, ಪರಿಸರ, ಸ್ವಚ್ಛತೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು’ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಪುರಸಭೆ ಉಪಾಧ್ಯಕ್ಷ ಉಳವಪ್ಪ ಬಡ್ಡಿಮನಿ, ಮಲ್ಲನಾಯ್ಕ ಪಾಟೀಲ, ಪಾಂಡಪ್ಪ ಇಂಚಲ, ಈಶ್ವರ ಕೊಪ್ಪದ, ಬಸವರಾಜ ಶಿಂತ್ರಿ, ದುಂಡವ್ವ ಮುರುಗಿ, ಚನ್ನಪ್ಪ ಅಂಗಡಿ, ಭಕ್ತರು ಇದ್ದರು. 50 ಕ್ಕೂ ಹೆಚ್ಚು ಭಕ್ತಾದಿಗಳು ಪಟ್ಟಣದಿಂದ ಉಳವಿಗೆ 50ನೇ ವರ್ಷದ ಪಾದಯಾತ್ರೆ ನಡೆಸಿದರು. ಶಿಕ್ಷಕ ಬಸವರಾಜ ಭರಮಣ್ಣವರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT