ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚದುರಿಹೋದ ‘ದೇವರ ಮಕ್ಕಳು’....!

ನಗರದ ಮಧ್ಯೆಯೇ ಇರುವ ಸರ್ಕಾರಿ ಶಾಲೆಗೆ ಬೀಗ
Last Updated 4 ಫೆಬ್ರುವರಿ 2017, 5:22 IST
ಅಕ್ಷರ ಗಾತ್ರ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಠಾ ರದಲ್ಲಿ ಹಲವಾರು ವರ್ಷಗಳಿಂದ ನಡೆ ದುಕೊಂಡು ಬಂದಿದ್ದ `ದೇವರ ಶಾಲೆ' ಎಂದೇ ಗುರುತಿಸಿಕೊಂಡಿದ್ದ  ಜಿಲ್ಲಾ ಪಂಚಾಯಿತಿ ಕಿರಿಯ ಪ್ರಾಥಮಿಕ ಶಾಲೆ ಯನ್ನು  ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಏಕಾಏಕಿಯಾಗಿ ಮುಚ್ಚುವ ಕೆಲಸ ಬುಧವಾರ ಶಿಕ್ಷಣ ಇಲಾಖೆಯಿಂದ ನಡೆದಿದೆ.
 
ಇದರಿಂದ ಶಾಸಕಿ ಶಕುಂತಳಾ ಶೆಟ್ಟಿ ತೀವ್ರ ಅಸಮಾಧಾನಗೊಂಡಿದ್ದಾರೆ.
 
ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯ, ರಕ್ಷಣೆ ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆಯಿರುವ ಕಾರಣಕ್ಕಾಗಿ ಮಕ್ಕಳ ಪೋಷಕರು ಮತ್ತು ಎಸ್‌ಡಿಎಂಸಿಯವರ ಕೋರಿ ಯಂತೆ ಅಲ್ಲಿನ ವಿದ್ಯಾರ್ಥಿಗಳನ್ನು ಹಾರಾಡಿ, ನೆಲ್ಲಿಕಟ್ಟೆ ಮತ್ತು ರಾಗಿಕು ಮೇರು ಸರ್ಕಾರಿ ಶಾಲೆಗಳಿಗೆ ಸೇರಿಸಲಾಗಿದ್ದು, ಬುಧವಾರದಿಂದ ಶಾಲೆಯನ್ನು ಮುಚ್ಚಲಾಗಿದೆ. 
 
ಈ ಶಾಲೆಗೆ ನೀರಿನ ವ್ಯವಸ್ಥೆಯೂ ಸೇರಿದಂತೆ ಇತರ ಕೆಲವೊಂದು ವ್ಯವಸ್ಥೆಗ ಳನ್ನು ಮಹಾಲಿಂಗೇಶ್ವರ ದೇವಾಲಯದ ವತಿಯಿಂದಲೇ ಮಾಡಿ ಕೊಡಲಾಗುತ್ತಿತ್ತು. ಕಳೆದ ಮಳೆಗಾಲದಲ್ಲಿ ಒಸರು ನೀರು ಶಾಲಾ ಕೊಠಡಿಯೊಳಗೆ ತುಂಬಿಕೊಂಡು ಮಕ್ಕಳಿಗೆ ಪಾಠ ಪ್ರವಚನ ಮಾಡಲು ಸಾಧ್ಯವಾಗದ ಸ್ಥಿತಿ ಎದುರಾಗಿದ್ದ ಸಂದರ್ಭದಲ್ಲಿ ದೇವಾಲಯದ ವತಿಯಿಂದಲೇ ದೇವಳದ ಹೊಸ ಕಟ್ಟಡದಲ್ಲಿ ಮಕ್ಕಳ ಪಾಠ ಪ್ರವಚನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪಕ್ಕದ ಚರಂಡಿಯಿಂದ ಸೋರಿಕೆಯಾಗುತ್ತಿದ್ದ ಹೊಲಸು ನೀರು ಶಾಲೆಯೊಳಗೆ ತುಂಬಿ ಕೊಂಡು ಮಕ್ಕಳು ಕುಳಿತುಕೊಳ್ಳಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾ ಣವಾಗಿದ್ದ ವೇಳೆ ಮುಚ್ಚದ ಶಾಲೆಯನ್ನು ಈಗ ಯಾಕೆ ಏಕಾಏಕಿಯಾಗಿ ಮುಚ್ಚ ಲಾಯಿತು ಎಂದು ಜನ ಪ್ರಶ್ನಿಸುತ್ತಿದ್ದಾರೆ.
 
ಗಮನಕ್ಕೆ ಬಂದಿಲ್ಲ-ಶಾಸಕಿ: ದೇವಾಲಯದ ವಠಾರದ ಸರ್ಕಾರಿ ಶಾಲೆಯನ್ನು ಮುಚ್ಚಿರುವುದು ತನ್ನ ಗಮನಕ್ಕೆ ಬಂದಿಲ್ಲ. ಶಾಲೆಯೊಂದನ್ನು ಮುಚ್ಚಿರುವುದು ತಪ್ಪು. 12-15 ಮಕ್ಕಳಿ ದ್ದರೂ ಶಾಲೆಯನ್ನು ಮುಚ್ಚಬಾರದು ಎಂಬ ನಿಯಮ ಇದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ.
ಶಾಲೆಯನ್ನು ಮುಚ್ಚಿರುವ ಕುರಿತು ಮಹಾಲಿಂಗೇಶ್ವರ ದೇವಾಲಯದ ಆಡ ಳಿತ ಕಮಿಟಿಗೂ ಯಾವುದೇ ಮಾಹಿತಿ ಇರಲಿಲ್ಲ.  ಇದೀಗ ಏಕಾಏಕಿ ಯಾಗಿ ಬಂದ್ ಮಾಡಲಾಗಿದೆ.
 
**
ಶಾಲೆಗೆ ಮೂಲಸೌಲಭ್ಯ ಇಲ್ಲದ ಕಾರಣ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲಾಗಿದೆ
-ಶಶಿಧರ ಜಿ.ಎಸ್‌.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT