ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದ ಸಂದರ್ಭದಲ್ಲಿ ಕೃತಕ ಮಳೆಯನ್ನು ಸುರಿಸಲು ಈ ಕೆಳಕಂಡ ಯಾವ ರಸಾಯನಿಕವನ್ನು ಬಳಸುತ್ತಾರೆ?

Last Updated 5 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

1) ಬರಗಾಲದ ಸಂದರ್ಭದಲ್ಲಿ ಕೃತಕ ಮಳೆಯನ್ನು ಸುರಿಸಲು ಈ ಕೆಳಕಂಡ ಯಾವ ರಸಾಯನಿಕವನ್ನು ಬಳಸುತ್ತಾರೆ?
a) ಸಿಲ್ವರ್ ಆಯೋಡೈಡ್   b) ಆಯೋಡಿನ್
c) ಸೋಡಿಯಂ ಬೈ ಕಾರ್ಬೋನೆಟ್   
d) ಪೊಟಾಷಿಯಂ


2)  2001 ರಿಂದ 2015ರ ಅವಧಿಯಲ್ಲಿ ಕೇಂದ್ರ ರಫ್ತು ವಹಿವಾಟಿನ ಅಂಕಿ-ಅಂಶಗಳ ಪ್ರಕಾರ ಯಾವ ದೇಶ ಭಾರತದಿಂದ ಹೆಚ್ಚು ಕಬ್ಬಿಣವನ್ನು ಆಮದು ಮಾಡಿಕೊಂಡಿದೆ?
a) ಚೀನಾ  b) ಅಮೆರಿಕ
c) ಬ್ರಿಟನ್ d)  ಜಪಾನ್


3) ದಕ್ಷಿಣ ಭಾರತದಲ್ಲಿ ಮ್ಯಾಂಗನೀಸ್ ಖನಿಜ ನಿಕ್ಷೇಪಗಳು ಹೆಚ್ಚಾಗಿ ಯಾವ ರಾಜ್ಯದಲ್ಲಿ ಕಂಡು ಬಂದಿವೆ?
a) ಕೇರಳ    b) ಗೋವಾ

c) ಮಹಾರಾಷ್ಟ್ರ  d) ತಮಿಳುನಾಡು
4) ಡೋಲಮೈಟ್ ಮತ್ತು ಕ್ರೋಮೈಟ್ ಖನಿಜ ಸಂಪತ್ತಿನ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿರುವ ರಾಜ್ಯ ಯಾವುದು?
a) ಮಧ್ಯಪ್ರದೇಶ  b) ಒಡಿಶಾ
c) ತ್ರಿಪುರ d) ಜಮ್ಮು ಮತ್ತು ಕಾಶ್ಮಿರ
5) ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಶೇ. 90 ರಷ್ಟು ಯಾವ ನಿಕ್ಷೇಪಗಳು ದೊರೆತಿವೆ?
a) ಕಲ್ಲಿದ್ದಲು   b) ಬಾಕ್ಸೈಟ್
c) ತಾಮ್ರ d) ಕಬ್ಬಿಣ
6) ಭಾರತದಲ್ಲಿ ಖನಿಜಗಳ ಅನ್ವೇಷಣೆ ಮತ್ತು ಹೊರ ತೆಗೆಯುವ ಕೆಲಸವನ್ನು  ಕೇಂದ್ರ ಸರ್ಕಾರದ ಯಾವ ಸಂಸ್ಥೆ ಮಾಡುತ್ತಿದೆ?
a) ಸರ್ವೇ ಆಫ್‌ ಇಂಡಿಯಾ  
b) ಭಾರತ ಭೂವಿಜ್ಞಾನ ಸರ್ವೇ
c) ಭಾರತೀಯ ಖನಿಜ ಇಲಾಖೆ  
d)  ಭಾರತೀಯ ಖನಿಜ ಮತ್ತು ಅದಿರು ಸಂಸ್ಥೆ
7) ದಕ್ಷಿಣ ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಹೇರಳವಾಗಿ ಪೆಟ್ರೋಲ್ ದೊರೆಯುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ ?
a) ಕಾವೇರೀನದಿ ಮುಖಜಭೂಮಿ
b) ತುಂಗಭದ್ರಾನದಿ ಮುಖಜಭೂಮಿ
c)  ಗೋದಾವರೀನದಿ ಮುಖಜ ಭೂಮಿ
d) ಕೃಷ್ಣಾನದಿ ಮುಖಜಭೂಮಿ
8)  1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯಪಡೆದ ಆಫ್ರಿಕಾ ಖಂಡದ ಜಾಂಬಿಯಾ ದೇಶದ ರಾಜಧಾನಿ ಯಾವುದು?
a) ಹರಾರೆ        b) ನೈರೊಬಿ
c) ಇಸ್ತಾಂಬುಲ್      d) ಬಂಜುಲ್
9) 2011ರ ಜನಗಣತಿ ಪ್ರಕಾರ 9.87 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಯಾವುದು?
a) ಕೊಡಗು  b) ರಾಮನಗರ
c) ಗದಗ      d) ಬೆಂಗಳೂರು ಗ್ರಾಮಾಂತರ
10) ರಾಜ್ಯದಲ್ಲಿ ಈ ಕೆಳಕಂಡ ಯಾವ ಸ್ಥಳದಲ್ಲಿ ನೂತನ ರೈಲು ಗಾಲಿ ಮತ್ತು ಅಚ್ಚಿನ ಕಾರ್ಖಾನೆ ಆರಂಭವಾಗುತ್ತಿದೆ?
a) ಶ್ರೀನಿವಾಸಪುರ-ಕೋಲಾರ 
b) ಬಾಗೇಪಲ್ಲಿ-ಚಿಕ್ಕಬಳ್ಳಾಪುರ
c) ಕೊಳ್ಳೆಗಾಲ-ಚಾಮರಾಜನಗರ   
d) ಹೊಸಕೋಟೆ-ಬೆಂಗಳೂರು ಗ್ರಾಮಾಂತರ
ಉತ್ತರಗಳು 1-a, 2-d, 3-c, 4-b, 5-a, 6-b, 7- c, 8-d, 9-d, 10-a.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT