ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಸರಳವಾಗಿರಲಿ

ವಾಚಕರ ವಾಣಿ
Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಸುಧಾರಣೆ ತರುವುದೆಂದು ಭಾವಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಕರಡನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ಪ್ರಕಟಿಸಲಾಗಿದೆ. ಇದನ್ನು ಎಲ್ಲರೂ ಓದಿ ತಿಳಿದುಕೊಳ್ಳಲು ಮುಕ್ತ ಅವಕಾಶವಿದೆ. ಆದರೆ ಅತಿ ಕ್ಲಿಷ್ಟವಾದ ಇಂಗ್ಲಿಷ್‌ ಭಾಷೆಯಲ್ಲಿ ಬರೆದಿರುವುದರಿಂದ ಇದನ್ನು ಓದಿ ಅರ್ಥೈಸಿಕೊಳ್ಳಲು ವರ್ತಕರು ಮತ್ತು ಸಾರ್ವಜನಿಕರು ಸಾಕಷ್ಟು ಹೆಣಗಾಡುವಂತಾಗಿದೆ. 
 
ಮೊದಲೇ ತೆರಿಗೆ ಕಾನೂನುಗಳು ಕಠಿಣವಾಗಿರುತ್ತವೆ. ಇನ್ನು ಅವು ಈ ಪರಿಯ ಪಾಂಡಿತ್ಯಪೂರ್ಣ ಇಂಗ್ಲಿಷ್‌ನಲ್ಲಿ ಇದ್ದರಂತೂ ಮುಗಿದೇ ಹೋಯಿತು. ಸಾಮಾನ್ಯರು ಈ ಕಾಯ್ದೆಗಳನ್ನು ಓದುವ ಸಾಹಸವನ್ನೇ ಮಾಡುವುದಿಲ್ಲ. ಇದರಿಂದ ಅವರು ತೆರಿಗೆಗೆ ಸಂಬಂಧಿಸಿದ ಪ್ರತಿ ಕೆಲಸಕ್ಕೂ ಇಂಗ್ಲಿಷ್‌ನಲ್ಲಿ ಪಾಂಡಿತ್ಯ ಪಡೆದ ಮಧ್ಯವರ್ತಿಗಳಿಗೆ ಶರಣಾಗಿ ಸಾಕಷ್ಟು ಶೋಷಣೆಗೆ ತುತ್ತಾಗುವ ಸಂಭವವಿದೆ.
 
ಕಾಯ್ದೆಯಲ್ಲಿನ ಅಂಶಗಳು ಸಾಮಾನ್ಯ ಪ್ರಜೆಗಳೆಲ್ಲರಿಗೂ ಬಹು ಸುಲಭವಾಗಿ ಅರ್ಥವಾಗುವಂತೆ ಇರಬೇಕೆಂಬುದು ಕಾಯ್ದೆ ರಚನೆಯ ಮೊದಲ ತತ್ವವಾಗಬೇಕು. ಸರಳವಾದ ಭಾಷೆಯಲ್ಲಿ, ಅದರಲ್ಲೂ ಪ್ರಾದೇಶಿಕ ಭಾಷೆಗಳಲ್ಲಿ ಅದು ಲಭ್ಯವಾದರೆ ತೆರಿಗೆ ಇಲಾಖೆಯ ಸಿಬ್ಬಂದಿಯೂ ಸುಲಭವಾಗಿ ಓದಿ ಅರ್ಥಮಾಡಿಕೊಂಡು ಅನುಷ್ಠಾನಗೊಳಿಸುತ್ತಾರೆ. ಇಲ್ಲವಾದರೆ ಜಿಎಸ್‌ಟಿ ಕಾಯ್ದೆ ಗೊಂದಲದ ಗೂಡಾಗುವ ಸಂಭವವೇ ಹೆಚ್ಚು.
-ಹಜರತಅಲಿ ದೇಗಿನಾಳ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT