ಬೆಳಗಿನ ಉಪಹಾರಕ್ಕೆ ಏನು ಮಾಡುವುದು ಎಂಬ ಚಿಂತೆಯೇ? ಆ ಚಿಂತೆ ಬಿಡಿ!! ನಿಮಗಾಗಿ ‘ಪ್ರಜಾವಾಣಿ ರೆಸಿಪಿ’ ಘಮ ಘಮಿಸುವ ಪುದೀನ ಉಪ್ಪಿಟ್ಟು ಮಾಡುವುದು ಹೇಗೆ ಎಂಬ ರೆಸಿಪಿಯನ್ನು ತಂದಿದೆ. ವಿಡಿಯೊ ನೋಡುವ ಮೂಲಕ ಅಥವಾ ಪುದೀನ ಉಪ್ಪಿಟ್ಟಿನ ರೆಸಿಪಿಯ ಮಾಹಿತಿ ಓದಿಕೊಂಡು 10 ನಿಮಿಷದಲ್ಲಿ ಪುದೀನ ಉಪ್ಪಿಟ್ಟು ಮಾಡಿ ಬೆಳಗಿನ ಉಪಹಾರ ಸವಿಯಿರಿ

ಬೇಕಾಗುವ ಸಾಮಗ್ರಿಗಳು:
1. ಮಿಡಿಯಂ ರವೆ 1/2ಕಪ್
2. ಎಣ್ಣೆ 2ಚಮಚ
3. ಟೊಮ್ಯಾಟೊ ಹೆಚ್ಚಿದ್ದು 1
4. ಈರುಳ್ಳಿ ಹೆಚ್ಚಿದ್ದು 2
5. ನಿಂಬೆಹಣ್ಣು 1
6. ಉಪ್ಪು ಸ್ವಲ್ಪ
7. ತೆಂಗಿನತುರಿ ಸ್ವಲ್ಪ

ಒಗ್ಗರಣೆಗೆ
1. ಸಾಸಿವೆ ಸ್ವಲ್ಪ
2. ಕಡಲೆಬೇಳೆ ಸ್ವಲ್ಪ
3. ಉದ್ದಿನಬೇಳೆ ಸ್ವಲ್ಪ
4. ಹಿಂಗು ಚಿಟಿಕೆ

ರುಬ್ಬುವುದಕ್ಕೆ
1. ಹಸಿನಮೆಣಿಸಿನಕಾಯಿ 4
2. ಪುದೀನ 1/4ಕಪ್
3. ಕೊತ್ತಂಬರಿ ಸೊಪ್ಪು ಸ್ವಲ್ಪ
4. ಬೆಲ್ಲ 2ಚಮಚ

ಮಾಡುವ ವಿಧಾನ: ಬಾಂಡ್ಲಿಯಲ್ಲಿ ಒಂದು ಸ್ಪೂನ್ ಎಣ್ಣೆ ಬಿಸಿ ಮಾಡಿ ರವೆಯನ್ನು ಹುರಿಯಿರಿ. ಇದನ್ನು ಪ್ಲೇಟ್ ತೆಗೆದಿಡಿ. ಅದೇ ಬಾಂಡ್ಲಿಯಲ್ಲಿ ನೀರು ಬಿಸಿ ಮಾಡಿ ಬಿಸಿ ನೀರಿಗೆ ರುಬ್ಬಿದ ಮಿಶ್ರಣ ಹಾಕಿ (ಹಸಿಮೆಣಸಿನ ಕಾಯಿ4, ಪುದೀನ 1/4 ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಬೆಲ್ಲ 2 ಸ್ಪೂನ್) ತೆಗೆದಿಡಿ. ನಂತರ ಅದೇ ಬಾಂಡ್ಲಿಯಲ್ಲಿ 2 ಸ್ಪೂನ್ ಎಣ್ಣೆ, ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ, ಹಿಂಗು, ಲವಂಗ 3, ಒಣಮೆಣಸಿನ ಕಾಯಿ, ಈರುಳ್ಳಿ, ಟೊಮ್ಯಾಟೊ, ಕಡಲೆಕಾಯಿ ಬೀಜ ಸೇರಿಸಿ ಹದವಾಗಿ ಹುರಿಯುವುದು. ಹುರಿದ ಮಿಶ್ರಣಕ್ಕೆ ಮಸಾಲ ನೀರು, ಹುರಿದ ರವೆ, ಉಪ್ಪು ತೆಂಗಿನತುರಿ ಸೇರಿಸಿ ಕಮ್ಮಿ ಉರಿಯಲ್ಲಿ ಗಟ್ಟಿಯಾಗುವವರೆಗೆ ಬೇಯಿಸಿ ಕಡೆಯಲ್ಲಿ ನಿಂಬೆರಸ, ಕೊತ್ತುಂಬರಿ ಸೊಪ್ಪು ಸೇರಿಸಿದರೆ ಪುದೀನ ಉಪ್ಪಿಟ್ಟು ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.