ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ತಾಲ್ಲೂಕು ಘೋಷಣೆ: ಸಿಎಂಗೆ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕರ ನೇತೃತ್ವದ ನಿಯೋಗ
Last Updated 13 ಫೆಬ್ರುವರಿ 2017, 9:17 IST
ಅಕ್ಷರ ಗಾತ್ರ

ಕಮಲಾಪುರ: ಪ್ರಸಕ್ತ ಬಜೆಟ್‌ನಲ್ಲಿ ಕಮಲಾಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಶಾಸಕ ಜಿ.ರಾಮಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ನಿಯೋಗ ಬೆಂಗಳೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಕಮಲಾಪುರ 88 ಹಳ್ಳಿಗಳಿಗೆ ಆಯಕಟ್ಟಿನ ಸ್ಥಳವಾಗಿದೆ. ವಿಶೇಷ ತಹಶೀಲ್ದಾರ್ ಕಚೇರಿ, ಪದವಿ ಕಾಲೇಜು, ಡಯಟ್‌, ರಾಷ್ಟ್ರೀಕೃತ ಬ್ಯಾಂಕ್‌ಗಳು, ಪೊಲೀಸ್‌ ಠಾಣೆ, ಕೈಗಾರಿಕಾ ತರಬೇತಿ ಕೇಂದ್ರ, ಪಶುವೈದ್ಯಕೀಯ ಸಹಾಯಕ ನಿರ್ದೇಶಕರ ಕಚೇರಿ, ಸಹಕಾರಿ ಪತ್ತಿನ ಸಂಘ, ಅತಿಥಿ ಗೃಹ ಸೇರಿದಂತೆ ಮತ್ತಿತರ ಅವಶ್ಯಕ ಕಚೇರಿಗಳಿವೆ.

ಈ ಹಿಂದೆ ವಿಧಾನಸಭಾ ಮತಕ್ಷೇತ್ರವಾಗಿದ್ದು, ಎಂ.ಬಿ. ಪಾಟೀಲ ವರದಿಯಲ್ಲೂ ಕಮಲಾಪುರ ತಾಲ್ಲೂಕು ಸ್ಥಾನವಾಗಲು ಯೋಗ್ಯವಾಗಿದೆ ಎಂದು ತಿಳಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸೂಕ್ತ ಕ್ರಮ ಕೈಗೊಂಡು ಈ ಬಜೆಟ್‌ನಲ್ಲಿಯೇ ಕಮಲಾಪುರ ತಾಲ್ಲೂಕು ರಚನೆಯನ್ನು ಕಾರ್ಯ­ರೂಪಕ್ಕೆ ತರಬೇಕು. ಇದಕ್ಕೆ ಅವಶ್ಯವಾ­ಗಿರುವ ಅನುದಾನಕ್ಕೆ ಅನುಮೋದನೆ ನೀಡಿ ಸಂಬಂಧಪಟ್ಟ ಎಲ್ಲ ಕಚೇರಿ ಗಳನ್ನು ಕಮಲಾಪುರಕ್ಕೆ ವರ್ಗಾಯಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರವಾಸೋದ್ಯಮ ನಿಗಮದ ನಿರ್ದೇ ಶಕ ಮಲ್ಲಿನಾಥ ಪಾಟೀಲ ಸೊಂತ, ರಾಜ್ಯ ಯುವ ಕಾಂಗ್ರಸ್‌ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಗಬರಾದಿ, ಮುಖಂಡ ಇಬ್ರಾಹಿಂಸಾಬ್‌ ಅತ್ತಾರ, ರಾಜು ಚಿಕ್ಕೆಗೌಡ, ಉದಯಪಾಟೀಲ ರಟಕಲ, ಅಮರ ಚಿಕ್ಕೆಗೌಡ, ಕಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್‌ ಸತ್ತಾರ, ಜೀವಣಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹುಡಗಿ, ಸದಸ್ಯ ಮಕದುಮ್‌ ಖಾಜಿ, ಮಹಾದೇವ ದೋಶೆಟ್ಟ, ಶರಣು ಗೌರೆ, ಹಸನ ಪಟೇಲ, ಹೀರಾ ಬಾಯಿ ವಾಘಲೆ, ಸುರೇಖಾ ನಾಟೀಕಾರ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT