ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹಗಲು ಕನಸುಗಾರ್ತಿ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

*ಸಿನಿಮಾ ಮತ್ತು ಧಾರಾವಾಹಿ, ಎರಡು ದೋಣಿ ಪಯಣ ಹೇಗೆ ಸಾಗುತ್ತಿದೆ?
ಯಾವುದೇ ತಡೆ ಇಲ್ಲದೆ ನಿರಾತಂಕವಾಗಿ ಸಾಗುತ್ತಿದೆ. ಈಗಂತೂ ಸಾಕಷ್ಟು ಮಂದಿ ಸಿನಿಮಾ ಮತ್ತು ಧಾರಾವಾಹಿ ಎರಡರಲ್ಲಿಯೂ ಸಮತೋಲನ ಸಾಧಿಸುತ್ತಿದ್ದಾರೆ. ನಾನು ಕೂಡ ಅದೇ ಪಯಣದಲ್ಲಿದ್ದೇನೆ. ದೊರಕುವ ಅವಕಾಶಗಳನ್ನು ಬಿಡದೇ ನಟಿಸಲು ಪ್ರಯತ್ನಿಸುತ್ತಿದ್ದೇನೆ.

*ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗುತ್ತಿದೆ ಅನಿಸುತಿದೆಯೇ?
ಅವಕಾಶ ಎಂದಿಗೂ ಕಡಿಮೆಯಾಗಿಲ್ಲ.  ಮೊದಲ ಸಿನಿಮಾ ಬಿಡುಗಡೆಯಾದ ನಂತರ ಹಲವು ಧಾರಾವಾಹಿಗಳಲ್ಲಿ ಅವಕಾಶ ಬಂದಿತ್ತು. ಆಗ ಒಪ್ಪಿಕೊಂಡಿರಲಿಲ್ಲ. ಆದರೆ ಒಳ್ಳೆಯ ಅವಕಾಶ ಬಂದರೆ ಮಾಡಬಹುದು ಅನಿಸಿತ್ತು. ಪ್ರಕಾಶ್‌ ಪ್ರೊಡಕ್ಷನ್‌ ಅವರಿಂದ ‘ಅನುರಾಗ’ ಧಾರಾವಾಹಿಗೆ ಕರೆ ಬಂದಾಗ ಇಲ್ಲ ಎನ್ನಲು ಆಗಲಿಲ್ಲ. ಅವರೇ ಧಾರಾವಾಹಿಯ ಜೊತೆಗೆ ಸಿನಿಮಾದಲ್ಲಿ ನಟಿಸಬಹುದು ಎಂಬ ಅವಕಾಶ ನೀಡಿದಾಗ ಈ ಅವಕಾಶವನ್ನು ಬಿಡಲು ಮನಸ್ಸಾಗಲಿಲ್ಲ.

*ತುಂಬಾ ಮಾತನಾಡುತ್ತೀರಂತೆ?
ಹೌದು, ಸಿಕ್ಕಾಪಟ್ಟೆ ಮಾತನಾಡುತ್ತೇನೆ. ಮಾತು ಆಡುವುದೆಂದರೆ ನನಗೆ ತುಂಬಾ ಇಷ್ಟ. ನನ್ನ ಅಪ್ಪ ಶ್ರೀಕಂಠಪ್ಪ ಒಳ್ಳೆಯ ಮಾತುಗಾರ. ಅವರು ರಾಜಕಾರಣಿ ಕೂಡ. ಅವರ ಮಗಳಾಗಿ ನಾನು ಕಡಿಮೆ ಮಾತನಾಡಿದರೆ ಹೇಗೆ? ಹಾಗಾಗಿ ಎದುರಿಗಿರುವವರಿಗೆ ಹಿಂಸೆ ಆಗುವಷ್ಟು ಮಾತನಾಡುತ್ತೇನೆ. ಅವರೇ ನಿಲ್ಲಿಸು ಅನ್ನುವವರೆಗೂ ನನ್ನ ಮಾತಿಗೆ ವಿರಾಮ ದೊರಕುವುದಿಲ್ಲ.

*ಜನ ನಿಮ್ಮನ್ನು ನೋಡಿ ಕನ್‌ಫ್ಯೂಸ್ ಆಗ್ತಾರಂತೆ...
ನಾನು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರೀತಿಗೂ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ರೀತಿಗೂ ಸಾಕಷ್ಟು ವ್ಯತ್ಯಾಸವಿದೆ. ನಿಜ ಜೀವನದಲ್ಲಿ ನಾನು ಇಲ್ಲದೇ ಇರುವ ರೀತಿಯಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾಗಳಲ್ಲಿ ಮೇಕಪ್‌ ಇಲ್ಲದೇ ನಟಿಸಿರುವುದೇ ಹೆಚ್ಚು. ಹಾಗಾಗಿ ಜನರು ಗೊಂದಲಕ್ಕೀಡಾಗುತ್ತಾರೆ.  ‘ಆ ಸಿನಿಮಾದಲ್ಲಿ ನೀವೇ ಇರುವುದಲ್ವಾ, ಧಾರಾವಾಹಿಯಲ್ಲಿಯೂ ನೀವೇನಾ...?’ ಹೀಗೆ ಹಲವು ಪ್ರಶ್ನೆ ಕೇಳುತ್ತಾ ಉತ್ತರ ಪಡೆದುಕೊಳ್ಳುತ್ತಾರೆ.

*ಕನಸು ನಿಜವಾಗಿದ್ದು ಇದೆಯಾ?
ನಾನು ರಾತ್ರಿ ಕನಸು ಕಾಣುವುದಕ್ಕಿಂತ, ಬೆಳಿಗ್ಗೆ ಕನಸು ಕಾಣುವುದೇ ಹೆಚ್ಚು. ಆದರೆ ಒಮ್ಮೆ ಅಮ್ಮ ತುಂಬಾ ನೆನಪಾಗುತ್ತಾ ಇದ್ದರು. ಅಮ್ಮ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅಂದುಕೊಂಡಿದ್ದೆ. ರಾತ್ರಿ ಕನಸಿನಲ್ಲಿ ಕೂಡ ಬಂದಿದ್ದರು. ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಪ್ರತ್ಯಕ್ಷವಾಗಿದ್ದು. ಸಿಹಿ ತಿನಿಸು ಮತ್ತು ಅಡುಗೆಯನ್ನು ಮಾಡಿ ತಂದಿದ್ದರು. ಅಂದು ನನ್ನ ಹುಟ್ಟಿದಹಬ್ಬ ಬೇರೆ. ಅಮ್ಮ ಊರಿನಿಂದ ಬರುತ್ತಾರೆ ಅಂದುಕೊಂಡೇ ಇರಲಿಲ್ಲ. ತುಂಬಾ ಖುಷಿಯಾಗಿತ್ತು.

*ಮೊದಲ ಪ್ರೇಮ ಪತ್ರ ಸಿಕ್ಕಾಗ ಆದ ಅನುಭವ?
ಅಯ್ಯೋ ತಲೆಯೇ ತಿರುಗಿತ್ತು. ತುಂಬಾ ಭಯಪಟ್ಟಿದ್ದೆ. ಆಗ ನಾನು ಎಂಟನೇ ತರಗತಿ ಓದುತ್ತಿದ್ದೆ. ಪ್ರೇಮ ಪತ್ರ ಕೊಟ್ಟಾಗ ನಾನು ತೆಗೆದುಕೊಳ್ಳದೆ ಹೊರಟು ಹೋದೆ. ಸ್ವಲ್ಪ ಹೊತ್ತು ಕೂಳಿತುಕೊಂಡೆ, ಹೆದರಿಕೆಗೆ ಬಿಪಿ ಜಾಸ್ತಿಯಾಗಿತ್ತು. ಜೊತೆಗೆ ತಲೆಯೂ ತಿರುಗುತ್ತಿತ್ತು. ಓದಿದ್ದು ಹಳ್ಳಿಯಲ್ಲಿಯಾದ್ದರಿಂದ ಅಷ್ಟೊಂದು ಬೋಲ್ಡ್‌ ಆಗಿರಲಿಲ್ಲ.

*ಎಷ್ಟು ದಿನಕ್ಕೊಮ್ಮೆ ಹೇರ್‌ಸ್ಟೈಲ್‌ ಬದಲಾಯಿಸಿಕೊಳ್ಳುತ್ತೀರಾ?
ದಿನಕ್ಕೆ ಎರಡು, ಮೂರು ಬಾರಿಯಾದರೂ ಬದಲಾಯಿಸಿಕೊಳ್ಳುತ್ತೇನೆ. ನನ್ನ ಉಡುಪು ಬದಲಾದ ಹಾಗೆ ಹೇರ್‌ಸ್ಟೈಲ್‌ ಬದಲಾಗುತ್ತಿರುತ್ತದೆ.

*ಮೊದಲ ಕ್ರಷ್‌ ಯಾವುದು?
ಡಿಗ್ರಿಯಲ್ಲಿ ಮೊದಲ ಕ್ರಷ್‌ ಆಗಿದ್ದು. ಆದರೆ ಈಗ ಅವರ ಹೆಸರನ್ನು ಮಾತ್ರ ಕೇಳಬೇಡಿ.

*ಲವ್‌ ಮ್ಯಾರೇಜ್‌ ಇಷ್ಟಾನೋ, ಅರೇಂಜ್‌ ಮ್ಯಾರೇಜ್‌ ಇಷ್ಟಾನೋ?
ಎರಡರಲ್ಲಿ ಯಾವುದಾದರೂ ಸರಿ. ನಾನೀಗ ಖುಷಿಯಾಗಿದ್ದೇನೆ. ಈ ಸಂತೋಷವನ್ನು ದುಪ್ಪಟ್ಟಾಗಿಸುವವರು ಸಿಕ್ಕರೆ ಸಂತೋಷದಿಂದ ಸ್ವೀಕರಿಸುವೆ. ಆದರೆ ಇಲ್ಲಿಯವರೆಗೂ ಅದರ ಬಗ್ಗೆ ಚಿಂತಿಸಿಲ್ಲ.

*ಧಾರಾವಾಹಿಗಳು ಗ್ಲಾಮರಸ್‌ ಆಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸ್ಪರ್ಧೆ ಇದೆ. ಹಾಗಾಗಿ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವುದು ಅಗತ್ಯ. ನಮ್ಮ ಪ್ರತಿ ಶೈಲಿಯನ್ನು ಜನರು ಪ್ರತಿದಿನ ಗಮನಿಸುತ್ತಿರುತ್ತಾರೆ ಹಾಗಾಗಿ ಪ್ರತಿಯೊಂದರ ಬಗ್ಗೆ ಗಮನ ನೀಡಬೇಕಾಗುತ್ತದೆ. 

*ಫಿಟ್‌ ಆಗಿರಲು ಏನೆಲ್ಲ ಕಸರತ್ತು ನಡೆಸುತ್ತೀರಾ?
ಮೊದಲೆಲ್ಲ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿದ್ದೆ. ಈಗ ಸ್ವಲ್ಪ ಕಡಿಮೆ ಆಗಿದೆ.  ದಿನಕ್ಕೆ ಕನಿಷ್ಠ ಒಂದು ಗಂಟೆ ಜಿಮ್‌ನಲ್ಲಿ ಬೆವರಿಳಿಸದೆ ಇರುವುದಿಲ್ಲ. ವಾರದ ಅಂತ್ಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಜಾಗಿಂಗ್‌ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT