ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಅಂಗಳದಲ್ಲಿ ರೋವರ್‌ ಇಳಿಯುವ ಮೂರು ಸ್ಥಳಗಳು ಅಂತಿಮ

Last Updated 14 ಫೆಬ್ರುವರಿ 2017, 11:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನಾಸಾ 2020ಕ್ಕೆ ಮಂಗಳಯಾನ ನಡೆಸಲಿದ್ದು, ರೋವರ್‌ ಇಳಿಯಬೇಕಾದ ಮೂರು ಸ್ಥಳಗಳನ್ನು ವಿಜ್ಞಾನಿಗಳು ಅಂತಿಮಗೊಳಿಸಿದ್ದಾರೆ.

ಅಟ್ಲಾಸ್‌ ವಿ 541 ರಾಕೆಟ್‌ ಮೂಲಕ ಅಮೆರಿಕದ ವಾಯು ನೆಲೆಯಿಂದ 2020ರ ಜುಲೈನಲ್ಲಿ ‘ಮಂಗಳಯಾನ 2020’ ಕಾರ್ಯಾರಂಭಿಸಲಿದೆ.

ಮಂಗಳನಲ್ಲಿ ಇರಬಹುದಾದ ಹಾಗೂ ಇದ್ದಿರಬಹುದಾದ ಜೀವ ಸಂಕುಲದ ಮಾಹಿತಿ ಸಂಗ್ರಹಣ ಕಾರ್ಯವನ್ನು ರೋವರ್‌ ನಡೆಸಲಿದೆ. 

ಸಿರ್ಟಿಸ್‌(ಕೆಂಪು ಗ್ರಹದ ಹಳೆದ ಭಾಗ), ಜೆಜಿರೋ ಕ್ರಾಟರ್‌(ಹಿಂದೆ ಮಂಗಳದ ಕೆರೆಗಳ ಭಾಗ) ಹಾಗೂ ಕೊಲಂಬಿಯಾ ಹಿಲ್ಸ್‌(ಬಿಸಿನೀರು ಬುಗ್ಗೆಗಳ ಪ್ರದೇಶ) ಭೌಗೋಳಿಕ ಪ್ರದೇಶಗಳಲ್ಲಿ ರೋವರ್‌ ಅನ್ವೇಷಣೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT