ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ನಲ್ಲಿ ಕೆಲಸ ನೀಡುವಂತೆ ಪತ್ರ ಬರೆದ 7 ರ ಬಾಲೆ

Last Updated 16 ಫೆಬ್ರುವರಿ 2017, 14:59 IST
ಅಕ್ಷರ ಗಾತ್ರ

ಲಂಡನ್‌:  7 ರ ಪ್ರಾಯದ ಆಂಗ್ಲ ಬಾಲೆ ಕ್ಲೋಯಿ ಬ್ರಿಡ್ಜ್‌ವಾಟರ್‌ ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಸುಂದರ್‌ ಪಿಚೈಗೆ ಕೈಬರಹದಲ್ಲಿ ಪತ್ರ ಬರೆದು, ಉದ್ಯೋಗ ನೀಡುವಂತೆ ಬಿನ್ನವಿಸಿಕೊಂಡಿದ್ದಾಳೆ.

ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿರುವ ಭಾರತೀಯ ಮೂಲದ ಪಿಚೈ, ಖುದ್ದು ಪತ್ರಕ್ಕೆ ಮರು ಉತ್ತರ ಕಳಿಸಿಕೊಟ್ಟಿದ್ದಾರೆ.

ಇಂಗ್ಲೆಂಡಿನ ಹೆರೆಫಾರ್ಡ್‌ ಪಟ್ಟಣ ವಾಸಿಯಾದ ಕ್ಲೋಯಿ, ರೊಬೊಟ್ಸ್‌, ಕಂಪ್ಯೂಟರ್‌ ಕೌಶಲಗಳ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾಳೆ. ಇವುಗಳ ಮೇಲೆ ಹೆಚ್ಚಿನ ಸಂಶೋಧನೆಗೆ ಮತ್ತು ತಂತ್ರಜ್ಞಾನ ತಿಳಿಯಲು ಗೂಗಲ್‌ನಲ್ಲಿ ಉದ್ಯೋಗ ದೊರಕಿಸುವಂತೆ ಸಿಇಓಗೆ ಕೈಬರಹದ ಮುದ್ದಾದ ಪತ್ರ ಬರೆದಿದ್ದಾಳೆ.

ತಂತ್ರಜ್ಞಾನದೆಡೆಗೆ ಕ್ಲೋಯಿಗೆ ಇರುವ ಸೆಳೆತ ಒಂದು ದಿನ ಆಕೆ ತಂದೆಗೆ ಪ್ರಶ್ನಿಸುವಂತೆ ಮಾಡಿದೆ. ಇದಕ್ಕೆಲ್ಲ ವೇದಿಕೆ ಎಂದರೆ ಗೂಗಲ್‌ ಎಂದು ಆಕೆ ತಂದೆ ಹೇಳಿದ್ದಾರೆ. ತಡಮಾಡದೇ ಆಕೆ ಕೈಬರಹದ ಪತ್ರ ಬರೆದು ಪೋಸ್ಟ್‌ ಕೂಡ ಮಾಡಿದ್ದಾಳೆ.



ಜಾರುಬಂಡಿ ಆಡುವ ವಯಸ್ಸಿನಲ್ಲಿ ಕ್ಲೋಯಿಗೆ ಇರುವ ತುಡಿತಕ್ಕೆ ಬೆರಗಾದ ಪಿಚೈ, ಗೂಗಲ್‌ನಲ್ಲಿ ಕೆಲಸ ಮಾಡುವ ಕನಸನ್ನು ಕೈಬಿಡಬೇಡ, ಗೂಗಲ್‌ನಲ್ಲಿ ಹುದ್ದೆ, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಎರಡು ಗಳಿಸಲು ನಿನ್ನ ಕೈಯಲ್ಲಿ ಸಾಧ್ಯವಿದೆ ಎಂದು ಹುರಿದುಂಬಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT