ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿಗೆ ಹರಕೆ ಸಲ್ಲಿಸಿದ ಚಂದ್ರಶೇಖರ್‌ ರಾವ್‌

₹ 5ಕೋಟಿ ಮೌಲ್ಯದ 19 ಕೆ.ಜಿ ಚಿನ್ನಾಭರಣ ಸಮರ್ಪಣೆ
Last Updated 24 ಫೆಬ್ರುವರಿ 2017, 6:13 IST
ಅಕ್ಷರ ಗಾತ್ರ
ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರು ತಿರುಪತಿ ವೆಂಕಟರಮಣನಿಗೆ 19 ಕೆ.ಜಿ. ಚಿನ್ನಾಭರಣ ಕೊಡುವ ಮೂಲಕ ಹರಕೆ ತೀರಿಸಲಿದ್ದಾರೆ.
 
ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ಅವರು ಈ ಹರಕೆ ಹೊತ್ತಿದ್ದರು.  ಫೆಬ್ರುವರಿ 22 ರಂದು  ಚಿನ್ನಾಭರಣ ಕೊಡುವ ಮೂಲಕ ಹರಕೆ ಅರ್ಪಿಸಲಿದ್ದಾರೆ.
₹ 5ಕೋಟಿ ಮೌಲ್ಯದ, 19 ಕೆ.ಜಿ ಚಿನ್ನಾಭರಣವನ್ನು ಅವರು ದೇವರಿಗೆ ಸಮರ್ಪಸಲಿದ್ದಾರೆ. ಪ್ರಾಚೀನ ಕಾಲದ ರಾಜಮನೆತನಗಳ ನಂತರ ಇಷ್ಟು ಬೆಲೆಬಾಳುವ ಆಭರಣಗಳನ್ನು ತಿರುಪತಿ ದೇವಸ್ಥಾನಕ್ಕೆ ನೀಡಿದ ದಾಖಲೆಯಲ್ಲಿ ತೆಲಂಗಾಣ ಸರ್ಕಾರದ ಹೆಸರು ಸೇರಲಿದೆ. 
 
ಮುಖ್ಯಮಂತ್ರಿ ಮತ್ತವರ ಕುಟುಂಬ ವರ್ಗ ಹಾಗೂ ಸಂಪುಟ ಸಹೊದ್ಯೋಗಿಗಳು ಫೆಬ್ರುವರಿ 22 ರಂದು ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. 
 
**
ವಿಶೇಷ ಆಭರಣಗಳು
ಆಭರಣ ತಯಾರಿಸಲು ಚಂದ್ರಶೇಖರ್‌ ರಾವ್‌ ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ₹5 ಕೋಟಿ ಹಣ ನೀಡಿದ್ದರು. ಗುತ್ತಿಗೆ ಆಧಾರದ ಮೂಲಕ ಕೊಯಮತ್ತೂರ್‌ನ ಕೀರ್ತಿಲಾಲ್‌ ಕಾಳಿದಾಸ್‌ ಜುವೆಲರ್ಸ್‌  ಅವರು 22 ಕ್ಯಾರೆಟ್‌ ಚಿನ್ನದ ಆಭರಣಗಳನ್ನು 15 ದಿನಗಳಲ್ಲಿ ತಯಾರಿಸಿದ್ದಾರೆ. 
 
ಇದರಲ್ಲಿ ತೆಲಂಗಾಣ ಪದ್ಧತಿಯಂತೆ 14.2 ಕೆ.ಜಿಯ ‘ಸಾಲಿಗ್ರಾಮ್‌ ಹರಾಮ್‌’ ಹಾಗೂ  4.61 ಕೆ.ಜಿಯ ಐದು ಸರಗಳಿವೆ.  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT