ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ, ಮಂಗಳೂರು ಕೆನರಾಗೆ ಪ್ರಶಸ್ತಿ

ನಿಟ್ಟೆ: ರಾಜ್ಯಮಟ್ಟದ ಅಂತರ ಕಾಲೇಜು ಉತ್ಸವ
Last Updated 18 ಫೆಬ್ರುವರಿ 2017, 6:47 IST
ಅಕ್ಷರ ಗಾತ್ರ
ಕಾರ್ಕಳ: ತಾಲ್ಲೂಕಿನ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಎರಡು ದಿನಗಳ ರಾಜ್ಯಮಟ್ಟದ ಅಂತರ ಕಾಲೇಜು ಎನಿಗ್ಮಾ ಉತ್ಸವದಲ್ಲಿ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು ಪ್ರಥಮ ಮತ್ತು ಮಂಗಳೂರಿನ ಕೆನರಾ ಕಾಲೇಜು ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿತು.
 
ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ ನಡೆಸಲಾಯಿತು. ಸುರತ್ಕಲ್ ರಾಷ್ಟ್ರೀಯ ತಾಂತ್ರಿಕ ಕಾಲೇಜಿನ ಉಪನ್ಯಾಸಕ  ಮುಲ್ಕಿ ಮಾಧವ ಕಾಮತ್ ಪ್ರಶಸ್ತಿಗಳನ್ನು ವಿತರಿಸಿದರು. ನಿಟ್ಟೆ ಕ್ಯಾಂಪಸ್‌ನ ರಿಜಿಸ್ಟ್ರಾರ್ ಯೋಗೀಶ್ ಹೆಗ್ಡೆ ಇದ್ದರು. 
 
ಕಾಲೇಜಿನ ಪ್ರಾಂಶುಪಾಲೆ ವೀಣಾ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಸಂಯೋಜಕಿ ಮನು ಕುಮಾರಿ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕಿ ಫ್ರೀಡಾ ಮೆಂಡೋನ್ಸಾ ವಂದಿಸಿದರು. ಕುಮಾರಿ ಸ್ಟೆಫಿ  ನಿರೂಪಿಸಿದರು.
 
ಸ್ಪರ್ಧಾ ವಿಜೇತರು: ಮಾರ್ಕೆಟಿಂಗ್ :  ಮಂಗಳೂರು ಸೇಂಟ್ ಅಲೋಶಿಯಸ್ ಕಾಲೇಜು– 1, ಮಂಗಳೂರು ಕೆನರಾ ಕಾಲೇಜು– 2.
ಜರ್ನಲಿಸಮ್ ಆಂಡ್ ಫೋಟೊಗ್ರಫಿ: ಬ್ರಹ್ಮಾವರ ಎಸ್ಎಂಎಸ್ ಕಾಲೇಜ್– 1
 
ರಸಪ್ರಶ್ನೆ: ಕೆ.ಎಲ್.ಇ ಲಿಂಗರಾಜ್ ಕಾಲೇಜ್ ಆಫ್‌ ಬಿ.ಬಿ.ಎ.–1, ಉಡುಪಿ ಯುಪಿಎಂಸಿ– 2. ಸೈಬರ್ ಕ್ವೆಸ್ಟ್: ಬ್ರಹ್ಮಾ ವರ ಎಸ್.ಎಂ.ಎಸ್ ಕಾಲೇಜು– 1. ಮಂಗಳೂರು ಎಸ್.ಡಿ.ಎಂ ಕಾಲೇಜು– 2. ಹ್ಯೂಮನ್ ರಿಸೋರ್ಸ್: ಬ್ರಹ್ಮಾವರ ಎಸ್. ಎಂ.ಎಸ್ ಕಾಲೇಜ್– 1. ಮೂಡುಬಿದಿರೆ ಆಳ್ವಾಸ್ ಕಾಲೇಜು– 2. ಫೈನಾನ್ಸ್: ಕೆ ಎಲ್ ಇ ಲಿಂಗರಾಜ್ ಕಾಲೇಜ್ ಆಫ್‌ ಬಿಬಿಎ– 1. ಶಿವಮೊಗ್ಗ ಎಟಿಎನ್‌ಸಿಸಿ– 2.
 
ಟ್ರೆಸರ್ ಹಂಟ್: ಮಂಗಳೂರು ಕೆನರಾ ಕಾಲೇಜ್– 1. ಮೂಟ್ ಕೋರ್ಟ್:  ಮೂಡುಬಿದಿರೆ ಆಳ್ವಾಸ್ ಕಾಲೇಜ್– 1. ಬ್ರಹ್ಮಾವರ ಎಸ್‌ಎಂಎಸ್ ಕಾಲೇಜ್ –2. ಮಾಕ್ ಪ್ರೆಸ್: ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜ್– 1. ಮಂಗಳೂರು ಎಸ್. ಡಿ.ಎಂ ಕಾಲೇಜು– 2. ಬೆಸ್ಟ್ ಮ್ಯಾನೇ ಜರ್: ಮಂಗಳೂರು ಸೇಂಟ್ ಅಲೋ ಶಿಯಸ್ ಕಾಲೇಜು– 1. ಐಸ್ ಬ್ರೇಕರ್: ಶಿವಮೊಗ್ಗ ಎಟಿಎನ್‌ಸಿಸಿ –1, ಡಾನ್ಸ್: ಬೆಂಗಳೂರು ಎಸ್‌ಎಸ್ಎಎಂ ಎಫ್‌ಜಿಸಿ– 1,ಕೆನರಾ ಕಾಲೇಜು–2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT