ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರಕ್ಕೂ ಹರಡಿದ ಮಂಗನ ಕಾಯಿಲೆ, ಇಬ್ಬರ ಸಾವು

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕ ಮತ್ತು ಗೋವಾದಲ್ಲಿ ಕಂಡು ಬಂದಿರುವ ಮಂಗನ ಕಾಯಿಲೆ ಮಹಾರಾಷ್ಟ್ರಕ್ಕೂ ಹರಡಿದೆ. ರಾಜ್ಯದ ಸಿಂಧುದುರ್ಗ ಜಿಲ್ಲೆಯಲ್ಲಿ ಇಬ್ಬರು ಈ ರೋಗಕ್ಕೆ ಬಲಿಯಾಗಿದ್ದಾರೆ.

‘ಜಿಲ್ಲೆಯ ದಕ್ಷಿಣ ಭಾಗದ 15 ಗ್ರಾಮಗಳ 43 ಜನರಿಗೆ ಮಂಗನ ಕಾಯಿಲೆ ಸೋಂಕು ತಗುಲಿದೆ’ ಎಂದು ಸಿಂಧುದುರ್ಗ ಜಿಲ್ಲಾ ಆರೋಗ್ಯಾಧಿಕಾರಿ ಯೋಗೀಶ್‌ ಸಾಳೆ ಹೇಳಿದ್ದಾರೆ.

‘ಸೋಂಕು ಹರಡುವಿಕೆ ತಡೆಗಟ್ಟುವುದಕ್ಕಾಗಿ  ಎರಡು ತಿಂಗಳ ಹಿಂದೆಯೇ ಲಸಿಕೆ ಅಭಿಯಾನ ಕೈಗೊಳ್ಳಲಾಗಿತ್ತು. ಡಿಸೆಂಬರ್‌, ಜನವರಿಯಲ್ಲಿ 2,842 ಮಂದಿಗೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ  ಎಲ್ಲ ಪ್ರಯತ್ನಗಳ ಹೊರತಾಗಿಯೂ ಈ ತಿಂಗಳು ಇಬ್ಬರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

ವೈರಸ್‌ ಸೋಂಕಿನಿಂದಾಗಿ ಬರುವ ಈ ಕಾಯಿಲೆ (ಜ್ವರ) ಬೇಸಿಗೆಯಲ್ಲಿ ಅಂದರೆ ಡಿಸೆಂಬರ್‌ ಮತ್ತು ಮೇ ನಡುವೆ ಹೆಚ್ಚಾಗಿ ಕಂಡು ಬರುತ್ತದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ಮಹಾರಾಷ್ಟ್ರದಲ್ಲಿ ಈ ಕಾಯಿಲೆ ಕಂಡು ಬಂದಿತ್ತು. ಸೋಂಕಿಗೆ ತುತ್ತಾಗಿದ್ದ ಏಳು ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT