ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡದಿಂದ ಖುಷ್ಬೀರ್‌ ಕೌರ್‌ ವಜಾ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಹರಿಯಾಣದ ಸಂದೀಪ್ ಕುಮಾರ್ ಅವರು ಶನಿವಾರ ಇಲ್ಲಿ ನಡೆದ  ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್‌ನ 50 ಕಿಲೋಮೀಟರ್ಸ್ ವಿಭಾಗದಲ್ಲಿ  ಚಿನ್ನದ ಪದಕ ಗೆದ್ದರು. ಜತೆಗೆ ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡರು.
 
ನಡಿಗೆ ಪಟು ಖುಷ್ಬೀರ್ ಕೌರ್ ಅವರನ್ನು ಏಷ್ಯಾ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಿಂದ ವಜಾಗೊಳಿಸಲಾಗಿದೆ. 
 
ಸಂದೀಪ್ ಅವರು 3 ಗಂಟೆ, 55ನಿಮಿಷ, 59.05 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.  ಅದರೊಂದಿಗೆ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿ ರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದರು.  2014ರಲ್ಲಿ ಅವರು 3ಗಂಟೆ, 56 ನಿಮಿಷ, 22 ಸೆಕೆಂಡುಗಳ ದಾಖಲೆ ಬರೆದಿದ್ದರು. ಸರ್ವಿಸಸ್‌ನ ಜಿತೇಂದರ್ ಸಿಂಗ್ (4ಗಂ, 2ನಿ, 11ಸೆ) ಮತ್ತು ಚಂದನ್ ಸಿಂಗ್ (4ಗಂ, 4ನಿ, 18.41ಸೆ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. 
 
 ವಜಾ: ದೆಹಲಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿ ಯನ್‌ಷಿಪ್‌ನ 20 ಕಿಲೋಮೀಟರ್ಸ್‌ ವಿಭಾಗದಲ್ಲಿ ಖುಷ್ಬೀರ್ ಅವರು ಸ್ಪರ್ಧಿಸ ಬೇಕಿತ್ತು.  ಆದರೆ, ಅವರು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್ (ಎಎಫ್‌ಐ)ಗೆ ಯಾವುದೆ ಮಾಹಿತಿಯನ್ನೂ ನೀಡದೇ ಗೈರುಹಾಜರಾದರು. ಮಹಿಳೆಯರ ವಾಕಿಂಗ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅವರ ವಿರುದ್ಧ ಎಎಫ್‌ಐ ಶಿಸ್ತುಕ್ರಮ ತೆಗೆದುಕೊಂಡಿದೆ. 
 
‘ಮಾರ್ಚ್ 20ರಂದು ಜಪಾನ್‌ನಲ್ಲಿ ಏಷ್ಯನ್ ಚಾಂಪಿಯನ್‌ಷಿಪ್ ನಡೆಯ ಲಿದೆ. ಅದಕ್ಕಾಗಿ ತಂಡವನ್ನು ಆಯ್ಕೆ ಮಾಡಲಾಗಿದ್ದು ಅದರಿಂದ ಕೌರ್ ಅವರನ್ನು ಕೈಬಿಡಲಾಗಿದೆ’ ಎಂದು ಎಎಫ್‌ಐ ಆಯ್ಕೆ ಸಮಿತಿ ಅಧ್ಯಕ್ಷ ಗುರು ಬಚ್ಚನ್ ಸಿಂಗ್ ರಾಂದ್ವಾ ತಿಳಿಸಿದ್ದಾರೆ. 
 
ಪುರುಷರ ವಿಭಾಗದಲ್ಲಿ ಪ್ರಮುಖ ಅಥ್ಲೀಟ್ ಮನೀಷ್ ಸಿಂಗ್ ರಾವತ್ ಕೂಡ  ಸ್ಪರ್ಧಿಸಿರಲಿಲ್ಲ. ಆದ್ದರಿಂದ ಅವರೂ ಏಷ್ಯಾ ಚಾಂಪಿಯನ್‌ಷಿಪ್‌ಗೆ ತೆರಳುವುದು ಅನುಮಾನವಿದೆ
 
ತಂಡ:
ಪುರುಷರು: ಕೆ.ಟಿ. ಇರ್ಫಾನ್, ದೇವೇಂದ್ರಸಿಂಗ್, ಕೆ. ಗಣಪತಿ, ಜೈಭಗವಾನ್, ಏಕನಾಥ ತುರಂಬಾ, ಸುನಿಲ್ ರಾಠಿ.
ಮಹಿಳೆಯರು: ಪ್ರಿಯಾಂಕಾ ಪಟೇಲ್, ಶಾಂತಿಕುಮಾರಿ, ರಾಣಿ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT