ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಶ್ಚಿಮಾತ್ಯ ಪ್ರಭಾವ ಕೊನೆಯಾಗಲಿ: ರಷ್ಯಾ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮ್ಯೂನಿಚ್ (ಜರ್ಮನಿ) : ಜಾಗತಿಕ ಮಟ್ಟದಲ್ಲಿ ಪಾಶ್ಚಿಮಾತ್ಯರ ಪ್ರಭಾವವನ್ನು ಕೊನೆಗೊಳಿಸಬೇಕು ಎಂದು ರಷ್ಯಾ ಹೇಳಿದೆ.
‘ಪ್ರತಿಯೊಂದು ದೇಶ ತನ್ನದೇ ಆದ ಸಾರ್ವಭೌಮತ್ವ ಹೊಂದಿದೆ. ಪಾಶ್ಚಿಮಾತ್ಯ ಪ್ರಭಾವ ಕೊನೆಗೊಂಡು ಪ್ರಜಾಸತ್ತಾತ್ಮಕ ಮಾದರಿಯ ಜಗತ್ತು ನಿರ್ಮಾಣವಾಗುವ ಆಶಾವಾದ ಹೊಂದಿದ್ದೇನೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯಿ ಲಾವ್ರೊವ್ ಹೇಳಿದ್ದಾರೆ.

ನ್ಯಾಟೊ ಪಡೆಗಳಿಗೆ ಸಂಬಂಧಿಸಿ ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮಿತ್ರರಾಷ್ಟ್ರಗಳಿಗೆ ವಾಗ್ದಾನ ಮಾಡಿದ ಬೆನ್ನಲ್ಲೇ ಸೆರ್ಗೆಯಿ ಈ ಹೇಳಿಕೆ ನೀಡಿದ್ದಾರೆ.

ನ್ಯಾಟೊ ಎಂಬುದು ಶೀತಲ ಸಮರದ ಒಂದು ಕುರುಹು ಎಂದೂ ಅವರು ಹೇಳಿದ್ದಾರೆ. ‘ರಷ್ಯಾವು ಅಮೆರಿಕದೊಂದಿಗೆ ಪರಸ್ಪರ ಗೌರವದ ಮತ್ತು ಜಾಗತಿಕ ಸ್ಥಿರತೆಗೆ ಪೂರಕವಾದ ಜವಾಬ್ದಾರಿಯುತ ಬಾಂಧವ್ಯ ಬಯಸುತ್ತದೆ. ಉಭಯ ರಾಷ್ಟ್ರಗಳ ನಡುವೆ ನೇರವಾದ ಸಂಘರ್ಷ ಇದ್ದಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT