ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ, ಧೈರ್ಯದಿಂದ ಸಂಸಾರದಲ್ಲಿ ನೆಮ್ಮದಿ

Last Updated 20 ಫೆಬ್ರುವರಿ 2017, 7:33 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ‘ಮಹಿಳೆಗೆ ಜ್ಞಾನ, ಶಕ್ತಿ, ಧೈರ್ಯ ಇದ್ದರೆ ಸಂಸಾರದಲ್ಲಿ ನೆಮ್ಮದಿ ಕಾಣಬಹುದಾಗಿದೆ’ ಎಂದು ಮಡಿಕೇರಿಯ ಆರ್ಥಿಕ ಸಲಹೆಗಾರ್ತಿ ಗೀತಾ ಗಿರೀಶ್ ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸೋಮವಾರಪೇಟೆ ತಾಲ್ಲೂಕು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಸಹಯೋಗದಲ್ಲಿ ಇಲ್ಲಿ ಮಂಟಪದಲ್ಲಿ ಭಾನುವಾರ ಆಯೋ ಜಿಸಿದ್ದ ತಾಲ್ಲೂಕು ಮಟ್ಟದ ಮಹಿಳಾ ಸಮಾವೇಶದಲ್ಲಿ ‘ಕೌಟುಂಬಿಕ ಸಾಮರಸ್ಯಕ್ಕೆ ಮಾಧ್ಯಮದ ಪಾತ್ರ’ ಕುರಿತು ಅವರು ಮಾತನಾಡಿದರು.

ಮಾಧ್ಯಮ ಇಂದಿನ ಆಧುನಿಕ ಯುಗದಲ್ಲಿ ಗುರುವಾಗಿ, ವೈದ್ಯರಾಗಿ, ತಾಯಿಯಾಗಿ, ಕಲೆ, ಸಂಸ್ಕೃತಿ, ಆಚಾರ ವಿಚಾರ, ಧರ್ಮ, ಯೋಗ, ಧ್ಯಾನವನ್ನು ಪ್ರತಿಪಾದಿಸುವ ಪ್ರಮುಖ ಅಂಗವಾಗಿದೆ. ಇದರ ಸದುಪಯೋಗವನ್ನು ಬಳಸಿ ಕೊಂಡು ನಮ್ಮ ಬದುಕಿನ ಉನ್ನತಿ ಕರಣಕ್ಕೆ ಮುಂದಾಗಬೇಕು ಎಂದರು.

ಸಮಾವೇಶವನ್ನು ಉದ್ಘಾಟಿಸಿದ ನಾಕೂರು ಲಾಯರ್ ತೋಟದ ವ್ಯವಸ್ಥಾ ಪಕ ಕೃಷ್ಣ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ನಾಗರಿಕ ನ್ನಾಗಿ ರೂಪಿಸಿದರೆ ಸಮಾಜಕ್ಕೆ,ದೇಶಕ್ಕೆ ಕೊಡುವ ಅತ್ಯುತ್ತಮ ಕಾಣಿಕೆಯಾಗಲಿದೆ ಎಂದು ಹೇಳಿದರು.

ಮಕ್ಕಂದೂರಿನ ಶೂದ್ ಕಾಫಿ ತೋಟದ ಮಾಲೀಕ ಅಜಯ್ ಶೂದ್,  ಏಳನೇ ಹೊಸಕೋಟೆಯ ಗೀತಾಬಸಪ್ಪ,  ಯೋಜನಾಧಿಕಾರಿ ಪ್ರಕಾಶ್ ರೈ ಮಾತನಾಡಿದರು.


ನಿವೃತ್ತ ಶಿಕ್ಷಕಿ ಸಾವಿತ್ರಿ ಅಧ್ಯಕ್ಷತೆ ವಹಿಸಿದ್ದರು.  ಮಹಿಳೆಯರ ಕ್ರೀಡಾ ಕೂಟವನ್ನು ಪ್ರಗತಿಪರ ಕೃಷಿಕ ದಾಸಂಡ ರಮೇಶ್ ಉದ್ಘಾಟಿಸಿ ಮಾತನಾಡಿದರು.
ಕೃಷಿ ಮೇಲ್ವಿಚಾರಕ ನಾಗರಾಜು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮತಾ, ಮೇಲ್ವಿಚಾರಕಿ ಸರಸ್ವತಿ, ನಾಕೂರು ಶಿರಂಗಾಲ ಗ್ರಾಮ ಪಂಚಾ ಯಿತಿ ಉಪಾಧ್ಯಕ್ಷೆ ಯಶೋದಾ, ಸಹ ಪ್ರತಿನಿಧಿಗಳಾದ ಜಯಲಕ್ಷ್ಮಿ, ಜ್ಯೋತಿ ಲಕ್ಷ್ಮಿ, ಶಾಲಿನಿ ಭಾಗೀರಥಿ, ಶಿವ ಕುಮಾರ್, ಚಿದಾನಂದ, ವಿನೋದ್, ನಿರ್ಮಲಾ ಇತರರು ಇದ್ದರು.

ಮಹಿಳಾ ಸಮಾವೇಶದ ಅಂಗವಾಗಿ ಅಡುಗೆ, ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸೌಮ್ಯಾ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು.  ಶುಭಲಕ್ಷ್ಮಿ ಸ್ವಾಗತಿಸಿದರು. ನಾಗರಾಜು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT