ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಬೇಡಿ’

ವಿವಿಧೆಡೆ ಸಂತ–ಅನುಭಾವ ಕವಿ ಸರ್ವಜ್ಞ ಜಯಂತಿ
Last Updated 21 ಫೆಬ್ರುವರಿ 2017, 4:38 IST
ಅಕ್ಷರ ಗಾತ್ರ
ಹೊಸಪೇಟೆ: ಮಹಾನ್ ದಾರ್ಶನಿಕರ, ಶರಣರ, ಸಾಧು–ಸಂತರ ಜಯಂತಿ ಆಚ ರಣೆ ಜಾತಿ ಸೂಚಕ ಆಗಬಾರದು ಎಂದು ಸಹಶಿಕ್ಷಕಿ ಸಾವಿತ್ರಿ ಅಭಿಪ್ರಾಯಪಟ್ಟರು. 
ನಗರದ ತಾಲ್ಲೂಕು ಕಚೇರಿ ಆವರಣ ದಲ್ಲಿರುವ ಪತ್ರಿಕಾಭವನದಲ್ಲಿ ತಾಲ್ಲೂಕು ಆಡಳಿತವು ಸೋಮವಾರ ಏರ್ಪಡಿಸಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯ ಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
 
ಮಹನೀಯರ ವಿಚಾರ –ಧಾರೆಗಳು ಸಾರ್ವತ್ರೀಕರಣವಾದವು. ಅವುಗಳನ್ನು ಒಂದು ಜಾತಿಗೆ ಸೀಮಿತಗೊಳಿಸಿರು ವುದು ಅತ್ಯಂತ ಖೇದಕರ ಸಂಗತಿ. ಇಂಥಹ ಬೆಳವಣಿಗೆಯಿಂದ ಸಮಾಜ– ಸಮುದಾಯದ ನಡುವೆ ಅನಗತ್ಯ ಗೊಂದಲ ಸೃಷ್ಠಿಯಾಗಲಿದೆ. ಸರ್ವಜ್ಞರ ತ್ರಿಪದಿಗಳು ಸಮಾಜದಲ್ಲಿನ ಕಷ್ಟ – ಕಾರ್ಪಣ್ಯಗಳ ಕುರಿತು ಎತ್ತಿಹಿಡಿದಿದೆ. ಅವರು ಉತ್ತಮ ಸಮಾಜ ನಿರ್ಮಿಸುವ ಕನಸುಳ್ಳವರು. ಹೀಗಾಗಿ, ಅವರು ಸಾರ್ವಕಾಲಿಕ ಶರಣರು ಎಂದರು. 
 
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ವಿ.ಭಾಸ್ಕರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಕುಂಬಾರ ಸಮುದಾಯದ ಅಧ್ಯಕ್ಷ ಕೆ. ಹುಲುಗಪ್ಪ, ತಹಸೀಲ್ದಾರ್ ಎಚ್.ವಿಶ್ವ ನಾಥ, ನಗರಸಭೆ ಪೌರಾಯುಕ್ತ ಎಂ.ಪಿ. ನಾಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ, ಮುಖಂಡರಾದ ಸುಡು ಗಾಡೆಪ್ಪ, ರಾಮಾಂಜಿನಿ, ಮಾ.ಬ. ಸೋಮಣ್ಣ ಇದ್ದರು. 
 
‘ಸರ್ವಜ್ಞ ದಾರಿದೀಪ’
ಕೂಡ್ಲಿಗಿ: ಸರ್ವಜ್ಞನ ವಚನಗಳು ಇಂದಿಗೂ ಎಲ್ಲರ ಮನದಲ್ಲಿ ಉಳಿದಿವೆ. ಜನ ಜೀವನಕ್ಕೆ ದಾರಿದೀಪವಾಗುವ ಸಂದೇಶಗಳನ್ನು ನೀಡಿದ ಸರ್ವಜ್ಞನ ತ್ರಿಪದಿಗಳನ್ನು ಎಲ್ಲರು ಜೀವನದಲ್ಲಿ ಪಾಲಿಸಬೇಕು ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಎಂ. ವೀರಯ್ಯ ಹೇಳಿದರು. ಅವರು ಪಟ್ಟಣದ ತಹ ಶೀಲ್ದಾರ್ ಕಚೇರಿಯಲ್ಲಿ ಸೋಮವಾರ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಕುಂಬಾರ ಸಂಘ ಏರ್ಪಡಿಸಿದ್ದ ಸರ್ವಜ್ಞ ಜಯಂತಿಯಲ್ಲಿ ಮಾತನಾಡಿದರು.
 
ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷ ಕೆ. ಸಿದ್ದಪ್ಪ ಮಾತನಾಡಿ, ಸರ್ವಜ್ಞ ಜಯಂತಿಯನ್ನು ತಾಲ್ಲೂಕು ಕಚೇರಿಯಲ್ಲಿ ಮಾಡಲಾಗುತ್ತಿದ್ದು, ಬಂದ ಜನ ನಿಂತು ಕೊಳ್ಳಲು ಜಾಗ ಸಾಲುವುದಿಲ್ಲ. ಬೇರೆ ಕಡೆ ಆಚರಣೆ ಮಾಡಲು ಸ್ಥಳಾವಕಾಶ ಸಿಗುತ್ತಿಲ್ಲ. ಅದ್ದರಿಂದ ತಾಲ್ಲೂಕು ಕೇಂದ್ರ ದಲ್ಲಿ ಶೀಘ್ರವಾಗಿ ಸರ್ವಜ್ಞ ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
 
ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದ್ದರು. ಹಿಂದುಳಿದ ವರ್ಗಗಳ ಇಲಾಖೆ ಎಫ್.ಎಂ.ಕೊರಚರ್, ವೈ.ಎಂ.ಈಶಪ್ಪ, ಶಿಶು ಅಭಿವೃದ್ದಿ ಅಧಿಕಾರಿ ಸೋಮಣ್ಣ ಚಿನ್ನೂರು, ತಾಲ್ಲೂಕು ಕುಂಬಾರ ಸಂಘದ ಉಪಾಧ್ಯಕ್ಷ ಕೆ. ಮಾರೇಶ್, ಖಜಾಂಚಿ ಕೆ. ಅಂಜಿನಪ್ಪ, ಕಾರ್ಯದರ್ಶಿ ಕೆ.ಶಿವಶಂಕರ್ ಹಾಗೂ ಸದಸ್ಯರು, ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.
 
‘ತ್ರಿಪದಿ ಮೂಲಕ ಸುಜ್ಞಾನ’
ಸಿರುಗುಪ್ಪ: ಸಮಾಜದ ಅಂಕು ಡೊಂಕು ಗಳನ್ನು ತಮ್ಮ ತ್ರಿಪದಿಗಳ ಮೂಲಕ ಪ್ರತಿಪಾದಿಸಿ ಜನರನ್ನು ಸುಜ್ಞಾನದತ್ತ ಕರೆದೊಯ್ದವರು ಸರ್ವಜ್ಞರು ಎಂದು ತಹಶೀಲ್ದಾರ್‌ ಎಂ.ಸುನಿತಾ ಸ್ಮರಿಸಿದರು.
 
ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಆಯೋ ಜಿಸಿದ್ದ ತ್ರಿಪದಿ ಬ್ರಹ್ಮ ಕವಿ ಸರ್ವಜ್ಞರ ಜಯಂತಿಯಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
 
ನಗರಸಭೆ ಅಧ್ಯಕ್ಷೆ ಬಿ.ಪಾರಿಜಾತಮ್ಮ ಮಾತನಾಡಿ, ಆಡುಮುಟ್ಟದ ಬಳ್ಳಿಯಿಲ್ಲ, ಸರ್ವಜ್ಞರು ಹೇಳದ ಮಾತುಗಳಿಲ್ಲ ಎನ್ನುವ ನಾಣ್ನುಡಿಯಂತೆ ಸಮಾಜದ ಆಗುಹೋಗುಗಳನ್ನು ತಮ್ಮ ತ್ರಿಪದಿಗಳ ಮೂಲಕ ವ್ಯಕ್ತಪಡಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು ಎಂದರು. 
 
ಬಸವಭೂಷಣ ಶ್ರೀಗಳು, ಬಸವ ರಾಜಪ್ಪ ಶರಣರು ಸರ್ವಜ್ಞರ ಜೀವನ ಬದುಕು, ಸಂದೇಶ ಕುರಿತು ಉಪ ನ್ಯಾಸ ನೀಡಿದರು. ಬಿ.ಸಿ.ಎಂ. ಅಧಿಕಾರಿ ಕೆ. ಪಂಪಾಪತಿ, ತಾ.ಪಂ.ಸದಸ್ಯ ಫಕ್ಕೀರಪ್ಪ, ವಿಜಯ ರಂಗಾರೆಡ್ಡಿ, ಮಲ್ಲೇಶಪ್ಪ, ವಿಶ್ವ ನಾಥ, ಮುತ್ತಾಲಯ್ಯಶೆಟ್ಟಿ, ಸುಧಾಕರ ಮತ್ತಿತರರು ಇದ್ದರು.
 
***
‘ಶ್ರಮಿಕರ ಶೋಷಣೆಗೆ ತಡೆ ಅಗತ್ಯ’
ಬಳ್ಳಾರಿ: ಶ್ರಮಿಕರ ಮೇಲಿನ ಶೋಷಣೆ ಯನ್ನು ತಡೆಯಬೇಕಾಗಿದೆ ಎಂದು ಲೇಖಕ ಕುಂ.ವೀರಭದ್ರಪ್ಪ ಅಭಿಪ್ರಾಯ ಪಟ್ಟರು.

ನಗರದ ಜೊಳದರಾಶಿ ದೊಡ್ಡನ ಗೌಡರ ರಂಗಮಂದಿರದಲ್ಲಿ ಜಿಲ್ಲಾಡ ಳಿತ ಸೋಮವಾರ ಏರ್ಪಡಿಸಿದ್ದ ಸರ್ವಜ್ಞ ಜಯಂತಿಯಲ್ಲಿ ವಿಶೇಷ ಉಪ ನ್ಯಾಸ ನೀಡಿದ ಅವರು, ಕುಲಕಸುಬು ಗಳ ಮಧ್ಯೆ ಸಾಮರಸ್ಯವಿದ್ದಾಗ ಸಾಮಾ ಜಿಕ ಸಮಾನತೆ ಉಸಿರಾಡುತ್ತಿತ್ತು. ವೃತ್ತಿ ಯನ್ನು ಜಾತಿ ಸೂಚಕವಾಗಿ ಪರಿಗಣಿಸಿ ಜನರನ್ನು ವಿಂಗಡಿಸಿದ ಬಳಿಕ ಶ್ರಮಿಕರ ಶೋಷಣೆ ಆರಂಭವಾಯಿತು ಎಂದರು. ಕುಂಬಾರಿಕೆ ನಾಗರಿಕತೆಯ ಮೊದಲ ಕುರುಹು. ಪ್ರಪಂಚಕ್ಕೆ ಚಕ್ರ ವನ್ನು ಪರಿಚಯಿಸಿದವರು ಕುಂಬಾ ರರು, ಆದರೆ ಅದನ್ನು ವಿಷ್ಣುವಿನ ಕೈಯಲ್ಲಿ ತೊಡಿಸುವ ಮೂಲಕ ಚಕ್ರ ವನ್ನು ಹೈಜಾಕ್ ಮಾಡಲಾಗಿದೆ ಎಂದು ದೂರಿದರು. ಸರ್ವಜ್ಞ ಮೇಧಾವಿ ಕವಿ. ವ್ಯಾಸ, ವಾಲ್ಮೀಕಿಯಂತಹ ಮೇಧಾವಿ ಗಳಿಗೆ ಸರಿಸಮಾನರು. ಸರ್ವಜ್ಞ ತ್ರಿಪದಿಗಳನ್ನು ಅರ್ಥಮಾಡಿ ಕೊಂಡು ಅಳವಡಿಸಿಕೊಂಡರೆ ಉತ್ತಮ ಜೀವನ ಸಾಧ್ಯ ಎಂದರು.
 
ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್, ಮೇಯರ್ ಜಿ.ಜಯ ಲಲಿತಾ, ಉಪಮೇಯರ್ ಬಿ.ಬಸವ ರಾಜ್ ಗೌಡ, ಪಾಲಿಕೆ ಸದಸ್ಯ ಕೆರೆ ಕೋಡಪ್ಪ, ಜಿಲ್ಲಾ ಶಾಲಿವಾಹನ ಕುಂಬಾರರ ಸಂಘದ ಅಧ್ಯಕ್ಷ ಕೆ.ರಂಗ ಸ್ವಾಮಿ, ಗುರುರಾಜ್, ಸತ್ಯನಾರಾ ಯಣ, ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇ ಶಕ ಬಿ.ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT