ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ 1ರಿಂದ ಏರ್‌ಟೆಲ್‌ ರೋಮಿಂಗ್‌ ಸೇವೆ ಉಚಿತ

ಏರ್‌ಟೆಲ್‌ ಕರೆ, ಡೇಟಾ ರೋಮಿಂಗ್‌ ಶುಲ್ಕ ರದ್ದು
Last Updated 27 ಫೆಬ್ರುವರಿ 2017, 19:23 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್‌ ಜಿಯೊದ ದರ ಸಮರಕ್ಕೆ ಸಡ್ಡು ಹೊಡೆದಿರುವ ಭಾರ್ತಿ ಏರ್‌ಟೆಲ್‌ ರೋಮಿಂಗ್‌ ಶುಲ್ಕ ರದ್ದುಗೊಳಿಸಿದೆ.

ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಎಲ್ಲ ರೋಮಿಂಗ್‌ ದರಗಳು ರದ್ದಾಗಲಿವೆ. ಒಳಬರುವ ಮತ್ತು ಹೊರಹೋಗುವ ಕರೆ, ಎಸ್‌ಎಂಎಸ್‌ ಮತ್ತು ಡೇಟಾ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ.

ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್ ಬಳಸುವ ಗ್ರಾಹಕರಿಗೂ ಏರ್‌ಟೆಲ್‌ ಆಕರ್ಷಕ ಕೊಡುಗೆ ನೀಡಿದೆ. ಅಂತರರಾಷ್ಟ್ರೀಯ ಕರೆಗಳ ದರಗಳಲ್ಲಿ ಶೇ 90ರಷ್ಟು ಕಡಿತಗೊಳಿಸಿದ್ದು , ಒಂದು ನಿಮಿಷಕ್ಕೆ  ಕೇವಲ ₹3 ನಿಗದಿಗೊಳಿಸಿದೆ. ಅದೇ ರೀತಿ ಡೇಟಾ ಶುಲ್ಕವನ್ನು ಶೇ 99ರಷ್ಟು ಕಡಿತಗೊಳಿಸಿದ್ದು ಪ್ರತಿ ಎಂ.ಬಿ. ಡೇಟಾ ಬಳಕೆಗೆ ಕೇವಲ ₹3 ಶುಲ್ಕ ವಿಧಿಸುವುದಾಗಿ ಹೇಳಿದೆ.

‘ರಾಷ್ಟ್ರೀಯ ರೋಮಿಂಗ್‌ ಶುಲ್ಕ ರದ್ದಾಗಲಿದ್ದು, ಇಡೀ ದೇಶ ಸ್ಥಳೀಯ ಜಾಲದಂತೆ ಕಾರ್ಯನಿರ್ವಹಿಸಲಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರೋಮಿಂಗ್‌ನಲ್ಲಿ ಸದ್ಯ ವಿಧಿಸುತ್ತಿರುವ ಹೆಚ್ಚುವರಿ ಡೇಟಾ ಶುಲ್ಕ ಸಹ ರದ್ದು ಪಡಿಸುವುದಾಗಿ ಸಂಸ್ಥೆ ಹೇಳಿದೆ.

ಗ್ರಾಹಕರು ಭಾರಿ ಮೊತ್ತದ ಬಿಲ್‌ ನೋಡಿ ಆಘಾತಗೊಳ್ಳುವ ಪ್ರಮೇಯ ಬಾರದು. ರೋಮಿಂಗ್‌ ಶುಲ್ಕದ ಭಯವಿಲ್ಲದೆ  ಕರೆ, ಸಂದೇಶ ಮತ್ತು ಡೇಟಾ ಸೌಲಭ್ಯ  ಬಳಸಬಹುದು ಎಂದು ಸಿಇಒ ಗೋಪಾಲ್‌ ವಿಠ್ಠಲ್‌ ಆಶ್ವಾಸನೆ ನೀಡಿದ್ದಾರೆ.

ರೋಮಿಂಗ್‌ ವಿರುದ್ಧ ಏರ್‌ಟೆಲ್‌ ಘೋಷಿಸಿರುವ ಸಮರ ಏಪ್ರಿಲ್‌ 1ರಿಂದ ದೇಶದಾದ್ಯಂತ ಆರಂಭವಾಗಲಿದೆ.
ಸುನಿಲ್‌ ಮಿತ್ತಲ್‌
ಭಾರ್ತಿ ಏರ್‌ಟೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT