ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಮಾನೋತ್ಸವ ಮಾ.14ರಿಂದ

Last Updated 28 ಫೆಬ್ರುವರಿ 2017, 9:58 IST
ಅಕ್ಷರ ಗಾತ್ರ

ಗುತ್ತಲ: ‘ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದ ನಿಮಿತ್ತ ಮಾರ್ಚ್ 14ರಿಂದ 20ರವರೆಗೆ ರೇಣುಕ ವಿಜಯ ಪುರಾಣ ಪ್ರವಚನ ಕಾರ್ಯಕ್ರಮ ಹೇಮಗಿರಿಮಠದ ಆವರಣದಲ್ಲಿ ಜರುಗಲಿದೆ’ ಎಂದು ಯುಗಮಾನೋತ್ಸವ ಕಾರ್ಯಕ್ರಮ ಸಮಿತಿಯ ಖಜಾಂಚಿ ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಬಿ ಕುರವತ್ತಿಗೌಡರ ಹೇಳಿದರು.

ಪಟ್ಟಣದ ಹೇಮಗಿರಿ ಚನ್ನಬಸವೇಶ್ವರರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯುಗಮಾನೋತ್ಸವ ಕಾರ್ಯಕ್ರಮ ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿದೆ. ಮಾರ್ಚ್ 14ರ ಸಂಜೆ 4 ಗಂಟೆಗೆ ಹಾವೇರಿ ರಸ್ತೆಯಲ್ಲಿನ ಕಲ್ಮಠದಿಂದ  ಹೇಮಗಿರಿಮಠ (ಅಜ್ಜಯ್ಯನ ಮಠ)ದವರೆಗೆ ವೀರಶೈವ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿಯನ್ನು ಮೆರವಣಿಗೆ ಮೂಲಕ ತರಲಾಗುವುದು’ ಎಂದರು.

‘ಗದಗ ಜಿಲ್ಲೆಯ ನರೇಗಲ್ ಹಿರೇಮಠ ಹಾಗೂ ಸವದತ್ತಿಯ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನಿತ್ಯ ಸಂಜೆ 7ರಿಂದ 9ರ ತನಕ ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ಅವರಿಗೆ ಕಲಾವಿದ ಜಿ. ಶಿವಾನಂದ ಸಂಗೀತ ನೀಡುವರು. ಪ್ರಸಾದ ಸೇವೆಯೂ ಇರಲಿದೆ’ ಎಂದರು.

ಮಾರ್ಚ್ 20ರ ಬೆಳಿಗ್ಗೆ ಸಾಮೂಹಿಕ ಲಿಂಗದೀಕ್ಷೆ ಹಾಗೂ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಕ್ಕೆ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕೊಟ್ರಯ್ಯನವರ ಕೋವಳ್ಳಿಮಠ, ಸಮಿತಿ ಉಪಾಧ್ಯಕ್ಷ ಬಸವರಾಜ ನೀರಲಗಿ, ಬಸವರಾಜಯ್ಯ ಭೂಸ ನೂರಮಠ, ಮುರುಗೇಶ ಯಳ ಮಲಿ, ರುದ್ರಪ್ಪ ಹಾದಿಮನಿ, ಮಾಲ ತೇಶ ಶೀತಾಳ, ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT