ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತೀಯತೆ, ಅಸಮಾನತೆ ತೊಲಗಿಸಿ

ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ
Last Updated 3 ಮಾರ್ಚ್ 2017, 8:36 IST
ಅಕ್ಷರ ಗಾತ್ರ

ಬಳ್ಳಾರಿ: ದೇಶಕ್ಕೆ ಸ್ವಾತಂತ್ರ್ಯ ದೊರೆತು ಹಲವು ದಶಕಗಳಾದರೂ ಜನರನ್ನು ಕಾಡುತ್ತಿರುವ ಜಾತೀಯತೆ ಮತ್ತು ಅಸಮಾನತೆಯನ್ನು ತೊಲಗಿಸಲು ಯುವ ಜನರು ಪಣತೊಡಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಸಲಹೆ ನೀಡಿದರು.

ನಗರದ ಸರಳಾದೇವಿ ಸತೀಶ್‌ಚಂದ್ರ ಅಗರವಾಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ‘ರಾಷ್ಟ್ರಾಭಿ ವೃದ್ಧಿ ಮತ್ತು ಯುವ ಜನತೆಯ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ’ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆ ಸಿದ ಅವರು, ಸಾಮಾಜಿಕ ಅನಿಷ್ಠಗಳ ಜೊತೆಗೆ ಈಗ ಶಿಕ್ಷಣದ ವ್ಯಾಪಾರೀಕರ ಣವೂ ಭೀಕರವಾಗಿ ನಡೆದಿದೆ. ಬಹು ತೇಕ ಶಾಸಕರು ಹಾಗೂ ಸಚಿವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ಅಸಮಾಧಾನ  ವ್ಯಕ್ತಪಡಿಸಿದರು.

ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕೀಯ ವ್ಯಕ್ತಿಗಳ ಒಡೆತನದಲ್ಲಿರು ವುದರಿಂದ ಯಾವುದೇ ಸರ್ಕಾರ ಅವ ರನ್ನು ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.

ಲಂಚ ಪಡೆಯುವುದಿಲ್ಲ ಮತ್ತು ಲಂಚ ಕೊಡೋದಿಲ್ಲ ಎಂದು ಯುವಜನ ಶಪಥ ಮಾಡಬೇಕು. ಆಗ ಮಾತ್ರ ಭವಿಷ್ಯದಲ್ಲಿ ಭ್ರಷ್ಟಾಚಾರ ಮುಕ್ತ ದೇಶ ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದರು.

ಸಂವಾದ: ಸಂವಾದದಲ್ಲಿ ವಿದ್ಯಾರ್ಥಿ ಗಳು ವಿಭಿನ್ನ ಪ್ರಶ್ನೆಗಳನ್ನು ಕೇಳಿದ್ದು ಗಮನ ಸೆಳೆಯಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗ ವಹಿಸಲು ಪ್ರೇರಣೆ ನೀಡಿದವರು ಯಾರು? ಜೈಲಿನ ಅನುಭವಗಳು ಹೇಗಿ ದ್ದವು? ದೇಶಕ್ಕೆ ಸ್ವಾತಂತ್ರ್ಯ ಬೇಕಿತ್ತಾ? ಎಂಬ ಪ್ರಶ್ನೆಗಳಿಗೆ ದೊರೆಸ್ವಾಮಿ ದೀರ್ಘವಾಗಿ ಉತ್ತರಿಸಿದರು.

ತಿಪಟೂರಿನ ಪತ್ರಕರ್ತ ಕೃಷ್ಣಪ್ಪ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಯು.ಅಬ್ದುಲ್ ಮುತಾಲಿಬ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜನ ಸೈನ್ಯ ಸಂಘಟನೆಯ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಕೆ.ಎರ್ರಿಸ್ವಾಮಿ ಉಪಸ್ಥಿತರಿದ್ದರು.

‘ಕೇಸರಿಕರಣಗೊಳಿಸುವ ಬಿಜೆಪಿ’
‘ಬಿಜೆಪಿ ಸರ್ಕಾರ ಅಧಿಕಾರದಲ್ಲಿ ದ್ದರೆ ಪಠ್ಯದಲ್ಲಿ ಎಲ್ಲವನ್ನೂ ಕೇಸರೀ ಕರಣಗೊಳಿಸುತ್ತದೆ. ಜನ ಸಮುದಾ ಯದಲ್ಲಿ ದ್ವೇಷವನ್ನು ಬಿತ್ತಲು ಯತ್ನಿಸು ತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ಶಿಕ್ಷಣ ಎಂದರೆ ಏನೆಂದೇ ತಿಳಿದಿಲ್ಲ’ ಎಂದು ದೊರೆ ಸ್ವಾಮಿ ಟೀಕಿಸಿದರು.

‘ದೇಶದಲ್ಲಿ ಅನ್ನ ಮತ್ತು ವಿದ್ಯೆ ಯನ್ನು ಮಾರಾಟ ಮಾಡಬಾರದು ಎಂಬ ಮಾನವೀಯವಾದ ಸಂಪ್ರ ದಾಯ ಮೂಲೆಗುಂಪಾಗಿದೆ. ಅನ್ನ–ಶಿಕ್ಷಣ ಮಾರಾಟದ ಸರಕಾಗಿದೆ. ಸರ್ಕಾ ರಗಳು ತಮ್ಮ ಸಿದ್ದಾಂತ ತುರುಕುವ ಕೆಲಸ ಮಾಡುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT