ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲಿಯೊ ಪೀಡಿತ 60 ಮಂದಿಗೆ ಶಸ್ತ್ರ ಚಿಕಿತ್ಸೆ

Last Updated 3 ಮಾರ್ಚ್ 2017, 9:06 IST
ಅಕ್ಷರ ಗಾತ್ರ

ಶಹಾಪುರ: ಪೋಲಿಯೊ ಪೀಡಿತ ವ್ಯಕ್ತಿಗೆ ಸಾಂತ್ವನ ಹೇಳುವುದರ ಬದಲಿಗೆ ಮಾನಸಿಕವಾಗಿ ಧೈರ್ಯ ಹೇಳುವುದರ ಮೂಲಕ ಸೂಕ್ತ ಚಿಕಿತ್ಸೆಗೆ ನೆರವಾಗಬೇಕು ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ವೈದ್ಯ ಡಾ.ಎಸ್‌.ವಿ. ಆದಿನಾರಾಯಣ ಹೇಳಿದರು.

ನಗರದ ಹೊರವಲಯದ ಚಿಂತಮ್ಮ ಗೌಡತಿ ಕಾಲೇಜು ಆವರಣದಲ್ಲಿ ದಿ.ಶಿವ ಶೇಖರಪ್ಪಗೌಡ ಶಿರವಾಳ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಗುರು ವಾರ ಹಮ್ಮಿಕೊಂಡಿದ್ದ ಪೋಲಿಯೊ ಪೀಡಿತ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಅವರು ಮಾತ ನಾಡಿದರು.

ಶಿರವಾಳ ಟ್ರಸ್ಟ್ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ.  ಐದು ವರ್ಷದಿಂದ 50 ವರ್ಷದ ಪೋಲಿಯೊ ಪೀಡಿತರು ಶಿಬಿರಕ್ಕೆ ಬಂದಿದ್ದಾರೆ. 332 ರೋಗಿಗಳನ್ನು ತಪಾಸಣೆ ಮಾಡ ಲಾಗಿದ್ದು, ಅದರಲ್ಲಿ 60 ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಔಷಧಿ ಹಾಗೂ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಟ್ರಸ್ಟ್ ಭರಿಸಿದೆ ಎಂದರು.

ಟ್ರಸ್ಟ್ ಕಾರ್ಯದರ್ಶಿ ಅಮಾತೆಪ್ಪ ಕಂದಕೂರ ಮಾತನಾಡಿ, ಯಾವುದೇ ಲಾಭದ ಆಸೆಗೆ ಕಾರ್ಯ ನಿರ್ವಹಿಸುತ್ತಿಲ್ಲ. ಪೋಲಿಯೊ ಪೀಡಿತರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಹಣಕಾಸಿನ ಸಮಸ್ಯೆ ಇರುತ್ತದೆ. ಅಂತಹವರಿಗೆ ನೆರವು ನೀಡು ವ ಉದ್ದೇಶದಿಂದ ಟ್ರಸ್ಟ್ ಶಿಬಿರವನ್ನು ಆಯೋಜಿಸಿದೆ ಎಂದರು.

ರಾಯಚೂರು, ವಿಜಯಪುರ, ಕಲಬುರ್ಗಿ ಹಾಗೂ ಇತರ ಗ್ರಾಮಗಳಿಂದ ಶಿಬಿರಕ್ಕೆ ಬಂದಿದ್ದಾರೆ. ಕಳೆದ ಎರಡು ದಿನದಿಂದ ಟ್ರಸ್ಟ್ ವತಿಯಿಂದ ತಪಾಸ ಣೆಗೆ ಬಂದಿದ್ದ ರೋಗಿಗಳಿಗೆ ಉಚಿತ ಊಟ, ವಸತಿ ಹಾಗೂ ಅಗತ್ಯ ಔಷಧಿ ನೀಡುವ ವ್ಯವಸ್ಥೆ  ಮಾಡಲಾಗಿತ್ತು ಎಂದು ಹೇಳಿದರು.

  ದಿ.ಶಿವಶೇಖರಪ್ಪಗೌಡ  ಶಿರವಾಳ ಟ್ರಸ್ಟ್‌ನ ಅದ್ಯಕ್ಷ ಶಿವಪುತ್ರಪ್ಪಗೌಡ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಗುರುಪಾಟೀಲ  ಶಿರವಾಳ, ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ತಹಶೀಲ್ದಾರ ಸೋಮಶೇಖರ ಹಾಗರಗುಂಡಗಿ. ಡಾ.ಚಂದ್ರಶೇಖರ ಸುಬೇದಾರ, ರಾಮಚಂದ್ರ ಕಾಶಿರಾಜ್, ಗೌಡಪ್ಪಗೌಡ ರಬ್ಬನಹಳ್ಳಿ, ಮಾಂಗಿ ಲಾಲ್ ಜೈನ್, ಭೀಮಯ್ಯ ಕಟ್ಟಿಮನಿ, ವಸಂತ ಸುರಪುರಕರ್, ಬಸವರಾಜ ಆನೇಗುಂದಿ, ದಿನೇಶ ಜೈನ್, ಸುಧೀರ ಚಿಂಚೋಳಿ, ಮಲ್ಲಿಕಾರ್ಜುನ ಹೊಸೂರ, ಲಾಲ್ ಅಹ್ಮದ ಖುರೇಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT