ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಪಡೆಯುವ ಆಸೆಗೆ ವಯಸ್ಸಿನ ಹಂಗೇಕೆ

ಅಂಕುರ
Last Updated 3 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಳೆದ ಡಿಸೆಂಬರ್‌ನಲ್ಲಿ ‘ನ್ಯೂಯಾರ್ಕ್‌ ಟೈಮ್ಸ್‌’ ಮ್ಯಾಗಜೈನ್ ಓದುತ್ತಿದ್ದೆ. ಅದರಲ್ಲಿದ್ದ ಒಂದು ಸಂಗತಿ ನನ್ನ ಗಮನ ಸೆಳೆಯಿತು. 41 ವರ್ಷ ವಯಸ್ಸಿನ ಮಹಿಳೆಯೊಬ್ಬರು ಮಗುವಿಗಾಗಿ ಹಂಬಲಿಸುತ್ತಿದ್ದ ರೀತಿ ಇಂದಿಗೂ ನನ್ನ ಮನದಲ್ಲಿ ಅಚ್ಚೊತ್ತಿದೆ. ಆಕೆ ತನ್ನ 30ರ ದಶಕದ ಕೊನೆಯ ವರ್ಷಗಳಲ್ಲಿ ಮಗುವಿಗಾಗಿ ಪ್ರಯತ್ನಿಸಿದ್ದರು. ಆದರೆ ಫಲ ಸಿಕ್ಕಿರಲಿಲ್ಲ. ‘ಬಹುಶಃ ಮಗು ಪಡೆಯುವುದು ನನ್ನ ಹಣೆಯಲ್ಲಿ ಬರೆದಿಲ್ಲ ಎನಿಸುತ್ತೆ’ ಎಂದು ಅವರು ನೋವಿನಿಂದ ಬರೆದುಕೊಂಡಿದ್ದರು.

ಈಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಕೃತಕ ಗರ್ಭಧಾರಣೆ ತಂತ್ರಗಳು ಮತ್ತು ಐಸಿಎಸ್‌ಐ ತಂತ್ರಜ್ಞಾನ ಮೂಲಕ ಇಂಥ ಅನೇಕ ದಂಪತಿಗಳ ಕನಸನ್ನು ನನಸಾಗಿದೆ. ಗರ್ಭ ಕಟ್ಟಲು ವೀರ್ಯಾಣು ಮತ್ತು ಅಂಡಾಣು ಹಾದು ಬರಬೇಕಾದ ಅನೇಕ ತಡೆತಡೆಗಳನ್ನು ಈಗ ನಾವು ಸುಲಭವಾಗಿ ನಿವಾರಿಸಿಕೊಳ್ಳಬಹುದು.

ಮಗು ಹೊಂದುವ ದಂಪತಿಗಳ ಕನಸು ನನಸಾಗುತ್ತಿಲ್ಲವೇಕೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಇಂದಿಗೂ ಅನೇಕ ಮೂಢನಂಬಿಕೆಗಳ ವಲಯವನ್ನು ದಾಟಿಲ್ಲ. ಆಧುನಿಕ ತಂತ್ರಗಳ ಮೂಲಕ ಪರಿಶೀಲಿಸಿದಾಗ ವೀರ್ಯಾಣು ಮತ್ತು ಅಂಡಾಣುಗಳು ಪರಸ್ಪರ ಬೆಸೆದುಕೊಳ್ಳುವುದರ ಹಿಂದಿರುವ ವೈಶಿಷ್ಟ್ಯ ಅರ್ಥವಾಗುತ್ತದೆ. ಹೀಗೆ ಬೆಸೆದುಕೊಂಡ ಅಂಡಾಣು–ವೀರ್ಯಾಣುಗಳು ಭ್ರೂಣವಾಗಿ ಬೆಳೆಯಲು ಗರ್ಭಕೋಶಕ್ಕೆ ಅಂಟಿಕೊಳ್ಳಬೇಕು. ಆಗ ಮಾತ್ರ ಅದು ಯಶಸ್ವಿ ಗರ್ಭಧಾರಣೆ ಎನಿಸಿಕೊಳ್ಳಲು ಸಾಧ್ಯ.

ಯುವದಂಪತಿಗಳಲ್ಲಿ ಇದು ಸುಲಭವಾಗಿ ಆಗುತ್ತದೆ. ಆದರೆ, ದಂಪತಿಗಳ ವಯಸ್ಸು ಹೆಚ್ಚಿದಂತೆ, ಅವರ ಆರೋಗ್ಯ ಮೇಲ್ನೋಟಕ್ಕೆ ಉತ್ತಮವಾಗಿರುವಂತೆ ಕಂಡು ಬಂದರೂ, ಗರ್ಭಧಾರಣೆ ಕಷ್ಟಸಾಧ್ಯವಾದುದು. ಮಗು ಪಡೆಯುವ ಅವರ ಆಸೆ ಫಲಿಸಲು ಅಂಥವರು ಅನೇಕ ಅಡೆತಡೆಗಳನ್ನು ದಾಟಿ ಬರಬೇಕಾಗುತ್ತದೆ.

ಬಂಜೆತನಕ್ಕೆ ತಪ್ಪು ಕಾರಣಗಳು
ಉತ್ತಮ ದೇಹದಾರ್ಢ್ಯತೆ ಕಾಪಾಡಿಕೊಂಡಿರುವ ಅಥ್ಲೀಟ್‌ಗಳಲ್ಲಿಯೂ ವಯಸ್ಸಾದಂತೆ ಚಟುವಟಿಕೆಗಳು ನಿಧಾನವಾಗುತ್ತವೆ. ಹಾಗೆಂದು ಈ ನಿಶ್ಶಕ್ತಿಗೆ ಯಾವುದಾದರೂ ನಿರ್ದಿಷ್ಟ ರೋಗ ಕಾರಣವಾಗಿರುವುದಿಲ್ಲ. ವಯಸ್ಸು 30 ವರ್ಷ ದಾಟಿದ ನಂತರ ಮಗುವನ್ನು ಪಡೆಯಲು ಇಚ್ಛಿಸುವ ಅನೇಕ ದಂಪತಿಗಳು ಇಂಥದ್ದೇ ಪರಿಸ್ಥಿತಿ ಅನುಭವಿಸುತ್ತಾರೆ.

‘ಎಂಡೊಮೆಟ್ರಿಯೊಸಿಸ್‌’ ಇದ್ದರೆ ಮಗು ಆಗುವುದಿಲ್ಲ ಎನ್ನುವುದು ಒಂದು ಭ್ರಮೆ. ಎಂಡೊಮೆಟ್ರಿಯೊಸಿಸ್ ಇದ್ದರೆ ಅಂಡಾಶಯದ ಅಂಚು ಹೊಟ್ಟೆಯ ಒಳಭಾಗದ ಕುಳಿಯೊಳಗೆ ಸರಿದಿರುತ್ತದೆ. ಜಠರದ ಗೋಡೆಗೆ ಸಣ್ಣಸಣ್ಣ ಜೀವಕೋಶಗಳು ಅಂಟಿಕೊಂಡಿರುತ್ತವೆ. ಮೂತ್ರಕೋಶ ಅಥವಾ ಗರ್ಭಾಶಯನಾಳದ ಒಳಗೂ ಇಂಥದ್ದೇ ಜೀವಕೋಶಗಳು ಕಂಡು ಬರುತ್ತವೆ. ಆದರೆ, ಇಷ್ಟು ಮಾತ್ರ ನಿಜ. ಎಂಡೊಮೆಟ್ರಿಯೊಸಿಸ್‌ ಪತ್ತೆಯಾಗುವುದಕ್ಕೂ ಬಂಜೆತನಕ್ಕೂ ಯಾವುದೇ ಸಂಬಂಧವಿಲ್ಲ.

*

ಡಾ. ಎಸ್.ಎಸ್. ವಾಸನ್,

ಆ್ಯಂಡ್ರೊಲಜಿಸ್ಟ್ info@manipalfertility.com)

(ಮುಂದಿನ ವಾರ: ಮಗು ಪಡೆಯುವ ಸಾಂಪ್ರದಾಯಿಕ ಹಾಗೂ ನೂತನ ವಿಧಾನಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT