ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಹಿತ ಮರೆತ ಕಾಂಗ್ರೆಸ್-–ಬಿಜೆಪಿ’

Last Updated 4 ಮಾರ್ಚ್ 2017, 10:33 IST
ಅಕ್ಷರ ಗಾತ್ರ

ಸಿಂಧನೂರು: ನಗರದ ನೂರಾರು ಯುವಕರು ಮಾಜಿ ಶಾಸಕ ವೆಂಕಟರಾವ್ ನಾಡಗೌಡರ ನೇತೃತ್ವದಲ್ಲಿ ಗುರುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಬಿಜೆಪಿ ಕಾಂಗ್ರೆಸ್ ಮುಕ್ತ ದೇಶ ಮಾಡುವುದಾಗಿ ಹೇಳಿದರೆ, ಕಾಂಗ್ರೆಸ್ ಬಿಜೆಪಿ ಮುಕ್ತ ಮಾಡುವುದಾಗಿ ಹೇಳುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ₹44 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗುವುದು ಎಂದು ವೆಂಕಟರಾವ್ ನಾಡಗೌಡ ಹೇಳಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ತಾಲ್ಲೂಕು ಪಂಚಾಯಿತಿ ಸದಸ್ಯ ಉದಯಗೌಡ ಗಿಣಿವಾರ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಉಪಾಧ್ಯಕ್ಷ ಎಸ್.ಎಂ.ಖಾದ್ರಿ, ನಗರ ಘಟಕದ ಅಧ್ಯಕ್ಷ ಜಹಿರುಲ್ಲಾ ಹಸನ್, ಯುವ ಘಟಕದ ಅಧ್ಯಕ್ಷ ಹಟ್ಟಿ ವೀರೇಶ, ಸೈಯ್ಯದ್ ಆಸೀಫ್, ಶರಣರೆಡ್ಡಿ,  ಕೆ.ಜಿಲಾನಿಪಾಷಾ ಇದ್ದರು.

ಕುಡಿವ ನೀರು: ನಿರ್ಲಕ್ಷ್ಯ ಆರೋಪ
ಸಿಂಧನೂರು
: ತಾಲ್ಲೂಕಿನ ಸೋಮಲಾಪುರ, ಸಿಂಗಾಪುರ ಮತ್ತು ರಾಗಲಪರ್ವಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಶಾಸಕರು ಮತ್ತು ಅಧಿಕಾರಿಗಳು ಕುಡಿಯುವ ನೀರಿನ ಪೂರೈಕೆಗೆ  ಕ್ರಮಕೈಗೊಂಡಿಲ್ಲ ಎಂದು ಜೆಡಿಎಸ್ ಮುಖಂಡ ವೆಂಕಟರಾವ್ ನಾಡಗೌಡ ಆಪಾದಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ಹತ್ತು ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ.  ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮತ್ತು ಶಾಸಕರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು.

ಸಿಂಗಾಪುರ ಗ್ರಾಮದಲ್ಲಿ ಕೊಳವೆಬಾವಿ ತೋಡಿದ್ದರೂ ನೀರು ಬಂದಿಲ್ಲ. ಪಕ್ಕದ ಮದ್ಯಸಾರ ಘಟಕದ ಬಳಿ ನೀರಿನ ಲಭ್ಯತೆಯಿದೆ. ₹10 ಲಕ್ಷ ಖರ್ಚಾಗಬಹುದು. ಆದರೆ ಅಧಿಕಾರಿಗಳು ಹಣವಿಲ್ಲವೆಂದು ಹೇಳುತ್ತಾರೆ. ಕುಡಿಯುವ ನೀರು ಪೂರೈಕೆಗೆ ಹಣವಿಲ್ಲವೆಂದರೆ ಜನರ ಸಂಕಷ್ಟವನ್ನು ಯಾರು ಕೇಳಬೇಕೆಂದು ಅವರು ಪ್ರಶ್ನಿಸಿದರು.

ಶಾಸಕ ಹಂಪನಗೌಡ ಬಾದರ್ಲಿ ಎರಡು ಬಾರಿ ರಸ್ತೆಗೆ ಅಡಿಗಲ್ಲು ಹಾಕುತ್ತಾರೆ. ಇಪ್ಪತ್ತು ವರ್ಷದಿಂದ ವಳಬಳ್ಳಾರಿ ಏತನೀರಾವರಿ ಜಪ ಮಾಡುತ್ತಾರೆ. ಆದರೆ ನೀರಿನ ಸಮಸ್ಯೆ ನಿವಾರಣೆಗೆ ಗಮನ ಹರಿಸಿಲ್ಲವೆಂದು ಟೀಕಿಸಿದರು.

‘ದುರುಪಯೋಗ’
ಸಿಂಧನೂರು:
ಕುಷ್ಟಗಿ ಸಣ್ಣ ನೀರಾವರಿ ಇಲಾಖೆಯಿಂದ ರೌಡಕುಂದಾ ಬಳಿ ಗೊರೇಬಾಳ ಹಳ್ಳಕ್ಕೆ ಏತನೀರಾವರಿ ಯೋಜನೆಗೆ ₹2 ಕೋಟಿ ಮಂಜೂರಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಹಿರೇಗೌಡರ್ ಎಲ್ಲ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳದೆ ತಮ್ಮ ಸ್ವಂತ ಭೂಮಿಗೆ ಅನುಕೂಲವಾಗುವಂತೆ ಯೋಜನೆ ಮಾಡುತ್ತಿದ್ದಾರೆಂದು ವೆಂಕಟರಾವ್ ನಾಡಗೌಡ ಆರೋಪಿಸಿದರು.

ತಾವು ಶಾಸಕರಿದ್ದ ಅವಧಿಯಲ್ಲಿ ಸೋಮಲಾಪೂರ ಬಳಿ ಏತನೀರಾವರಿ ಯೋಜನೆಗೆ ನಿರ್ಧರಿಸಲಾಗಿತ್ತು. ಇದರಿಂದ ಸೋಮಲಾಪುರ, ಸಾಲಗುಂದಾ, ಗೊಬ್ಬರಕಲ್ ಗ್ರಾಮಗಳ ಕೆಳಭಾಗದ ರೈತರಿಗೆ ನೀರು ಲಭ್ಯವಾಗುತ್ತಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT