ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಜಗ–ಎಷ್ಟು ಸೋಜಿಗ!

ವಿಜ್ಞಾನ ವಿಶೇಷ
Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ

1. ಬೇಟೆಗಾರರ ಕಣ್ಣಿಗೆ ಗೋಚರವೇ ಆಗದಂತಹ ಅಥವಾ ಬಲಿಪ್ರಾಣಿ ಎಂದು ಗುರುತಿಸಲೇ ಆಗದಂತಹ ವಿಸ್ಮಯಕರ ಮಾರುವೇಷ ಧರಿಸಿಸುರುವ ಎರಡು ಪ್ರಾಣಿಗಳು ಚಿತ್ರ–1 ಮತ್ತು ಚಿತ್ರ–2ರಲ್ಲಿವೆ. ಈ ಪ್ರಾಣಿಗಳನ್ನು ಕೆಳಗಿನ ಪಟ್ಟಿಯಲ್ಲಿ ಪತ್ತೆ ಹಚ್ಚಬಲ್ಲಿರಾ?
ಅ.
ಹಕ್ಕಿ ಮರಿ
ಬ. ಪತಂಗ
ಕ. ಕಪ್ಪೆ        
ಡ. ಸರ್ಪ
ಇ. ಮಿಡತೆ    
ಈ. ಏಡಿ
ಉ. ಚಿಟ್ಟೆಯ ಮರಿಹುಳು

**
2. ಚಿತ್ರ–3 ಮತ್ತು ಚಿತ್ರ–4ರಲ್ಲಿರುವ ಪ್ರಾಣಿಗಳ ನೈಸರ್ಗಿಕ ವಾಸಕ್ಷೇತ್ರ ಒಂದೊಂದು ಭೂಖಂಡಗಳಿಗೆ ಸೀಮಿತವಾಗಿದೆ. ಅವು ಯಾವುವು ಗೊತ್ತೇ? ಜೊತೆಗೆ ಇಲ್ಲಿ ಪಟ್ಟಿ ಮಾಡಿರುವ ಪ್ರಾಣಿಗಳು ಮತ್ತು ಅವುಗಳ ನೈಸರ್ಗಿಕ ನೆಲೆಗಳನ್ನು ಸರಿಹೊಂದಿಸಿ:
1.
ಅನಕೊಂಡಾ             ಅ. ಯೂರೋಪ್‌
2. ಪ್ರೇರೀ ನಾಯಿ           ಬ. ಆಸ್ಟ್ರೇಲಿಯಾ
3. ಲಿಂಕ್ಸ್‌                     ಕ. ಉತ್ತರ ಅಮೆರಿಕ
4. ಗಿಬ್ಬನ್‌                    ಡ. ಆಫ್ರಿಕ
5. ಜೀವಾ                    ಇ. ದಕ್ಷಿಣ ಅಮೆರಿಕ
6. ಕೂವಾಲೇ               ಈ. ಏಷಿಯ

**
3. ಚಿತ್ರ–5 ಮತ್ತು ಚಿತ್ರ–6ರಲ್ಲಿರುವ ಮತ್ಸ್ಯಗಳನ್ನು ಗಮನಿಸಿ. ಅವುಗಳ ರೂಪಾನ್ವಯ ಹೆಸರುಗಳಿಂದಲೇ ಪ್ರಸಿದ್ಧವಾಗಿರುವ ಈ ಮೀನುಗಳನ್ನು ಗುರುತಿಸಬಲ್ಲಿರಾ?
ಅ.
ಚಿಟ್ಟೆ ಮೀನು          ಬ. ಜೀಬ್ರಾ ಮೀನು
ಕ. ಬಾವಲಿ ಮೀನು       ಡ. ದೆವ್ವ ಮೀನು
ಇ. ಗರಗಸ ಮೀನು      ಈ. ಕಡಲ ಕುದುರೆ
ಉ. ಬಲೂನು ಮೀನು    ಟ. ಹಾರುವ ಮೀನು

**
4. ವಿಚಿತ್ರ ವಿಸ್ಮಯ ರೂಪದ ಸಾಗರವಾಸಿ ಪ್ರಾಣಿಯೊಂದು ಚಿತ್ರ–7ರಲ್ಲಿದೆ. ಈ ಪ್ರಾಣಿ ಯಾವುದು?
ಅ.
ಅಷ್ಟ ಪದಿ
ಬ. ಜೆಲ್ಲಿ ಮೀನು
ಕ. ನಕ್ಷತ್ರ ಮೀನು
ಡ. ಕಟ್‌ಲ್‌ ಮೀನು

**
5. ಪ್ರತಿ ವರ್ಷ ಭಾರತಕ್ಕೆ ವಲಸೆ ಬಂದು ಹಿಂದಿರುಗುವ ಸುಪ್ರಸಿದ್ಧ ಹಕ್ಕಿ ‘ಸೈಬೀರಿಯನ್‌ ಕೊಕ್ಕರೆ’ ಚಿತ್ರ –8ರಲ್ಲಿದೆ. ಈ ಹಕ್ಕಿ ಬಂದು ತಂಗುವ ನಮ್ಮ ದೇಶದ ಅತ್ಯಂತ ಪ್ರಮುಖ ಪಕ್ಷಿಧಾಮ ಯಾವುದು?
ಅ.
ರಂಗನತಿಟ್ಟು    
ಬ. ಕೊಕ್ಕರೆ ಬೆಳ್ಳೂರು
ಕ. ವೇದಾಂತಗಳು
ಡ. ಭರತಪುರ
ಇ. ಗುಡವಿ

**
6. ಪುರಾತನ ಕೀಟಗಳು ಬಂಧನಗೊಂಡಿರುವ ಅದ್ಭುತ ‘ಪ್ರಾಣಿ ಪಳೆಯುಳಿಕೆ’ಯೊಂದು ಚಿತ್ರ–6ರಲ್ಲಿದೆ. ಈ ಪಳೆಯುಳಿಕೆ ಕೆಳಗಿನ ಯಾವ ಮಾಧ್ಯಮದಲ್ಲಿ ರೂಪುಗೊಂಡಿದೆ?
ಅ.
ಮರಳು ಶಿಲೆ
ಕ. ಸುಣ್ಣ ಶಿಲೆ
ಬ. ಆ್ಯಂಬರ್‌
ಡ. ಜೇಡಿ ಶಿಲೆ

**
7. ಪ್ರಾಚೀನ ಕಾಲದಲ್ಲಿ ಧರೆಯಲ್ಲಿ ನೆಲಸಿದ್ದ ‘ಡೈನೋಸಾರ್‌’ಗಳನ್ನು ದೈತ್ಯರು ಮತ್ತು ಕುಬ್ಜರು ಎಂದು ಎರಡು ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ– ಹೌದಲ್ಲ? ಎಲ್ಲ ದೈತ್ಯ ಡೈನೋಸಾರ್‌ಗಳ ವರ್ಗದ (ಚಿತ್ರ–10) ಹೆಸರೇನು ಗೊತ್ತೇ?
ಅ.
ಕೋಪೆಪಾಡ್ಸ್‌
ಬ. ಟೆಟ್ರಾಪಾಡ್‌್ಸ
ಕ. ಥೆರೋಪಾಡ್ಸ್‌
ಡ. ಸಾರೋಪಾಡ್ಸ್‌

**
8. ಸುಪ್ರಸಿದ್ಧ ಹಕ್ಕಿಗಳಾದ ‘ಪೆಂಗ್ವಿನ್‌’ಗಳ ಭಾರೀ ಹಿಂಡೊಂದು ಚಿತ್ರ–11ರಲ್ಲಿದೆ. ಪೆಂಗ್ವಿನ್‌ಗಳಲ್ಲಿ ಹಲವಾರು ಪ್ರಭೇದಗಳಿವೆ ಮತ್ತು ಭಾರೀ ಗಾತ್ರ ವೈವಿಧ್ಯವೂ ಇದೆ. ಪೆಂಗ್ವಿನ್‌ಗಳ ಅತ್ಯಂತ ದೈತ್ಯ ಮತ್ತು ಅತ್ಯಂತ ಕುಬ್ಜ ಪ್ರಭೇಧಗಳನ್ನು ಈ ಪಟ್ಟಿಯಲ್ಲಿ ಗುರುತಿಸಿ:
ಅ.
ಅಡೆಲೀ ಪೆಂಗ್ವಿನ್‌     
ಬ. ಬ್ಲೂ ಪೆಂಗ್ವಿನ್‌
ಕ. ಎಂಪರರ್‌ ಪೆಂಗ್ವಿನ್‌     
ಡ. ಜೆಂಟೂ ಪೆಂಗ್ವಿನ್‌
ಇ. ಕಿಂಗ್‌ ಪೆಂಗ್ವಿನ್‌  
ಈ. ಕೇಪ್‌ ಪೆಂಗ್ವಿನ್‌

**
9. ಅಗಾಧ ಗಾತ್ರದ, ಭೀಮಬಲದ ಸ್ತನಿವರ್ಗದ ವಿಖ್ಯಾತ ಪ್ರಾಣಿ ‘ಹಿಪ್ಪೊಪೊಟಾಮಸ್‌’ ಚಿತ್ರ–12 ರಲ್ಲಿದೆ. ಈ ಪ್ರಾಣಿಯ ಪ್ರಧಾನ ಆಹಾರ ಯಾವುದು?
ಅ.
ಸಸ್ಯಗಳು
ಬ. ಹಣ್ಣುಗಳು
ಕ. ಮಾಂಸಾಹಾರ
ಡ. ಮಿಶ್ರಾಹಾರ

**
10. ಧರೆಯಲ್ಲಿ ಮಂಗಗಳ ನೂರಾರು ಪ್ರಭೇದಗಳಿವೆ (ಚಿತ್ರ–13). ಅವುಗಳನ್ನು ‘ಹಳೆಯ ಜಗತ್ತಿನ ಮಂಗಗಳು’ ಮತ್ತು ‘ಹೊಸ ಜಗತ್ತಿನ ಮಂಗಗಳು’ ಎಂದು ವರ್ಗೀಕರಿಸಲಾಗಿದೆ. ಕೆಳಗಿನ ಪಟ್ಟಿಯಲ್ಲಿ ಹೊಸ ಜಗತ್ತಿನ ಎಂದರೆ ಮಧ್ಯ ಮತ್ತು ದಕ್ಷಿಣ ಅಮೆರಿಕದ ಮಂಗಗಳು ಯಾವುವು?
ಅ.
ಲಂಗೂರ್‌         
ಬ. ಬಬೂನ್‌
ಕ. ಅಳಿಲು ಮಂಗ    
ಡ. ಮೆಕಾಕ್‌
ಇ. ಗೂಬೆ ಮಂಗ      
ಈ. ಜೇಡ ಕೋತಿ
ಉ. ಮ್ಯಾಂಡ್ರಿಲ್‌      
ಟ. ಪ್ರೊಬೋಸಿಸ್‌ ಮಂಗ
ಣ. ಹೌಲರ್‌ ಮಂಗ  
ಸ. ಕೊಲೋಬಸ್‌ ಮಂಗ

**
11. ವಿಚಿತ್ರ ರೂಪದ, ರೋಮಭರಿತ ಶರೀರದ ಮಂದ ಚಲನೆಯ ಪ್ರಾಣಿಯೊಂದು ಚಿತ್ರ–14ರಲ್ಲಿದೆ. ಈ ಪ್ರಾಣಿ ಗೊತ್ತೇ?
ಅ.
ಮುಳ್ಳು ಹಂದಿ
ಬ. ಕರಡಿ
ಕ. ಸ್ಲಾತ್‌
ಡ. ಪಾಂಡಾ
ಇ. ಗ್ರಿಜ್ಲೀ

**
12. ಹೊಂದಿಸಿ ಕೊಡಿ:
1.
ನಾಟಿಲಸ್‌       ಅ. ಕೀಟ
2. ಕರಿ ವಿಧವೆ       ಬ. ಸರ್ಪ
3. ಘವಿಯಲ್‌       ಕ. ಬೆಕ್ಕು
4. ನಾರ್ವಾಲ್‌      ಡ. ಮೀನು
5. ಮಾರ್ಗೇ        ಇ. ಮೊಸಳೆ
6. ಆರ್ಡಿ            ಈ. ಹಕ್ಕಿ
7. ಮ್ಯಾಂಟಿಸ್‌    ಉ. ತಿಮಿಂಗಿಲ
8. ಪಫರ್‌          ಟ. ಜೇಡ
9. ಗನೆಟ್‌         ಣ. ಮೃದ್ವಂಗಿ
10. ಆ್ಯಡರ್‌       ಸ. ಮಾನವ ಪೂರ್ವಜ
**

ಉತ್ತರಗಳು

1. ಚಿತ್ರ– 1 ಮಿಡತೆ; ಚಿತ್ರ–2 ಕಪ್ಪೆ
2. ಚಿತ್ರ–3 ಜಿರಾಫ್‌–ಆಫ್ರಿಕ; ಚಿತ್ರ–4 ಕಾಂಗರೂ–ಆಸ್ಟ್ರೇಲಿಯಾ.
1–ಇ; 2–ಕ; 3–ಅ; 4–ಈ; 5–ಡ; 6–ಬ.
3. ಚಿತ್ರ–5 ಬಾವಲಿ ಮೀನು; ಚಿತ್ರ 6–ಕಡಲ ಕುದುರೆ
4. ಬ. ಜೆಲ್ಲಿ ಮೀನು
5. ಡ. ಭರತಪುರ ಪಕ್ಷಿಧಾಮ..
6. ಬ. ಆ್ಯಂಬರ್‌
7. ಡ. ಸಾರೋಪಾಡ್ಸ್‌
8. ಅತ್ಯಂತ ದೈತ್ಯ– ಎಂಪರರ್‌ ಪೆಂಗ್ವಿನ್‌; ಅತ್ಯಂತ ಕುಬ್ಜ– ನೀಲಿ ಪೆಂಗ್ವಿನ್‌.
9. ಅ. ಸಸ್ಯಗಳು
10. ಕ,ಇ,ಈ,ಣ.
11. ಕ. ಸ್ಲಾತ್‌
12.1–ಣ; 2–ಟ; 3–ಇ; 4–ಉ; 5–ಕ; 6–ಸ; 7–ಅ; 8–ಡ; 9–ಈ; 10–ಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT